ಕೊಚ್ಚಿ: ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಮಲಯಾಳಂ ಚಿತ್ರರಂಗದ ನಟ ಬಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇತ್ತೀಚೆಗಷ್ಟೇ ʼಶೆಫೀಕ್ಕಿಂತೆ ಸಂತೋಷಂʼ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಬಾಲ ಕಳೆದ ಕೆಲ ಸಮಯದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಮಂಗಳವಾರ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಾರದ ಹಿಂದೆಯಷ್ಟೇ ನಟ ಬಾಲ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರನ್ನು ಭೇಟಿಯಾಗಿದ್ದರು. ವೈದ್ಯರು ಬಾಲ ಅವರಿಗೆ ಯಕೃತ್ತಿನ ಸಮಸ್ಯೆ ಇರುವುದರಿಂದ ಯಕೃತ್ತು ಕಸಿ ಮಾಡಬೇಕೆಂದು ಸಲಹೆ ನೀಡಿದ್ದಾರೆ ಎಂದು ವರದಿ ಆಗಿದೆ.
ಸದ್ಯ ಬಾಲ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಪತ್ನಿ ಅವರೊಂದಿಗೆ ಇದ್ದಾರೆ. ಅವರ ಸಹೋದರ ನಿರ್ದೇಶಕ ಶಿವ ಕೊಚ್ಚಿಗೆ ಇನ್ನಷ್ಟೇ ತಲುಪಲಿದ್ದಾರೆ ಎಂದು ವರದಿ ಆಗಿದೆ.
ಬಾಲ ರಜಿನಿಕಾಂತ್ ಅವರ ʼ ಅಣ್ಣಾತ್ತೆʼ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ʼ ಬಿಲಾಲ್ ʼ, ʼಸ್ಥಲಂʼ ಚಿತ್ರದಲ್ಲಿ ಬಾಲ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.