ಮಂಡ್ಯ: ಜಿಲ್ಲೆಯಲ್ಲಿ ಮೀಸಲು ಕ್ಷೇತ್ರವಾಗಿರುವ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮೊದಲಿನಿಂದಲೂ ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆಯೇ ಜಿದ್ದಾಜಿದ್ದಿನ ಹಣಾಹಣಿ ನಡೆಯುತ್ತಲೇ ಬಂದಿದೆ. ಆದರೆ, ಈ ಬಾರಿ ಬಿಜೆಪಿ ಸ್ಫರ್ಧೆ ಮೇಲೆ ನಿರ್ಣಾಯಕವಾಗಲಿದೆ.
ಕಾಂಗ್ರೆಸ್‌ನಿಂದ ಮಾಜಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಬಹುತೇಕ ಅಭ್ಯರ್ಥಿಯಾ ಗುವುದು ಖಚಿತವಾಗಿದೆ. ಅದರಂತೆ ಜೆಡಿಎಸ್‌ನಿಂದ ಹಾಲಿ ಶಾಸಕ ಕೆ.ಅನ್ನದಾನಿ ಸ್ಫರ್ಧಿಸಿದರೆ, ಬಿಜೆಪಿ ಯಿಂದ ಬಿ.ಮುನಿರಾಜು ಮುನ್ನಲೆಗೆ ಬಂದಿದ್ದಾರೆ. ಇನ್ನುಳಿದಂತೆ ಬಿಎಸ್ಪಿಯಿಂದ ಎಂ.ಕೃಷ್ಣಮೂರ್ತಿ, ಎಎಪಿಯಿಂದ ವಕೀಲ ಬೆಂಡರವಾಡಿ ಪ್ರೊ. ಮಹದೇವಸ್ವಾಮಿ ಸ್ಫರ್ಧೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಎಷ್ಟರ ಮಟ್ಟಿಗೆ ಪರಿಣಾಮ?: ಕಾಂಗ್ರೆಸ್-ಜೆಡಿಎಸ್ ನಡುವೆಯೂ ತೀವ್ರ ಪೈಪೋಟಿ ನಡೆದರೂ ಬಿಜೆಪಿ ಅಭ್ಯರ್ಥಿ ತೆಗೆದುಕೊಳ್ಳುವ ಮತಗಳು ಯಾರಿಗೆ ಲಾಭವಾಗಲಿದೆ ಎಂಬ ಲೆಕ್ಕಾಚಾರ ಆರಂಭಗೊಂಡಿವೆ. ಎರಡೂ ಪಕ್ಷಗಳಲ್ಲಿ ಅಭ್ಯರ್ಥಿಗಳ ಮೇಲಿನ ಮುಖಂಡರ ಅಸಮಾಧಾನ ಮುಂದುವರಿದಿದ್ದು, ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕ್ಷೇತ್ರ ಸಂಚರಿಸುತ್ತಿರುವ ಪಿ.ಎಂ.ನರೇಂದ್ರಸ್ವಾಮಿ: ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಫೈಟ್ ಶುರುವಾಗಿದೆ. ಆದರೆ, ಈಗಾಗಲೇ ಜಿಲ್ಲಾ ನಾಯಕರಾಗಿ ಗುರುತಿಸಿಕೊಂಡಿರುವ ನರೇಂದ್ರಸ್ವಾಮಿಗೆ ಬಿ.ಫಾರಂ ಸಿಗುವುದು ಖಚಿತವಾಗಿದೆ. ಈ ನಡುವೆಯೂ ಡಾ.ಮೂರ್ತಿ, ಮಾಜಿ ಶಾಸಕಿ ಮಲ್ಲಾಜಮ್ಮ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮಲ್ಲಾಜಮ್ಮ ಮಹಿಳಾ ಕೋಟಾದಡಿ ಟಿಕೆಟ್ ಪಡೆಯಲು ಮುಂದಾಗಿದ್ದರೆ, ಡಾ.