Advertisement

ರಮೇಶ್‌ ಅರವಿಂದ್‌ ಸಿನಿಮಾಕ್ಕೆ ಆ್ಯಕ್ಷನ್ ಕಟ್‌ ಹೇಳಿದ್ದ ಖ್ಯಾತ ನಿರ್ದೇಶಕ ಶವವಾಗಿ ಪತ್ತೆ

03:18 PM Feb 14, 2024 | Team Udayavani |

ಕೊಚ್ಚಿ: ಮಾಲಿವುಡ್‌ ಸಿನಿಮಾರಂಗದ ನಿರ್ದೇಶಕರೊಬ್ಬರು ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Advertisement

‘ಮಿಜಿಯಿತ್ತಲಿಲ್ ಕಣ್ಣೀರುಮಾಯಿ’ ಚಿತ್ರದ ಮೂಲಕ ಖ್ಯಾತಿ ಪಡೆದ ಮಲಯಾಳಂ ನಿರ್ದೇಶಕ ಪ್ರಕಾಶ್ ಕೋಲೇರಿ(65) ಕೇರಳದ ವಯನಾಡ್ ಜಿಲ್ಲೆಯ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಮೃತದೇಹ ಮಂಗಳವಾರ(ಫೆ.13 ರಂದು) ಪತ್ತೆಯಾಗಿದೆ.

ಪ್ರಕಾಶ್‌ ಅವರು ವಯನಾಡ್‌ನಲ್ಲಿರುವ ತನ್ನ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಎರಡು ದಿನಗಳಿಂದ ಮನೆಯಿಂದ ಹೊರಬಾರದ ಕಾರಣ ನೆರೆಹೊರೆಯವರು ಅನುಮಾನದಿಂದ ಮನೆ ಪಕ್ಕ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನೋಡಿದ್ದಾರೆ.

1987 ರಲ್ಲಿ ಪ್ರಕಾಶ್‌ ಅವರು ʼ’ಮಿಜಿಯಿತ್ತಲಿಲ್ ಕಣ್ಣೀರುಮಾಯಿ’ ಸಿನಿಮಾದ ಮೂಲಕ ನಿರ್ದೇಶಕ್ಕಿಳಿದಿದ್ದರು.  ಆ ಬಳಿಕ 1993 ರಲ್ಲಿ ‘ಅವನ್ ಅನಂತಪದ್ಮನಾಭನ್’ ಸಿನಿಮಾವನ್ನು ಮಾಡಿದ್ದರು. ಈ ಸಿನಿಮಾದಲ್ಲಿ ಕನ್ನಡದ ರಮೇಶ್‌ ಅರವಿಂದ್‌, ಸುಧಾ ಚಂದ್ರನ್, ಎಂ.ಜಿ.ಸೋಮನ್, ಮಾತ್ತು, ರಾಜನ್ ಪಿ ದೇವ್ ಮತ್ತು ಟಿ.ಜಿ.ರವಿ ಸೇರಿದಂತೆ ಇತರರಿದ್ದರು.

1999 ರಲ್ಲಿ ‘ವರುಣ್ ವರತಿರಿಕ್ಕಿಲ್ಲ’ ಬಿಡುಗಡೆಯಾದ ನಂತರ ಅವರು ಚಿತ್ರರಂಗದಿಂದ ಒಂದಷ್ಟು ಕಾಲ ಬ್ರೇಕ್‌ ಪಡೆದಿದ್ದರು.14 ವರ್ಷಗಳ ವಿರಾಮದ ನಂತರ ಅವರು ‘ಪಾಟ್ಟುಪುಸ್ತಕಂ’ ಮೂಲಕ ನಿರ್ದೇಶನಕ್ಕೆ ಮರಳಿದರು. ಇದು ಚಲನಚಿತ್ರ ನಿರ್ದೇಶಕರಾಗಿ ಅವರ ಕೊನೆಯ ಚಿತ್ರವೂ ಆಗಿತ್ತು.

Advertisement

ನಿರ್ದೇಶನದ ಹೊರತಾಗಿ ಅವರು, ಚಿತ್ರಕಥೆಗಳನ್ನು ಬರೆದಿದ್ದರು.

 

 

Advertisement

Udayavani is now on Telegram. Click here to join our channel and stay updated with the latest news.

Next