Advertisement
ಕೆ. ಶ್ರೀಕಾಂತ್ ಈ ಪಂದ್ಯವನ್ನು 12-21, 21-18, 21-16 ಅಂತರದಿಂದ ತಮ್ಮದಾಗಿಸಿಕೊಂಡರು. 65 ನಿಮಿಷಗಳ ಕಾಲ ಇವರ ಹೋರಾಟ ಸಾಗಿತು. ಶ್ರೀಕಾಂತ್ ಅವರಿನ್ನು ಮಾಜಿ ನಂ.1 ಆಟಗಾರ, ಹಾಂಕಾಂಗ್‌ನ ಎನ್‌ಜಿ ಲಾಂಗ್ ಆ್ಯಂಗುಸ್ ವಿರುದ್ಧ ಸೆಣಸಲಿದ್ದಾರೆ.ಮೊದಲ ಗೇಮ್ ಕಳೆದುಕೊಂಡಾಗ, 2ನೇ ಗೇಮ್ ಅತ್ಯಂತ ನಿಕಟ ಸ್ಪರ್ಧೆ ಕಂಡಾಗ ಶ್ರೀಕಾಂತ್ ಮೊದಲ ಸುತ್ತಿನ ಆಘಾತಕ್ಕೆ ಸಿಲುಕುವ ಸಾಧ್ಯತೆ ಇತ್ತು. ದ್ವಿತೀಯ ಗೇಮ್‌ನ ಆರಂಭದಲ್ಲಿ ಶ್ರೀಕಾಂತ್ 4-0 ಮುನ್ನಡೆ ಸಾಧಿಸಿದರೂ ಬಳಿಕ ಕ್ರಿಸ್ಟಿ ತಿರುಗಿ ಬಿದ್ದರು. 11-7, 17-14ರ ಮುನ್ನಡೆಯನ್ನೂ ಸಾಧಿಸಿದರು. ಆದರೆ ಅದೃಷ್ಟ ಭಾರತೀಯನ ಕಡೆ ಇತ್ತು.
ಕ್ರಿಸ್ಟಿ ವಿರುದ್ಧ ಆಡಿದ 11 ಪಂದ್ಯಗಳಲ್ಲಿ ಶ್ರೀಕಾಂತ್ ದಾಖಲಿಸಿದ 6ನೇ ಜಯ ಇದಾಗಿದೆ. ಆದರೆ ಪ್ರಥಮ ಸುತ್ತಿನಲ್ಲೇ ಜಯ ಒಲಿದದ್ದು ಇದೇ ಮೊದಲು. ತನಿಷಾ-ಅಶ್ವಿನಿ ಮುನ್ನಡೆ
ವನಿತಾ ಡಬಲ್ಸ್‌ನಲ್ಲಿ ತನಿಷಾ ಕ್ರಾಸ್ಟೊ-ಅಶ್ವಿನಿ ಪೊನ್ನಪ್ಪ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ. ಇವರು ಅಮೆರಿಕದ ಫ್ರಾನ್ಸೆಸ್ಕಾ ಕಾರ್ಬೆಟ್-ಅಲಿಸನ್ ಲೀ ವಿರುದ್ಧ 21-13, 21-16 ಅಂಕಗಳ ಜಯ ಸಾಧಿಸಿದರು. ಆದರೆ ವನಿತಾ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್, ಪುರುಷರ ಡಬಲ್ಸ್‌ನಲ್ಲಿ ಎಂ.ಆರ್. ಅರ್ಜುನ್-ಧ್ರುವ ಕಪಿಲ ಮೊದಲ ಸುತ್ತಲ್ಲೇ ಸೋಲನುಭವಿಸಿದ್ದಾರೆ.