ಮೂರ್ತಿ ನಾನೂ ರೇಸ್‌ನಲ್ಲಿದ್ದೇನೆ ಎಂದು ತೋರಿಸಿದ್ದಾರೆ. ಕ್ಷೇತ್ರದಲ್ಲಿ ನಿರಂತರ ವಾಗಿ ಸಂಚರಿಸುತ್ತಿರುವ ನರೇಂದ್ರಸ್ವಾಮಿ ನೇರವಾಗಿ ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದಾರೆ. ಈಗಾಗಲೇ ಪಂಚಾಯ್ತಿವಾರು ಮುಖಂಡರು, ಕಾರ್ಯಕರ್ತರ ಒಂದು ಸುತ್ತು ಸಭೆ ನಡೆಸಿದ್ದಾರೆ. ಅಲ್ಲದೆ, ಕೆಲವು ಮುಖಂಡರ ನಡುವಿನ ಅಸಮಾಧಾನ ಶಮನಗೊಳಿ ಸುವ ಪ್ರಯತ್ನಗಳೂ ಸಾಗಿವೆ. ಅಲ್ಲದೆ, ಇತ್ತೀಚೆಗೆ ಕೆಲವು ಮುಖಂಡರು ನರೇಂದ್ರಸ್ವಾಮಿ ಅವರಿಗೆ ಟಿಕೆಟ್ ತಪ್ಪಿಸಲು ಗೌಪ್ಯ ಸಭೆಗಳನ್ನೂ ನಡೆಸಿದ್ದಾರೆ. ಆದರೆ, ಅಸಮಾಧಾನಿತ ಮುಖಂಡರು ಜೆಡಿಎಸ್‌ನಲ್ಲೂ ಗುರುತಿಸಿಕೊಂಡಿ ದ್ದಾರೆ ಎಂಬುದು ಕಾಂಗ್ರೆಸ್ ನಾಯಕರ ವಾದವಾಗಿದೆ.
ಇಬ್ಬರ ಅಸಮಾಧಾನಕ್ಕೆ ಜೆಡಿಎಸ್ ಮುಲಾಮು: ಜೆಡಿಎಸ್‌ನಲ್ಲಿ ಹಾಲಿ ಶಾಸಕ ಕೆ.ಅನ್ನದಾನಿ ಅವರಿಗೆ ಟಿಕೆಟ್ ಖಚಿತವಾಗಿದೆ. ಆದರೆ ಶಾಸಕರ ವಿರುದ್ಧ ಕೆಲವು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು. ಅದಕ್ಕೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರ ಸ್ವಾಮಿ ಮುಲಾಮು ಹಚ್ಚುವ ಮೂಲಕ ಭಿನ್ನಮತ ಶಮನಕ್ಕೆ ಮುಂದಾಗಿದ್ದಾರೆ. ಜೆಡಿಎಸ್ ತಾಲೂಕು ಅಧ್ಯಕ್ಷರನ್ನಾಗಿ ಕೆಎಂಎಫ್ ನಿರ್ದೇಶಕ ವಿಶ್ವನಾಥ್ ಹಾಗೂ ಜಿಲ್ಲಾ ಯುವ ಘಟಕದ ಅಧ್ಯಕ್ಷರನ್ನಾಗಿ ಕಂಸಾಗರ ರವಿ ಅವರನ್ನು ನೇಮಕ ಮಾಡಲಾಗಿದೆ. ಈ ಇಬ್ಬರ ಮುಖಾಂತರ ಕ್ಷೇತ್ರದಲ್ಲಿನ ಮುಖಂಡರ ಅಸಮಾಧಾನ ಶಮನಗೊಳಿಸುವ ಯತ್ನ ಗಳೂ ನಡೆಯುತ್ತಿವೆ. ಶಾಸಕರೂ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು, ಕಾಮಗಾರಿಗಳನ್ನು ಪೂರ್ಣಗೊಳಿಸುವ ಪ್ರಯತ್ನದಲ್ಲಿದ್ದಾರೆ.
