Advertisement

ಮಲಂಕರ ಡ್ಯಾಂನಲ್ಲಿ ಮುಳುಗಿ ಮಲಯಾಳಂ ನಟ ಅನಿಲ್ ನೆಡುಂಗಾಡ್ ದುರಂತ ಸಾವು!

09:11 AM Dec 26, 2020 | keerthan |

ಕೊಚ್ಚಿ: ಶೂಟಿಂಗ್ ಬಿಡುವಿನ ವೇಳೆ ಮಲಂಕರ ಡ್ಯಾಂಗೆ ಸ್ನಾನ ಮಾಡಲು ಹೋದ ಮಲಯಾಳಂ ಖ್ಯಾತ ನಟ ಅನಿಲ್ ನೆಡುಂಗಾಡ್ ದುರಂತ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.

Advertisement

ಪ್ರಸಿದ್ದ ಚಿತ್ರಗಳಾದ ‘ಅಯ್ಯಪ್ಪನುಮ್ ಕೋಶಿಯಮ್’ ‘ಕಮತ್ತಿಪಾಡಮ್’, ‘ಪಾವಡ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಅನಿಲ್ ನೆಡುಂಗಾಡ್ ಅವರು ಮುಂದಿನ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದರು.

ಜೊಜು ಜಾರ್ಜ್ ಪ್ರಧಾನ ಪಾತ್ರದಲ್ಲಿರುವ ಈ ಚಿತ್ರದ ಶೂಟಿಂಗ್​ ತೊಡುಪುಳದಲ್ಲಿ ನಡೆಯುತ್ತಿತ್ತು. ಶೂಟಿಂಗ್ ಬಿಡುವಿನ ವೇಳೆಯಲ್ಲಿ ಸ್ನೇಹಿತರೊಂದಿಗೆ ಅನಿಲ್ ನೆಡುಂಗಾಡ್  ಸ್ನಾನಕ್ಕೆಂದು ಡ್ಯಾಂಗೆ ತೆರಳಿದ್ದರು. ಸ್ನಾನ ಮಾಡುವಾಗ ನೀರಿನ ಹರಿವು ಹೆಚ್ಚಾಗಿ ಅನಿಲ್​ ನೀರುಪಾಲಾಗಿದ್ದಾರೆ.

ಕಿರುತೆರೆಯಲ್ಲಿ ಮಿಂಚಿದ್ದ ಅನಿಲ್ 2014ರಲ್ಲಿ ಸಿನಿಮಾ ರಂಗಕ್ಕೆ ಕಾಲಿರಿಸಿದ್ದರು. ಅವರ ಕೊನೆಯ ಚಿತ್ರ ‘ಪಾಪಮ್ ಚೆಯ್ಯತವರ್ ಕಲ್ಲೆರಿಯತ್ತೆ’ ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next