Advertisement

“ಮಾಲ್ದಾರೆ ಸ.ಸಂ. ವಿರುದ್ಧದ ಆರೋಪ ನಿರಾಧಾರ’

04:41 PM Apr 10, 2017 | Team Udayavani |

ಮಡಿಕೇರಿ:  ಮಾಲ್ದಾರೆ ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಿಂದ ಭಾರೀ ಪ್ರಮಾಣದ ಕರಿಮೆಣಸು ದಾಸ್ತಾನು ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರು ಆಡಳಿತ ಮಂಡಳಿಯ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದೆ ಎಂದು ಸಂಘದ ಅಧ್ಯಕ್ಷ ಚೇರಂಡ ನಂದಾ ಸುಬ್ಬಯ್ಯ ಸ್ಪಷ್ಟಪಡಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪ ಮಾಡುತ್ತಿರುವವರು ಸೂಕ್ತ ದಾಖಲೆಗಳಿದ್ದಲ್ಲಿ ತನಿಖಾಧಿಕಾರಿ ಗಳಿಗೆ ನೀಡಿ ಕಾನೂನಾತ್ಮಕ ಕರ್ತವ್ಯವನ್ನು ಮೆರೆಯಲಿ ಎಂದು ಒತ್ತಾಯಿಸಿದರು.

Advertisement

ಸಂಘದ‌ಲ್ಲಿ ದಾಸ್ತಾನಿರಿಸಲಾಗಿದ್ದ ಸಿದ್ದಾರುಕ  ವರ್ತಕರೊಬ್ಬರ ಅಂದಾಜು 48 ಲಕ್ಷ ಮೌಲ್ಯದ 104 ಚೀಲ (7345 ಕೆ.ಜಿ.) ಕರಿಮೆಣಸು ಕಾಣೆಯಾಗಿರುವ ವಿಚಾರ ಮಾರ್ಚ್‌ 3ರಂದು ಬೆಳಕಿಗೆ ಬಂದಿದೆ.

ಈ ಬಗ್ಗೆ ಸಂಘದ ಆಡಳಿತ ಮಂಡಳಿ ತತ್‌ಕ್ಷಣ ಕಾರ್ಯ ಪ್ರವೃತ್ತವಾಗಿದೆ ಮತ್ತು ಈ ಸಂಬಂಧ ದಾಸ್ತಾನಿನ ಉಸ್ತುವಾರಿ ಹೊತ್ತಿದ್ದ ಮೈಕಲ್‌ ಎಂಬವರ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ದೂರನ್ನು ದಾಖಲಿಸಿದೆ. ಪ್ರಸ್ತುತ ಈ ಸಂಬಂಧ ಪೊಲೀಸ್‌ ತನಿಖೆ ಹಾಗೂ ಸಹಕಾರ ಇಲಾಖಾ ತನಿಖಾ ಕಾರ್ಯ 
ಪ್ರಗತಿಯಲ್ಲಿದೆ. ಘ‌ಟನೆಗೆ ಸಂಬಂಧಿಸಿದಂತೆ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ವಿರುದ್ಧದ ಆರೋಪಗಳು ಸತ್ಯವಲ್ಲವೆಂದು ಚೇರಂಡ ನಂದಾ ಸುಬ್ಬಯ್ಯ ಅವರು ತಿಳಿಸಿದರು. 

ಪ್ರಕರಣವನ್ನು ಮುಂದಿಟ್ಟುಕೊಂಡು ವ್ಯಕ್ತಿಗತ ತೇಜೋವಧೆ ಮಾಡುವ ಉದ್ದೇಶದಿಂದ ಸಂಘದ ಸದಸ್ಯರಲ್ಲದವರು ತಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ತಮ್ಮ ಆರೋಪಗಳಿಗೆ ಸೂಕ್ತ ದಾಖಲೆಗಳಿದ್ದರೆ ತನಿಖಾಧಿಕಾರಿಗಳಿಗೆ ಒದಗಿಸಲಿ ಎಂದು ಒತ್ತಾಯಿಸಿದರು.

ಮಾಲ್ದಾರೆ ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ಜಿಲ್ಲೆಯಲ್ಲೆ ಮುಂಚೂಣಿಯಲ್ಲಿರುವ ಸಹಕಾರ ಸಂಘವಾಗಿದ್ದು, 1991ರಲ್ಲಿ ಕೆೇವಲ 12 ಲಕ್ಷ ರೂ.ಗಳಷ್ಟು ವಾರ್ಷಿಕ ವಹಿವಾಟು ನಡೆದಿದೆ. ಸಂಘ ಪ್ರಸ್ತುತ 75 ಕೊಟಿ ರೂ. ವಹಿವಾಟನ್ನು ನಡೆಸಿಕೊಂಡು ಬರುತ್ತಿದೆ. ಸಂಘದ ಮೂಲಕ 1,600 ರಷ್ಟಿರುವ ಸದಸ್ಯರಿಗೆ ಕೃಷಿ ಸಾಲ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸಂಘ ಒದಗಿಸುತ್ತಿದೆ. ಸಂಘವು ತನ್ನ ದಾಸ್ತಾನಿನಲ್ಲಿ ವರ್ಷಂಪ್ರತಿ 350ರಿಂದ 450 ಟನ್‌ನಷ್ಟು ಕಾಫಿ ಕರಿ ಮೆಣಸನ್ನು ದಾಸ್ತಾನಿರಿಸಿಕೊಂಡು, ದಾಸ್ತಾನಿನ ಮೇಲೆ ಸಾಲ ಸೌಲಭ್ಯವನ್ನು ನೀಡುತ್ತಾ ಬರುತ್ತಿದೆಯೆಂದು ಮಾಹಿತಿ ನೀಡಿದರು.

Advertisement

ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿ ರುವ ಸಂಘದ ದಾಸ್ತಾನಿನಿಂದ ಕರಿಮೆಣಸು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ.ಈ ಹಂತದಲ್ಲಿ ಸಂಘದ ಏಳಿಗೆಯನ್ನು ಸಹಿಸದ ಸ್ವಹಿತಾಸಕ್ತಿ ಗಳು ಸಂಘದ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಸಿವೆ ಎಂದು ಟೀಕಿಸಿದರು.
 
ಘಟನೆಗೆ ಸಂಬಂಧಿಸಿದಂತೆ ಯಾವುದೇ ತನಿಖೆಗೆ ಸಿದ್ಧ ಇರುವುದಾಗಿ ಅವರು ತಿಳಿಸಿದರು.ಸತ್ಯಾಸತ್ಯತೆಯ ಬಗ್ಗೆ ಚರ್ಚಿಸಲು ಸಂಘದ ಸದಸ್ಯರ ಹಾಗೂ ಗ್ರಾಹಕರ ಸಭೆ ಕರೆಯಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ರಾಮಕೃಷ್ಣ, ನಿರ್ದೇಶಕರಾದ ಚಿಣ್ಣಪ್ಪ, ಜೋಯಪ್ಪ ಹಾಗೂ ಸಿ.ಎ. ಹಂಸ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next