Advertisement

ಮಳವಳ್ಳಿ: ಸರಳ ಸಿಡಿಹಬ್ಬಕ್ಕೆ ವಿದ್ಯುಕ್ತ ಚಾಲನೆ

01:52 PM Feb 27, 2021 | Team Udayavani |

ಮಳವಳ್ಳಿ: 300 ವರ್ಷಗಳ ಇತಿಹಾಸ ಹೊಂದಿರುವ ಪಟ್ಟಲದಮ್ಮನ ಸಿಡಿಹಬ್ಬ ಈ ಬಾರಿ ಕೋವಿಡ್‌ನಿಂದಾಗಿ ಸರಳವಾಗಿ ನಡೆಯುತ್ತಿದ್ದು, ಶುಕ್ರವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

Advertisement

ವಿಶೇಷ ಪೂಜೆ: ಪಟ್ಟಣದ ಸುಲ್ತಾನ್‌ ರಸ್ತೆಯ ಪಟ್ಟಲದಮ್ಮ ದೇವಿಗೆ ಬೆಳಗಿನ ಜಾವ 4 ಗಂಟೆಯಿಂದಲೇ ಅರ್ಚಕ ನಂಜುಂಡಸ್ವಾಮಿ ನೇತೃತ್ವದಲ್ಲಿ ವಿವಿಧ ಅಭಿಷೇಕ ಮತ್ತು ಹೋಮ-ಹವನ, ವಿವಿಧ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ದರ್ಶನಕ್ಕೆ ಆಗಮಿಸಿದ ಭಕ್ತರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್‌ ಸ್ಕ್ಯಾನಿಂಗ್‌ ನಡೆಸಿ ದೇವಸ್ಥಾನ ಆವರಣದ ಚಿಕ್ಕಮ್ಮತಾಯಿ ಮತ್ತು ದೊಡ್ಡಮ್ಮ ತಾಯಿ ದೇವರಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿದರು.

ಮೆರುಗು: ಸಿದ್ದಾರ್ಥನಗರದ ಯಜಮಾನರು ಸಿಡಿಗೆಬಳಸುವ ಹಗ್ಗಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಸಿಡಿ ಆಚರಣೆಗೆ ಹಗ್ಗ ನೀಡಿದರು. ತಾಲೂಕಿನ ತಮ್ಮಡಹಳ್ಳಿ, ಅಂಚೆದೊಡ್ಡಿ ಸೇರಿ ವಿವಿಧಗ್ರಾಮಗಳಿಂದ ಸಂಜೆ ವೇಳೆ ರೈತರು ತಮಟೆ,ಮಂಗಳವಾದ್ಯಗಳೊಂದಿಗೆ ತಮ್ಮ ರಾಸುಗಳಿಗೆಅಲಂಕಾರ ಮಾಡಿಕೊಂಡು ಕೊಂಡಕ್ಕೆ ಸೌದೆ ತಂದರು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೌದೆ ತಂದ ರಾಸುಗಳು ಮೆರವಣಿಗೆ ಸಾಗಿದ ಸಂದರ್ಭದಲ್ಲಿವಿಶೇಷ ಪೂಜೆ ಸಲ್ಲಿಸಿದರು. ಸುಮಾರು ಒಂದು ಕಿಲೋಮೀಟರ್‌ ಗಟ್ಟಲೆ ಸಾಗಿದ ಮೆರವಣಿಗೆ ಸಿಡಿಹಬ್ಬಕ್ಕೆ ಮೆರಗು ನೀಡಿತು.

ವಿಶೇಷ ಆರತಿ: ಮುಡುಕುತೊರೆ ಜಾತ್ರೆ ಆಜು-ಬಾಜಿನಲ್ಲಿ ಪೂರ್ಣ ಬೆಳದಿಂಗಳ ಶುಕ್ರವಾರ ಮತ್ತು ಶನಿವಾರದ ದಿನಗಳಲ್ಲಿ ಹಬ್ಬ ಆಚರಣೆ ಮಾಡುವ ನಿಯಮವಿದೆ. ಸಿಡಿ ಪೂಜಾಕೈಂಕರ್ಯಗಳಿಗೆ ಸಂಪ್ರದಾಯದಂತೆ ವ್ಯಕ್ತಿಯೊಬ್ಬರನ್ನು ನೇಮಿಸಿ ಅವರಿಂದ 8 ದಿನ ಮುಂಚಿತವಾಗಿ ಧಾರ್ಮಿಕ ವಿಧಿವಿಧಾನ ನಡೆಸುತ್ತಾರೆ. ಪಟ್ಟಲದಮ್ಮ ದೇವಿಗೆ ವಿವಿಧಹೂಗಳಿಂದ ಆಲಂಕಾರ ಮಾಡಲಾಯಿತು. ಪಟ್ಟಣಸೇರಿದಂತೆ ವಿವಿಧ ಗ್ರಾಮಗಳಿಂದ ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ದೇವಿಗೆ ಪೂಜೆ ಸಲ್ಲಿಸಿದರು.

ಇಂದು ಬೆಳಗ್ಗೆ ನಡೆಯುವ ಐತಿಹಾಸಿಕ ಸಿಡಿ ಹಬ್ಬದ ಕೊಂಡೋತ್ಸವ ಮತ್ತು ಸಿಡಿರಣ್ಣನ ಆಚರಣೆಗಾಗಿ ನೋಡಲು ಜನತೆ ಕಾಯುತ್ತಿದೆ.ಪ್ರತಿ ವರ್ಷವೂ ಸಿಡಿಹಬ್ಬವನ್ನು ನೋಡಲು ಲಕ್ಷಾಂತರ ಮಂದಿ ಬರುತ್ತಿದ್ದರು. ಈ ಬಾರಿ ಸರಳವಾಗಿ ನಡೆಯುತ್ತಿರುವ ಹಬ್ಬಕ್ಕೆ ಸಾವಿರಾರು ಮಂದಿ ಸೇರಲು ಸಾಧ್ಯತೆ ಇದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next