Advertisement
ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಗಳಲ್ಲಿ ಪಾರದರ್ಶಕತೆ (ಎರಡನೇ ತಿದ್ದುಪಡಿ) ಮಸೂದೆ ಮೇಲಿನ ಗಂಭೀರ ಚರ್ಚೆಯಲ್ಲಿ ಮಾತಿಗಿಳಿದ ವಿಶ್ವನಾಥ್, ಕಾಂಗ್ರೆಸ್ ಸದಸ್ಯೆ ಹಾಗೂ ನಟಿ ಉಮಾಶ್ರೀ ಅವರ ಹೆಸರನ್ನು ಮಾಲಾಶ್ರೀ ಎಂದು ಸಂಬೋಧಿಸಿದರು. ಇದು ಇಡೀ ಪ್ರಹಸನಕ್ಕೆ ಶ್ರೀಕಾ ರ ಹಾಡಿತು. ಮಾಲಾಶ್ರೀ ಹೆಸರು ಹೇಳುತ್ತಿದ್ದಂತೆ ಕಾಂಗ್ರೆಸ್‌ನ ನಾಗರಾಜು ಯಾದವ್, ಈ ವಯಸ್ಸಿನಲ್ಲಿ ನಿಮಗ್ಯಾಕೆ ಮಾಲಾಶ್ರೀ ನೆನಪಾಯಿತು ಎಂದು ಪ್ರಶ್ನಿಸಿದರು. ಆಗ, ನನ್ನ ವಯಸ್ಸಿಗೂ ಮಾಲಾಶ್ರೀ ನೆನಪಿಗೂ ಸಂಬಂಧ ಇಲ್ಲ ಕುಳಿತ್ಕೊಳಿÅà ಅಂತ ಗದರಿದರು. ಬಿಜೆಪಿಯ ತೇಜಸ್ವಿನಿ ಗೌಡ, ಬಾಲಿವುಡ್‌ನಲ್ಲಿ ಹೇಮಾಮಾಲಿನಿ ಕನಸಿನಕನ್ಯೆ. ಅದೇ ರೀತಿ, ಆ ದಶಕಗಳಲ್ಲಿ ದಕ್ಷಿಣ ಭಾರತದಲ್ಲಿ ಮಾಲಾಶ್ರೀ ಕನಸಿನಕನ್ಯೆ ಆಗಿದ್ದರು. ಹಾಗಾಗಿ ಹಿರಿಯ ಸದಸ್ಯರು ಅವರನ್ನು ಮೆಲುಕುಹಾಕಿದ್ದಾರೆ. ಅದು ಅವರ ಕಲಾಭಿರುಚಿ ಎಂದು ಹೇಳಿದರು.
ಕಳೆದೆರಡು ವರ್ಷಗಳಿಂದ ಜೀವಮಾನ ಸಾಧನೆ ಪ್ರಶಸ್ತಿ ಪ್ರಕಟಿಸಲಾಗಿದೆ. ಆದರೆ, ಅದನ್ನು ಪ್ರದಾನಿಸಿಲ್ಲ. ಈ ನಿಟ್ಟಿನಲ್ಲಿ ಶೀಘ್ರ ದೊಡ್ಡ ಕಾರ್ಯಕ್ರಮ ಆಯೋಜಿಸುವ ಮೂಲಕ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದರು. ಉಮಾಶ್ರೀಗೆ ಕರ್ನಾಟಕ ನಾಟಕ ಅಕಾಡೆಮಿಯಿಂದ ಜೀವಮಾನ ಸಾಧನೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಆದರೆ, ರಾಜಕೀಯ ಕಾರಣಗಳಿಂದ ನೀಡದಿರುವುದು ಸರಿ ಅಲ್ಲ ಎಂದು ವಿಶ್ವನಾಥ್ ಗಮನ ಸೆಳೆದರು. ಆಗ ಸಚಿವರು ಈ ಭರವಸೆ ನೀಡಿದರು.