Advertisement

ಇತಿಹಾಸ ಸೃಷ್ಟಿಸಿದ ಗೃಹಲಕ್ಷ್ಮಿ

08:15 AM Mar 01, 2018 | |

ತಿರುವನಂತಪುರಂ: ಸೆಲೆಬ್ರಿಟಿಗಳು ತಮ್ಮ ಮಗುವಿಗೆ ಹಾಲುಣಿಸುವ ಫೋಟೊಗಳು ವಿದೇಶಿ ನಿಯತಕಾಲಿಕೆ ಮುಖಪುಟಗಳಲ್ಲಿ ಕಂಡುಬರುವುದು ಸಾಮಾನ್ಯ. ಆದರೆ ಭಾರತಲ್ಲಿ ಮಗುವಿಗೆ ಸ್ತನ್ಯಪಾನ ಮಾಡಿಸುವ ಫೋಟೊಗಳನ್ನು ಇದುವರೆಗೂ ಯಾವುದೇ ನಿಯತ ಕಾಲಿಕೆ ಮುಖಪುಟದಲ್ಲಿ ಹಾಕುವ ಧೈರ್ಯ ಮಾಡಿಲ್ಲ. ಬಹಿರಂಗವಾಗಿ ಸ್ತನ್ಯ ಪಾನ ಮಾಡುವುದನ್ನೇ ಒಪ್ಪಿಕೊಳ್ಳದ ಸಮಾಜದಲ್ಲಿ, ತನ್ನ ಮುಖಪುಟದಲ್ಲಿ ಸ್ತನ್ಯಪಾನದ ಫೋಟೊ ಹಾಕುವ ಮೂಲಕ ಮಲಯಾಳಂ ನಿಯತಕಾಲಿಕೆ “ಗೃಹಲಕ್ಷ್ಮಿ ಇತಿಹಾಸ ಸೃಷ್ಟಿಸಿದೆ. ಮಲಯಾಳಂ ನಟಿ, ಲೇಖಕಿ ಜಿಲು ಜೋಸೆಫ್ ಇದಕ್ಕೆ ರೂಪದರ್ಶಿ ಆಗಿದ್ದಾರೆ. 

Advertisement

ಹಾಲುಣಿಸುವ ಕ್ರಿಯೆ ತಾಯಿ ಮತ್ತು ಮಗುವಿನ ನಡುವಿನ ಸಂಬಂಧ ತೋರುತ್ತದೆ. ಇದನ್ನು ನಾಚಿಕೆಯ ಅಥವಾ ಲೈಂಗಿಕ ದೃಷ್ಟಿಯಲ್ಲಿ ಬಿಂಬಿಸಲಾಗುತ್ತದೆ. ಈ ಅಭಿಪ್ರಾಯವನ್ನು ಬದಲಿಸುವ ಸಲುವಾಗಿಯೇ ನಾವು ಹೀಗೆ ಮುಖಪುಟವನ್ನು ಹಾಕಿರುವುದಾಗಿ ಗೃಹಲಕ್ಷ್ಮಿಹೇಳಿದೆ. ಇದರ ರೂಪದರ್ಶಿಯಾಗಿ ಕಾಣಿಸಿಕೊಂಡಿರುವ ಜಿಲು, ಮೊದಲಿಗೆ ನಾನು ಈ ಪ್ರಸ್ತಾಪವನ್ನು ನಿರಾಕರಿಸಿದೆ. ಸಮಾಜ ಹೇಗೆ ಸ್ವೀಕರಿಸುತ್ತದೆ ಎಂಬ ಅಳುಕು ನನಗಿತ್ತು. ಈಗ ಈ ಮುಖಪುಟದ ಬಗ್ಗೆ ನನಗೆ ಖುಷಿ ಇದೆ. ನನಗೆ ನನ್ನ ದೇಹದ ಮೇಲೆ ಹಕ್ಕಿದೆ, ನನ್ನ ನಿರ್ಧಾರದ ಕುರಿತು ಗೌರವವಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next