ಕೌಲಾಲಂಪುರ: ಭಾರೀ ಭರವಸೆ ಮೂಡಿಸಿದ ಪಿ.ವಿ. ಸಿಂಧು ಮತ್ತು ಎಚ್.ಎಸ್. ಪ್ರಣಯ್ ಕ್ವಾರ್ಟರ್ ಫೈನಲ್‌ನಲ್ಲಿ ಪರಾಭವಗೊಂಡು “ಮಲೇಷ್ಯಾ ಓಪನ್’ ಬ್ಯಾಡ್ಮಿಂಟನ್ ಪಂದ್ಯಾವಳಿಯಿಂದ ಹೊರಬಿದ್ದರು.
Advertisement
7ನೇ ಶ್ರೇಯಾಂಕದ ಸಿಂಧು ಅವರನ್ನು ಚೈನೀಸ್ ತೈಪೆಯ ತೈ ಜು ಯಿಂಗ್ 13-21, 21-15, 21-13 ಅಂತರದಿಂದ ಹಿಮ್ಮೆಟ್ಟಿಸಿದರು. ಇದರೊಂದಿಗೆ ಸಿಂಧು ವಿರುದ್ಧ ಯಿಂಗ್ ಗೆಲುವಿನ ಅಂತರ 16-5ಕ್ಕೆ ಏರಿತು.
ಎಚ್.ಎಸ್. ಪ್ರಣಯ್ ಅವರನ್ನು 7ನೇ ಶ್ರೇಯಾಂಕದ ಜೊನಾಥನ್ ಕ್ರಿಸ್ಟಿ 21-18, 21-16ರಿಂದ ಪರಾಭವಗೊಳಿಸಿದರು.