Advertisement

ಮಲಯಾಲಂ ಖ್ಯಾತ ನಿರ್ದೇಶಕ 37ರ ಹರೆಯದ ನರನಿಪುಲ ಶಾನವಾಸ್ ನಿಧನ

10:39 AM Dec 24, 2020 | keerthan |

ಕೊಚ್ಚಿ: ಮಲಯಾಲಂ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ನರನಿಪುಲ ಶಾನವಾಸ್ (37 ವ) ಅವರು ಕಳೆದ ರಾತ್ರಿ ನಿಧನ ಹೊಂದಿದ್ದಾರೆ. ಕಳೆದ ಸೋಮವಾರ ಹೃದಯಾಘಾತಕ್ಕೆ ಒಳಗಾಗಿದ್ದ ಶಾನವಾಸ್ ನಿನ್ನೆ ತಡರಾತ್ರಿ ಅಸುನೀಗಿದ್ದಾರೆ.

Advertisement

ಕಳೆದ ಸೋಮವಾರ ( ಡಿ.21) ರಂದು ಚಿತ್ರೀಕರಣ ಸೆಟ್ ನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಮುಂದಿನ ಚಿತ್ರ ಗಾಂಧಿರಾಜನ್ ಚಿತ್ರೀಕರಣದ ವೇಳೆ ಅನಾರೋಗ್ಯಕ್ಕೆ ಈಡಾದ ಅವರನ್ನು ಕೊಯಮ್ಮತ್ತೂರಿನ ಕೆಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಳೆದ ತಡರಾತ್ರಿ ನಿಧನರಾಗಿದ್ದಾರೆ.

ಇದನ್ನೂ ಓದಿ:‘ಜೊತೆ ಜೊತೆಯಲಿ’ ಧಾರಾವಾಹಿ ಚೆಲುವೆ ‘ಮೇಘ ಶೆಟ್ಟಿ’ Sandlwood ಎಂಟ್ರಿ

ಶಾನವಾಸ್ ಅವರ ಈ ಹಿಂದಿನ ಚಿತ್ರ ‘ಸುಫಿಯುಮ್ ಸುಜಾತಯುಮ್’ ಹಿಟ್ ಆಗಿತ್ತು. ಜಯಸೂರ್ಯ, ಅಸಿತಿ ರಾವ್ ಹೈದರಿ ಮುಖ್ಯಭೂಮಿಕೆಯಲ್ಲಿದ್ದ ಚಿತ್ರ ಹಿಟ್ ಆಗಿತ್ತು. ಶಾನವಾಸ್ ನಿರ್ದೇಶನದ ಮೊದಲ ಚಿತ್ರ ‘ಕಾರಿ’ 2015ರಲ್ಲಿ ಬಿಡುಗಡೆಯಾಗಿತ್ತು.

ನರನಿಪುಲ ಶಾನವಾಸ್ ನಿಧನಕ್ಕೆ ಅದಿತಿ ರಾವ್ ಹೈದರಿ, ನಿರ್ಮಾಪಕ ವಿಜಯ್ ಬಾಬು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next