ಬಿಜೆಪಿ ಅಭ್ಯರ್ಥಿಯ ಬದಲಾವಣೆ ಸಾಧ್ಯತೆ: ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬ ಮಾತು ಕೇಳಿ ಬರುತ್ತಿವೆ. ಅದರಂತೆ ಬಿಜೆಪಿ ಅಭ್ಯರ್ಥಿಯೂ ಬದಲಾವಣೆಯಾಗುವ ಸಾಧ್ಯತೆ ಇದೆ. ಕಳೆದ 2ಬಾರಿ ಪರಾಭವಗೊಂಡಿರುವ ಬಿ.ಸೋಮಶೇಖರ್‌ರಿಗೆ ಟಿಕೆಟ್ ಸಿಗುವುದು ಅನು ಮಾನ. ಬಿ.ಮುನಿರಾಜು ಪ್ರಬಲ ಆಕಾಂಕ್ಷಿಯಾಗಿದ್ದು, ಜತೆಗೆ ಯಮಂದೂರು ಸಿದ್ದರಾಜು, ದ್ವಾರನಹಳ್ಳಿ ಕುಮಾರಸ್ವಾಮಿ ಅವರೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿ.ಮುನಿರಾಜು, ಯಮಂದೂರು ಸಿದ್ದರಾಜು ಹಾಗೂ ದ್ವಾರನಹಳ್ಳಿ ಕುಮಾರಸ್ವಾಮಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಈಗಾಗಲೇ ಬಿ.ಮುನಿರಾಜು ಕ್ಷೇತ್ರ ಸಂಚರಿಸುತ್ತಾ ಜೆಡಿಎಸ್-ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಸೆಳೆಯಲು ಮುಂದಾಗಿದ್ದಾರೆ.
ಅಲ್ಲದೆ, ಬಿಜೆಪಿ ಅಭ್ಯರ್ಥಿ ಎಷ್ಟು ಮತಗಳ ಪಡೆದರೆ ಕಾಂಗ್ರೆಸ್-ಜೆಡಿಎಸ್‌ಗೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿವೆ.
ಅಖಾಡಕ್ಕೆ ಬಿಎಸ್ಪಿ, ಎಎಪಿ ಸಿದ್ಧತೆ : ಮುಂದಿನ ಚುನಾವಣೆಗೆ ಬಿಎಸ್ಪಿ ಹಾಗೂ ಎಎಪಿ ಪಕ್ಷಗಳ ಅಭ್ಯರ್ಥಿ ಗಳು ಸಿದ್ಧತೆ ಆರಂಭಿಸಿ ದ್ದಾರೆ. ಬಿಎಸ್ಪಿಯಿಂದ ಎಂ.ಕೃಷ್ಣ ಮೂರ್ತಿ ಹಾಗೂ ಎಎಪಿ ಯಿಂದ ವಕೀಲ ಬೆಂಡರ ವಾಡಿ ಪ್ರೊ.ಮಹ ದೇವ ಸ್ವಾಮಿ ಅಭ್ಯರ್ಥಿ ಯಾಗಲಿ ದ್ದಾರೆ ಎಂದು ತಿಳಿದು ಬಂದಿದೆ. ಕ್ಷೇತ್ರದಲ್ಲಿ ಬಿಎಸ್ಪಿ ತಮ್ಮದೇ ಆದ ಮತ ಹೊಂದಿದೆ. ಇನ್ನೊಂದೆಡೆ ಇದೇ ಮೊದಲ ಬಾರಿಗೆ ಎಎಪಿ ಸ್ಫರ್ಧೆಗೆ ಸಿದ್ಧವಾಗುತ್ತಿದೆ.
-ಎಚ್.ಶಿವರಾಜು