Advertisement

ಮಲೇರಿಯ ಹೋಗಲಾಡಿಸುವ ಮಂತ್ರ!

07:41 PM Aug 28, 2019 | mahesh |

ರೋಮನ್ನರು ಆಧುನಿಕ ಜಗತ್ತಿಗೆ ಅನೇಕ ಕಾಣಿಕೆಗಳನ್ನು ಸಲ್ಲಿಸಿದ್ದಾರೆ. ರಸ್ತೆಗಳು, ಚರಂಡಿ ವ್ಯವಸ್ಥೆ, ಸ್ನಾನಗೃಹಗಳು ಹೀಗೆ ಬಹಳಷ್ಟು ನಾಗರಿಕ ಸವಲತ್ತುಗಳನ್ನು ಶತಮಾನಗಳ ಹಿಂದೆಯೇ ಜಗತ್ತಿಗೆ ಪರಿಚಯಿಸಿದವರು ಅವರು. ಇಂಥವರು ಈ ರೀತಿ ನಡೆದುಕೊಳ್ಳುತ್ತಿದ್ದರು ಎಂದು ತಿಳಿದರೆ ನಂಬುವುದು ಕಷ್ಟ. ಅದೆಂಥಾ ಕೆಲಸ ಎನ್ನುತ್ತೀರಾ? ಇಲ್ಲಿದೆ ನೋಡಿ…

Advertisement

ಜಗತ್ತಿನ ಹಳೆಯ ಖಾಯಿಲೆ ಎಂದರೆ ಮಲೇರಿಯಾ. ಕ್ರಿ.ಪೂ. 2700ನೇ ಇಸವಿಯಲ್ಲೇ ಆ ರೋಗವನ್ನು ಇತಿಹಾಸಕಾರನೊಬ್ಬ ದಾಖಲಿಸಿದ್ದಾನೆ. ರೋಮ್‌ನಲ್ಲೂ ಮಲೇರಿಯಾ ತನ್ನ ಕರಾಳ ಹಸ್ತವನ್ನು ಚಾಚಿತ್ತು. ಆ ಸಮಯದಲ್ಲಿ ಅಲ್ಲಿನ ವೈದ್ಯಕೀಯ ಕ್ಷೇತ್ರ ಒಂದಷ್ಟು ಬೆಳವಣಿಗೆ ಕಂಡಿದ್ದರೂ, ಜನರು ಹೆಚ್ಚಾಗಿ ದೇವರು, ಮಾಟ ಮಂತ್ರಗಳಿಗೆ ಮೊರೆ ಹೋಗುತ್ತಿದ್ದರು. ಹೀಗಾಗಿ ವೈದ್ಯರಿಗಿಂತ ಹೆಚ್ಚಾಗಿ ಪೂಜಾರಿಗಳು, ಮಾಟಗಾರರಿಗೆ ಹೆಚ್ಚಿನ ಮನ್ನಣೆ, ಪ್ರಾಮುಖ್ಯತೆ ದೊರೆಯುತ್ತಿತ್ತು. ಮಲೇರಿಯಾ ಪೀಡಿತರಿಗೆ ಔಷಧ ನೀಡುವ ಬದಲಾಗಿ ಸರ ಒಂದನ್ನು ನೀಡಲಾಗುತ್ತಿತ್ತು. ಅದರಲ್ಲಿ “ಅಬ್ರಕಡಬ್ರ’ ಎಂದು ಬರೆಯಲಾಗಿರುತ್ತಿತ್ತು. ಮ್ಯಾಜಿಕ್‌ ಮಾಡುವಾಗ ಸಾಮಾನ್ಯವಾಗಿ “ಅಬ್ರಕಡಬ್ರ’ ಎಂಬ ಪದವನ್ನು ಯಕ್ಷಿಣಿಗಾರ ಉಚ್ಛರಿಸುವುದನ್ನು ನೀವು ಗಮನಿಸಿರಬಹುದು. ಅದರಲ್ಲೂ ಯಾವುದಾದರೂ ವಸ್ತುವನ್ನು ಮಾಯ ಮಾಡುವಾಗ ಮ್ಯಾಜಿಕ್‌ ಮಾಡುವಾತ ತಪ್ಪದೇ “ಅಬ್ರಕಡಬ್ರ’ ಎನ್ನುತ್ತಾನೆ. ಪ್ರಾಚೀನ ರೋಮ್‌ನಲ್ಲಿ, ಜನರು ಮಲೇರಿಯಾ ರೋಗವನ್ನು ಇಲ್ಲವಾಗಿಸಲು ಅಬ್ರಕಡಬ್ರ ಮಂತ್ರವನ್ನು ಬಳಸುತ್ತಿದ್ದರು ಎನ್ನುವ ಸಂಗತಿ ಸೋಜಿಗವೇ ಸರಿ!

ಹವನ

Advertisement

Udayavani is now on Telegram. Click here to join our channel and stay updated with the latest news.

Next