ಗಿರೀಶ್ ಕಾರ್ನಾಡ್ ರಚಿಸಿ, ಟಿ.ಎಸ್. ನಾಗಾಭರಣ ನಿರ್ದೇಶಿಸಿ, ಪ್ರಕಾಶ್ ರೈ ನಟಿಸಿದ್ದ “ನಾಗಮಂಡಲ’ ಕನ್ನಡದ ಮನಸ್ಸುಗಳಿಗೆ ಚಿರಪರಿಚಿತ. ಅಲ್ಲಿನ ರಾಣಿಯ ವಿರಹದ ಕತೆ, ಹಾವಿನೊಂದಿಗಿನ ಪ್ರಣಯ, ಹೃದಯಕ್ಕೆ ಜೇನಿನ ಧಾರೆಯಿಂದ ಇಳಿಯುವ ಹಾಡುಗಳನ್ನು ಯಾರೂ, ಯಾವ ಕಾಲಕ್ಕೂ ಮರೆಯುವುದಿಲ್ಲ. ಕಾರ್ನಾಡರ ಇದೇ ನಾಟಕ ಮಲಯಾಳಂನ ಭೂಮಿಕೆಯಲ್ಲಿ ಕಲ್ಪಿಸಿಕೊಳ್ಳುವುದಾದರೆ ಹೇಗಿದ್ದೀತು? ಸುನಯನ ಪ್ರೇಮಚಂದರ್ ನಿರ್ದೇಶಿಸಿರುವ “ನಾಗಮಂಡಲ’ ನಾಟಕ ಈಗ ರಾಜಧಾನಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಕಾರ್ನಾಡರ ಕಥೆಯಷ್ಟೆಯೇ, ಶ್ರೀಹರಿ ಅಜಿತ್‌ರ ನಟನೆಯೂ ಇದರಲ್ಲಿನ ಹೈಲೈಟ್. ಮಲಯಾಳಂನಲ್ಲಿ ಈ ನಾಟಕ ಹೇಗೆ ಮೂಡಿಬಂದಿದೆ ಎಂಬ ಕುತೂಹಲವಿದ್ದವರು, ಇದನ್ನು ಕಣ್ತುಂಬಿಕೊಳ್ಳಬಹುದು.
ಯಾವಾಗ?: ಸೆ.8-9, ಶನಿ-ಭಾನುವಾರ, ರಾ.7.30
ಎಲ್ಲಿ?: ಶೂನ್ಯ, ಸೆಂಟರ್ ಫಾರ್ ಆರ್ಟ್ ಆ್ಯಂಡ್ ಸೊಮ್ಯಾಟಿಕ್ ಪ್ರಾಕ್ಟೀಸಸ್
ಪ್ರವೇಶ: 250 ರೂ.