Advertisement

Malaysia Open Super 1000: ಪ್ರಶಸ್ತಿ ಸುತ್ತಿನಲ್ಲಿ ಚಿರಾಗ್‌-ಸಾತ್ವಿಕ್‌

11:39 PM Jan 13, 2024 | Team Udayavani |

ಕೌಲಾಲಂಪುರ: ಏಷ್ಯನ್‌ ಗೇಮ್ಸ್‌ ಬಂಗಾರ ವಿಜೇತ ಜೋಡಿಯಾದ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ವರ್ಷದ ಮೊದಲ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲೇ ಪ್ರಶಸ್ತಿಗೆ ಹತ್ತಿರವಾಗಿದ್ದಾರೆ. ಇವರು “ಮಲೇಷ್ಯಾ ಓಪನ್‌ ಸೂಪರ್‌ 1000′ ಕೂಟದ ಫೈನಲ್‌ ತಲುಪಿದ್ದಾರೆ.

Advertisement

ವಿಶ್ವ ರ್‍ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿರುವ ಚಿರಾಗ್‌-ಸಾತ್ವಿಕ್‌ ಶನಿವಾರದ ಜಿದ್ದಾಜಿದ್ದಿ ಸೆಮಿಫೈನಲ್‌ ಪಂದ್ಯದಲ್ಲಿ ಕೊರಿಯಾದ ವಿಶ್ವ ಚಾಂಪಿಯನ್ನರಾದ ಸೆವೊ ಸೆಯುಂಗ್‌ ಜೇ-ಕಾಂಗ್‌ ಮಿನ್‌ ಅವರನ್ನು 21-18, 22-20 ಅಂತರದಿಂದ ಮಣಿಸಿದರು.

ಫೈನಲ್‌ ಗೆದ್ದರೆ ಚಿರಾಗ್‌-ಸಾತ್ವಿಕ್‌ಗೆ 2ನೇ ಸೂಪರ್‌ 1000 ಪ್ರಶಸ್ತಿ ಒಲಿದಂತಾಗುತ್ತದೆ. ಮೊದಲ ಸೂಪರ್‌ 1000 ಪ್ರಶಸ್ತಿ ಕಳೆದ ಜೂನ್‌ನಲ್ಲಿ “ಇಂಡೋನೇಷ್ಯನ್‌ ಓಪನ್‌’ನಲ್ಲಿ ಒಲಿದಿತ್ತು. ಅಂದಿನ ಸೆಮಿಫೈನಲ್‌ನಲ್ಲೂ ಇವರಿಗೆ ಇದೇ ಕೊರಿಯನ್‌ ಜೋಡಿ ಎದುರಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next