Advertisement

ಕನ್ನಡ ಉಳಿಸಿ ಮಲಯಾಳ ಕಡ್ಡಾಯ: ಮುಖ್ಯಮಂತ್ರಿ ಪಿಣರಾಯಿ

12:01 PM May 04, 2017 | |

ಕಾಸರಗೋಡು: ಕನ್ನಡ ಸಹಿತ ಭಾಷಾ ಅಲ್ಪಸಂಖ್ಯಾಕರ ಮಾತೃ ಭಾಷೆ ಸಂರಕ್ಷಿಸಿ ಶಾಲೆಗಳಲ್ಲಿ ಮಲಯಾಳವನ್ನು ಕಡ್ಡಾಯಗೊಳಿಸಲಾಗು ವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

Advertisement

ಮಲಯಾಳ ಭಾಷೆ ಕಡ್ಡಾಯ ಗೊಳಿಸುವಾಗ ಕನ್ನಡ ಕಲಿಕೆ ಮುಂದುವರಿಸಲಾಗುವುದು. ಇಂತಹ ಶಾಲೆಗಳಲ್ಲಿ ಎರಡನೇ ಭಾಷೆಯಾಗಿ ಮಲಯಾಳ ಇರುವುದು. ಕನ್ನಡ ಭಾಷೆಯ ಪ್ರಾಧಾನ್ಯತೆಗೆ ಯಾವುದೇ ಅಡ್ಡಿಯಿಲ್ಲ ಎಂದಿದ್ದಾರೆ.

ಶಾಸಕರಾದ ಎಂ. ರಾಜಗೋಪಾಲ್‌, ಎನ್‌.ಎ. ನೆಲ್ಲಿಕುನ್ನು, ಪಿ.ಬಿ. ಅಬ್ದುಲ್‌ ರಝಾಕ್‌, ಒ. ರಾಜಗೋಪಾಲ್‌ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಕನ್ನಡ ಭಾಷಾ ಅಲ್ಪಸಂಖ್ಯಾಕ ಸಂಘಟನೆಗಳ ಪ್ರತಿನಿಧಿಗಳಿಗೆ ಮುಖ್ಯಮಂತ್ರಿ ಈ ಭರವಸೆ ನೀಡಿದ್ದಾರೆ. 

ಕನ್ನಡ ಭಾಷೆಗೆ ಪ್ರಾಧಾನ್ಯಕಡಿಮೆ ಯಾಗಲಿದೆ ಎಂಬ ಆತಂಕ ಬೇಡ ಎಂದಮುಖ್ಯಮಂತ್ರಿ, ಮಲಯಾಳ ದ್ವಿತೀಯ ಭಾಷೆಯಾಗಲಿದೆ. ಒಂದನೇತರಗತಿಯಿಂದ ಮಲಯಾಳ ಆರಂಭಗೊಳ್ಳಲಿದೆ. ಮುಂದಿನ ಅಧ್ಯಯನ ವರ್ಷದಲ್ಲಿ ಇದನ್ನು ಆರಂಭಿಸಲಾಗುವುದು. 10 ವರ್ಷಗಳಲ್ಲಿ ಎಲ್ಲ ತರಗತಿಗಳಲ್ಲೂ ಮಲಯಾಳವನ್ನು ಕಡ್ಡಾಯಗೊಳಿಸಲಾಗುವುದು. ಪ್ರಸ್ತುತ ಕಲಿಯುತ್ತಿರುವ ಕನ್ನಡ ವಿದ್ಯಾರ್ಥಿಗಳಿಗೆ ಇದು ಬಾಧಕವಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next