Advertisement

ಮಾಲತಿ ಯಶವಂತ ಚಿತ್ತಾಲ ನಿಧನ

06:30 AM Feb 16, 2018 | |

ಬೆಂಗಳೂರು: ಕನ್ನಡ ಮನಸ್ಸನ್ನು ಹಸನುಗೊಳಿಸಿದ ಮಮತೆಯ ಮೇಧಾವಿ ಸಾಹಿತಿ ದಿ. ಯಶವಂತ ಚಿತ್ತಾಲರ ಪತ್ನಿ ಮಾಲತಿ ಯಶವಂತ ಚಿತ್ತಾಲ (84) ಅವರು ನಿನ್ನೆ ಮುಂಜಾನೆ ಮುಂಬಯಿಯ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾದರು.

Advertisement

ಹೊರನಾಡಿನಲ್ಲಿ ದ್ದುಕೊಂಡೇ ಕನ್ನಡಸೇವೆಗೈದ ಯಶವಂತರ ಪಯಣದ ಸ್ಥೈರ್ಯವಾಗಿದ್ದ ಮಾಲತಿ,ಮುಂಬಯಿಯ ತಮ್ಮ ಮನೆಗೆ ಬರುವ ಎಲ್ಲ ಕನ್ನಡಾಭಿಮಾನಿಗಳು,ಸಾಹಿತಿಗಳನ್ನು ಅತ್ಯಂತ ವಾತ್ಸಲ್ಯದಿಂದ ನೋಡಿಕೊಂಡವರು. ಕಾರವಾರದ ಬಾಡ ಶಾಲೆಯಲ್ಲಿ ಕೆಲಕಾಲ ಶಿಕ್ಷಕರಾಗಿದ್ದ ಯಶವಂತರು, ವಿದ್ಯಾರ್ಥಿನಿ ಆಗಿದ್ದ ಮಾಲತಿಯವರನ್ನು ಪ್ರೀತಿಸಿ ವಿವಾಹವಾಗಿದ್ದರು.

ಮುಂಬಯಿಯ ತಮ್ಮ ಬ್ಯಾಂಡ್‌ ಸ್ಟಾಂಡ್‌ ಮನೆಯಲ್ಲಿ ಮಗ ಡಾ. ರವೀಂದ್ರ ಚಿತ್ತಾಲರೊಂದಿಗೆ ವಾಸಿಸುತ್ತಿದ್ದ ಮಾಲತಿ, ಬಂಧು ಬಳಗದವರಿಂದ “ಅಕ್ಕ’ ಎಂದೇ ಕರೆಸಿಕೊಳ್ಳುತ್ತಿದ್ದರು. ಯಶವಂತರ ದೇಹಾಂತ್ಯದ ನಂತರ ಅವರ ಕೃತಿಗಳ ಮರುಮುದ್ರಣದ ಕುರಿತು ಕಾಳಜಿ ವಹಿಸುತ್ತಿದ್ದರು. ಮುಂಬಯಿಯ ಬ್ಯಾಂಡ್‌ ಸ್ಟಾಂಡ್‌ ವಿಳಾಸವನ್ನು ಕನ್ನಡದ ಸ್ಪಂದನಶೀಲ ಮಮತೆಯ ತಾಣವಾಗಿಸಿದ ಸೌಮ್ಯ ಮಹಿಳೆಯ ನಿರ್ಗಮನ ಚಿತ್ತಾಲ ಓದುಗರಲ್ಲಿ, ಮುಂಬಯಿಯ ಕನ್ನಡ ಲೋಕದಲ್ಲಿ ಆಳವಾದ ಮೌನವೊಂದನ್ನು ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next