Advertisement
ವಿಶ್ವದ 12ನೇ ರ್‍ಯಾಂಕಿನ ಡಬಲ್ಸ್ ಜೋಡಿ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಕಠಿನ ಹೋರಾಟದಲ್ಲಿ ಮಲೇಶ್ಯದ ಆಂಗ್ ಯ್ಯು ಸಿನ್ ಮತ್ತು ತಿಯೊ ಇ ಯಿ ಅವರೆದುರು 15-21, 21-18, 15-21 ಗೇಮ್‌ಗಳಿಂದ ಶರಣಾದರು. ಪೂಜಾ ದಂಡು ಮತ್ತು ಸಂಜನಾ ಸಂತೋಷ್ ಅವರನ್ನು ಒಳಗೊಂಡ ವನಿತಾ ಡಬಲ್ಸ್ ಜೋಡಿ ಈ ಮೊದಲು ಅರ್ಹತಾ ಸುತ್ತಿನಲ್ಲಿಯೇ ಸೋತಿತ್ತು.
ಪಾರುಪಳ್ಳಿ ಕಶ್ಯಪ್ ಅವರು ಬುಧವಾರ ಅಗ್ರ ಶ್ರೇಯಾಂಕದ ಕೆಂಟೊ ಮೊಮೊಟ ಅವರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಕಿದಂಬಿ ಶ್ರೀಕಾಂತ್ ಇನ್ನೊಂದು ಪಂದ್ಯದಲ್ಲಿ ದ್ವಿತೀಯ ಶ್ರೇಯಾಂಕದ ಚೈನೀಸ್ ತೈಪೆಯ ಚೊ ತಿಯಾನ್ ಚೆನ್ ಅವರ ಸವಾಲಿಗೆ ಉತ್ತರಿಸಲಿದ್ದಾರೆ. ಸಮೀರ್ ವರ್ಮ, ಎಚ್.ಎಸ್. ಪ್ರಣಯ್ ಮತ್ತು ಬಿ. ಸಾಯಿಪ್ರಣೀತ್ ಕೂಡ ಬುಧವಾರ ಮೊದಲ ಸುತ್ತಿನಲ್ಲಿ ಆಡಲಿದ್ದಾರೆ. ವನಿತೆಯರ ಸಿಂಗಲ್ಸ್‌ನಲ್ಲಿ ಆರನೇ ಶ್ರೇಯಾಂಕದ ಪಿ.ವಿ. ಸಿಂಧು ರಶ್ಯದ ಎವ್‌ಗೇನಿಯಾ ಕೊಸೆಟ್ಸ್ ಕಾಯ ಅವರನ್ನು ಎದುರಿಸಲಿದ್ದರೆ ಸೈನಾ ನೆಹ್ವಾಲ್ ಅವರು ಬೆಲ್ಜಿಯಂನ ಲಿಯಾನ್ನೆ ತಾನ್ ಅವರ ಸವಾಲಿಗೆ ಉತ್ತರಿಸಲಿದ್ದಾರೆ.
Related Articles
ಭರವಸೆಯ ಶಟ್ಲರ್ ಲಕ್ಷ್ಯಸೇನ್ ಮಲೇಶ್ಯ ಮಾಸ್ಟರ್ ಕೂಟದ ಅರ್ಹತಾ ಸುತ್ತಿನಲ್ಲಿ ಸೋತು ಕೂಟದಿಂದ ಹೊರಬಿದ್ದಿದ್ದಾರೆ. ಮೂರು ಗೇಮ್‌ಗಳ ಕಠಿನ ಹೋರಾಟದಲ್ಲಿ ಅವರು ಡೆನ್ಮಾರ್ಕ್‌ನ ಹ್ಯಾನ್ಸ್ ಕ್ರಿಸ್ಟಿಯನ್ ಸೋಲ್ಬರ್ಗ್ ವಿಟ್ಟಿಂಗಸ್ ಅವರೆದುರು 21-11, 18-21, 14-21 ಗೇಮ್‌ಗಳಿಂದ ಶರಣಾದರು.
Advertisement
ಸೇನ್ ಅವರ ತಂಡಸದಸ್ಯ ಶುಭಂಕರ್ ದೇವ್ ಕೂಡ ಮುಖ್ಯ ಡ್ರಾಕ್ಕೆ ತೇರ್ಗಡೆಯಾಗಲು ವಿಫಲರಾಗಿದ್ದಾರೆ. ಅವರು ಅರ್ಹತಾ ಸುತ್ತಿನಲ್ಲಿ ಮಲೇಶ್ಯದ ಲಿಯು ಡ್ಯಾರೆನ್ ಅವರಿಗೆ 15-21, 15-21 ಗೇಮ್‌ಗಳಿಂದ ಸೋತು ಹೊರಬಿದ್ದರು.