ಲಿಲಾಂಗ್ವೆ(ಮಲಾವಿ): ಮಲಾವಿ ದೇಶದ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಹಾಗೂ ಇತರ ಒಂಬತ್ತು ಜನರನ್ನು ಕರೆದೊಯ್ಯುತ್ತಿದ್ದ ವಿಮಾನ ಮಂಗಳವಾರ (ಜೂನ್ 11) ಪತನಗೊಂಡಿದ್ದು, ಚಿಲಿಮಾ ಹಾಗೂ ಇತರ ಒಂಬತ್ತು ಮಂದಿ ಸಾವಿಗೀಡಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:RSS: ಅಹಂಕಾರ ಹೊಂದಿದವ ನಿಜವಾದ ‘ಸೇವಕ’ ಆಗಲು ಸಾಧ್ಯವಿಲ್ಲ: ಮೋಹನ್ ಭಾಗವತ್
ಮಲಾವಿ ದೇಶದ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಹಾಗೂ ಇತರ ಒಂಬತ್ತು ಜನರನ್ನು ಕರೆದೊಯ್ಯುತ್ತಿದ್ದ ವಿಮಾನ ನಿಗದಿತ ಸಮಯವಾದ ಸೋಮವಾರ ಲ್ಯಾಂಡಿಂಗ್ ಆಗದೆ ನಾಪತ್ತೆಯಾಗಿರುವುದಾಗಿ ಮಾಧ್ಯಮದ ವರದಿಯಾಗಿತ್ತು.
ಮಲಾವಿ ರಾಜಧಾನಿ ಲಿಲಾಂಗ್ವೆನಿಂದ ರಕ್ಷಣಾ ಪಡೆಯ ವಿಮಾನದಲ್ಲಿ ಉಪಾಧ್ಯಕ್ಷ ಚಿಲಿಮಾ ಹಾಗೂ ಇತರ ಒಂಬತ್ತು ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದರು ಎಂದು ಸಿಎನ್ ಎನ್ ವರದಿ ಮಾಡಿತ್ತು.
ಅಧಿಕಾರಿಗಳ ಮಾಹಿತಿ ಪ್ರಕಾರ, ಉತ್ತರ ಲಿಲಾಂಗ್ವೆನಿಂದ ಸುಮಾರು 380 ಕಿಲೋ ಮೀಟರ್ ದೂರದಲ್ಲಿರುವ ಮುಝುಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿಲಿಮಾ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡ್ ಆಗಬೇಕಿತ್ತು ಎಂದು ತಿಳಿಸಿದ್ದರು.
2022ರಲ್ಲಿ ಲಂಚದ ಹಗರಣದ ಆರೋಪದ ಹಿನ್ನೆಲೆಯಲ್ಲಿ ಚಿಲಿಮಾ ಅವರನ್ನು ಬಂಧಿಸಿದ್ದರಿಂದ, ಹುದ್ದೆಗೆ ರಾಜೀನಾಮೆ ನೀಡಿದ್ದರು. ಕಳೆದ ತಿಂಗಳು ಕೋರ್ಟ್ ಚಿಲಿಮಾ ಅವರನ್ನು ದೋಷಮುಕ್ತಗೊಳಿಸಿತ್ತು.