Advertisement

ಬೇಕೆಂದೇ ವಿಮಾನ ಪಥ ಬದಲು?

06:00 AM Jul 31, 2018 | Team Udayavani |

ಕೌಲಾಲಂಪುರ: ಮಲೇಷ್ಯಾ ಏರ್‌ಲೈನ್ಸ್‌ನ ಎಂಎಚ್‌ 370 ವಿಮಾನ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ವರ್ಷಗಳ ನಂತರ ಸ್ವತಂತ್ರ ತನಿಖೆ ಬಿಡುಗಡೆಯಾಗಿದ್ದು, ವಿಮಾನದ ಅವಶೇಷ ಪತ್ತೆಯಾಗದೇ ನಾಪತ್ತೆಗೆ ನಿಖರ ಕಾರಣ ಕಂಡುಕೊಳ್ಳುವುದು ಅಸಾಧ್ಯ ಎಂದಿದೆ. ಉದ್ದೇಶಪೂರ್ವಕವಾಗಿ ವಿಮಾನದ ಪಥ ಬದಲಿಸಲಾಗಿದೆ ಮತ್ತು ಏಳು ಗಂಟೆಗಳವರೆಗೆ ಸಂವಹನ ತಪ್ಪಿಸಲಾಗಿದೆ. ಮೂರನೆಯವರ ಹಸ್ತಕ್ಷೇಪ ಇರುವುದನ್ನು ತಳ್ಳಿಹಾಕಲಾಗದು ಎಂದು ವರದಿಯಲ್ಲಿ ವಿವರಿಸಲಾಗಿದೆ.

Advertisement

ಕೌಲಾಲಂಪುರದಿಂದ ಬೀಜಿಂಗ್‌ಗೆ ಹೊರಟಿದ್ದ ವಿಮಾನ 2014 ಮಾ.8ರಂದು ನಾಪತ್ತೆಯಾಗಿತ್ತು.  239 ಮಂದಿ ಮೃತ ಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದು, ಹಿಂದು ಮಹಾಸಾಗರದಲ್ಲಿ ವಿಮಾನ ಬಿದ್ದಿದೆ ಎಂದ ಊಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next