Advertisement

ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌-ಚಿರಾಗ್‌ಗೆ ಸೋಲು

10:58 PM Jan 14, 2023 | Team Udayavani |

ಕೌಲಾಲಂಪುರ: ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಕೂಟದಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರ ಅಮೋಘ ಆಟ ಸೆಮಿಫೈನಲ್‌ನಲ್ಲಿ ಅಂತ್ಯಗೊಂಡಿದೆ. ಮೂರು ಗೇಮ್‌ಗಳ ಹೋರಾಟದಲ್ಲಿ ಅವರು ಚೀನದ ಲಿಯಾಂಗ್‌ ವೈ ಕೆಂಗ್‌ ಮತ್ತು ವಾಂಗ್‌ ಚಾಂಗ್‌ ಅವರ ಕೈಯಲ್ಲಿ ಸೋತು ಹೊರಬಿದ್ದರು.

Advertisement

ವಿಶ್ವದ ಐದನೇ ರ್‍ಯಾಂಕಿನ ಭಾರತೀಯ ಆಟಗಾರರು ಗೆಲುವು ದಾಖಲಿಸಲು ಬಹಳಷ್ಟು ಶ್ರಮ ವಹಿಸಿದರು. ಆದರೆ ಅಂತಿಮವಾಗಿ 21-16, 11-21, 21-15 ಗೇಮ್‌ಗಳಿಂದ ಸೋತರು. ಈ ಗೆಲುವಿನಿಂದ ಕೆಂಗ್‌ ಮತ್ತು ಚಾಂಗ್‌ ಮೊದಲ ಬಾರಿ ಫೈನಲಿಗೇರಿದ ಸಾಧನೆ ಮಾಡಿದರು.

ಸಾತ್ವಿಕ್‌-ಚಿರಾಗ್‌ ಅವರಿಗಿದು ಸೂಪರ್‌ 1000 ಕೂಟದಲ್ಲಿ ಮೂರನೇ ಸೆಮಿಫೈನಲ್‌ ಪಂದ್ಯವಾಗಿದೆ. ಸಾತ್ವಿಕ್‌-ಚಿರಾಗ್‌ ಅವರು ಮುಂದಿನ ವಾರ ಹೊಸದಿಲ್ಲಿಯಲ್ಲಿ ನಡೆಯಲಿರುವ ಇಂಡಿಯಾ ಓಪನ್‌ ಸೂಪರ್‌ 750 ಕೂಟದಲ್ಲಿ ಆಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next