Advertisement

ಗೆಳೆಯ ನವೀನ್ ಜತೆ ಹಸೆಮಣೆ ಏರಿದ ನಟಿ ಭಾವನಾ: ಫೋಟೋ ಆಲ್ಬಂ

03:38 PM Jan 22, 2018 | Sharanya Alva |

ನವದೆಹಲಿ: ಬಹುಕಾಲದ ಗೆಳೆಯ, ಚಿತ್ರ ನಿರ್ಮಾಪಕ ನವೀನ್ ಜತೆ ಮಳೆಯಾಳಂ ನಟಿ ಭಾವನಾ ಸೋಮವಾರ ಕೇರಳದಲ್ಲಿ ಸಪ್ತಪದಿ ತುಳಿದಿದ್ದಾರೆ.

Advertisement

ತುಂಬಾ ಖಾಸಗಿಯಾಗಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ನವೀನ್ ಮತ್ತು ಭಾವನಾ ಆಪ್ತ ಗೆಳೆಯರು, ಕುಟುಂಬ ವರ್ಗದವರು ಮಾತ್ರ ಪಾಲ್ಗೊಂಡಿದ್ದರು. ಇಂದು ಸಂಜೆ ತ್ರಿಶ್ಶೂರಿನಲ್ಲಿ ಆರತಕ್ಷತೆ ನಡೆಯಲಿದೆ.

ಕಳೆದ ವರ್ಷ ಮಾರ್ಚ್ ನಲ್ಲಿ ಭಾವನಾ ಮತ್ತು ನವೀನ್ ನಿಶ್ಚಿತಾರ್ಥ ನಡೆದಿತ್ತು. ಭಾವನಾ ವಿವಾಹ ಸಮಾರಂಭದಲ್ಲಿ ತೊಟ್ಟಿದ್ದ ಉಡುಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾವನಾ ಚಿನ್ನದ ಬಣ್ಣದ ಕಾಂಜೀವರಂ ಸೀರೆಯಲ್ಲಿ ಕಂಗೊಳಿಸುತ್ತಿದ್ದರೆ, ನವೀನ್ ಸಾಂಪ್ರದಾಯಿ ಉಡುಗೆ ಮೂಲಕ ಗಮನ ಸೆಳೆದಿದ್ದಾರೆ.

Advertisement

ನವೀನ್‌ ಅವರು ಗಣೇಶ್‌–ಭಾವನಾ ಅಭಿನಯದ ರೋಮಿಯೊ ಚಿತ್ರವನ್ನು ನಿರ್ಮಿಸಿದ್ದರು. ವಿಷ್ಣುವರ್ಧನ, ಟೋಪಿವಾಲಾ, ಜಾಕಿ ಸೇರಿ ಇತರೆ ಕನ್ನಡ ಚಿತ್ರಗಳಲ್ಲಿ ಭಾವನಾ ಅಭಿಯಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next