Advertisement

ಸ್ಮಾರ್ಟ್‌ಫೋನ್‌ ಸ್ಫೋಟ: ಸಿಇಒ ಸಾವು

09:00 AM Jun 22, 2018 | Team Udayavani |

ಕೌಲಾಲಂಪುರ: ಮಲೇಷ್ಯಾದ ಕ್ರಾಡಲ್‌ ಫ‌ಂಡ್‌ ಸಂಸ್ಥೆಯ ಸಿಇಒ ನಸ್ರೀನ್‌ ಹಸನ್‌ ಸ್ಮಾರ್ಟ್‌ ಫೋನ್‌ ಸ್ಫೋಟದಿಂದಾಗಿ ಸಾವನ್ನಪ್ಪಿದ್ದಾರೆ. ರಾತ್ರಿ ಸಮೀಪವೇ ಫೋನ್‌ ಚಾರ್ಜ್‌ಗಿಟ್ಟು ಮಲಗಿದ್ದರು. ಫೋನ್‌ ಸ್ಫೋಟಗೊಂಡು ಹಾಸಿಗೆಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ನಸ್ರೀನ್‌ ಬಳಿ ಎರಡು ಸ್ಮಾರ್ಟ್‌ಫೋನ್‌ಗಳಿದ್ದವು. ಆದರೆ ಅದರಲ್ಲಿ ಯಾವ ಸ್ಮಾರ್ಟ್‌ಫೋನ್‌ ಸ್ಫೋಟಗೊಂಡಿದೆ ಎಂಬುದು ತಿಳಿದುಬಂದಿಲ್ಲ. ನಸ್ರೀನ್‌ ಸೋದರ ಕ್ರಾಡಲ್‌ ಫ‌ಂಡ್‌, ಮಲೇಷ್ಯಾದ ಸ್ಟಾರ್ಟಪ್‌ ಗಳಿಗೆಗೆ ಹೂಡಿಕೆ ಮಾಡುವ ಮಲೇಷ್ಯಾ ಸರ್ಕಾರದ ಅಂಗಸಂಸ್ಥೆಯಾಗಿದೆ. ಕಳೆದ 15 ವರ್ಷಗಳಿಂದಲೂ ನಸ್ರೀನ್‌ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next