ತಿರುವನಂತಪುರಂ: ಅಮೆನ್ ಮಲಯಾಳಂ ಸಿನಿಮಾದಲ್ಲಿನ ಕೊಚ್ಚನ್ ಪಾತ್ರದ ಮೂಲಕ ಹೆಸರಾದ ನಟ ನಿರ್ಮಲ್ ಬೆನ್ನಿ (37ವರ್ಷ) ಶುಕ್ರವಾ (ಆ.23) ನಸುಕಿನ ವೇಳೆ ಹೃದಯಾಘಾತದಿಂದ ಕೊನೆಯುಸಿರೆಳೆದಿರುವುದಾಗಿ ಗೆಳೆಯ, ನಿರ್ಮಾಪಕ ಸಂಜಯ್ ಪಡಿಯೂರ್ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಪ್ರತಿಭಾವಂತ ನಟ ನಿರ್ಮಲ್ ಬೆನ್ನಿ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 37ನೇ ವಯಸ್ಸಿಗೆ ಇಹಲೋಹ ತ್ಯಜಿಸಿರುವುದು ತುಂಬಲಾರದ ಹಾಗೂ ಭರಿಸಲಾರದ ನಷ್ಟವಾಗಿದೆ ಎಂದು ಸಂಜಯ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ನೋವನ್ನು ಹಂಚಿಕೊಂಡಿದ್ದಾರೆ.
ಅಮೆನ್ ಸಿನಿಮಾದಲ್ಲಿ ಕೊಚ್ಚನ್ ಪಾತ್ರ ಮಾಡಿದ್ದು, ನನ್ನ ದೂರಂ ಚಿತ್ರದಲ್ಲಿ ಸೆಂಟ್ರಲ್ ಕ್ಯಾರೆಕ್ಟರ್ ನಲ್ಲಿ ಅಭಿನಯಿಸಿದ್ದ ನಿರ್ಮಲ್ ಇನ್ನಿಲ್ಲ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಗೆಳೆಯನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದಾಗಿ ಸಂಜಯ್ ಸಾಮಾಜಿಕ ಜಾಲತಾಣದಲ್ಲಿ ಉಲ್ಲೇಖಿಸಿದ್ದಾರೆ.
2012ರಲ್ಲಿ ನವಗಾಥರ್ಕ್ಕು ಸ್ವಾಗತಂ ಸಿನಿಮಾದಲ್ಲಿ ನಟಿಸುವ ಮೂಲಕ ನಿರ್ಮಲ್ ಸಿನಿಮಾರಂಗ ಪ್ರವೇಶಿಸಿದ್ದರು. ನಿರ್ಮಲ್ ಬೆನ್ನಿ ಈವರೆಗೆ ಐದು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿರ್ಮಲ್ ಅವರು ನಟನಾಗಿ ಹೆಚ್ಚು ಜನಪ್ರಿಯರಾಗಿದ್ದಕ್ಕಿಂತ ಯೂಟ್ಯೂಬ್ ವಿಡಿಯೋಗಳ ಮೂಲಕ ಗಮನ ಸೆಳೆದಿದ್ದರು.
ಇದನ್ನೂ ಓದಿ:Udupi: ಸವಾಲುಗಳ ನಡುವೆ ಡ್ರ್ಯಾಗನ್ ಫ್ರೂಟ್ ಬೆಳೆಗೆ ರೈತರ ಆಸಕ್ತಿ