Advertisement

ಮಲೇಶ್ಯ: ಸೆಮಿಫೈನಲ್‌ಗೆ ಏರಲು ಸಿಂಧು, ಸೈನಾ ವಿಫ‌ಲ

10:15 AM Jan 11, 2020 | Team Udayavani |

ಕೌಲಾಲಂಪುರ: ಕಳೆದ ವರ್ಷವನ್ನು ಬಹುತೇಕ ನಿರಾಸೆಯಲ್ಲೇ ಮುಗಿಸಿದ ಭಾರತದ ಬ್ಯಾಡ್ಮಿಂಟನ್‌ಗೆ ನೂತನ ವರ್ಷಾರಂಭ ಕೂಡ ಹರುಷವನ್ನು ತಂದಿಲ್ಲ. “ಮಲೇಶ್ಯ ಮಾಸ್ಟರ್ ಸೂಪರ್‌ 500′ ಬ್ಯಾಡ್ಮಿಂಟನ್‌ ಕೂಟದ ಕ್ವಾರ್ಟರ್‌ ಫೈನಲ್‌ನಲ್ಲಿ ತಾರಾ ಆಟಗಾರ್ತಿಯರಾದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್‌ ಸೋಲು ಕಂಡಿದ್ದಾರೆ. ಇದರೊಂದಿಗೆ ಭಾರತದ ಸವಾಲು ಅಂತ್ಯಗೊಂಡಿದೆ.

Advertisement

ಶುಕ್ರವಾರ ನಡೆದ ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಖ್ಯಾತಿಯ ಪಿ.ವಿ. ಸಿಂಧು, ಚೈನೀಸ್‌ ತೈಪೆಯ ಅಗ್ರ ಶ್ರೇಯಾಂಕಿತ ಆಟಗಾರ್ತಿ ತೈ ಜು ಯಿಂಗ್‌ ವಿರುದ್ಧ 16-21, 16-21 ನೇರ ಗೇಮ್‌ಗಳ ಸೋಲನುಭವಿಸಿದರು.

ಮತ್ತೂಂದು ಕ್ವಾರ್ಟರ್‌ ಫೈನಲ್‌ನಲ್ಲಿ ಸೈನಾ ನೆಹ್ವಾಲ್‌ ಸ್ಪೇನಿನ ಕ್ಯಾರೋಲಿನಾ ಮರಿನ್‌ಗೆ ಸಾಟಿಯಾಗಲೇ ಇಲ್ಲ. ಒಲಿಂಪಿಕ್‌ ಚಾಂಪಿಯನ್‌ ಖ್ಯಾತಿಯ ಮರಿನ್‌ 21-8, 21-7 ಅಂಕಗಳಿಂದ ಸೈನಾಗೆ ಆಘಾತವಿಕ್ಕಿದರು.

Advertisement

Udayavani is now on Telegram. Click here to join our channel and stay updated with the latest news.

Next