ಹಬ್ಬ ಬಂತೆದರೆ ಸಾಕು, ಏನು ಮಾಡುವುದು? ಎಂಬುದು ಹೆಂಗಸರಿಗೆ ಎಂದಿಗೂ ಸಮಸ್ಯೆ. ಮಾಡಿದ್ದೇ ಮಾಡಿದರೆ ಮನೆಯಲ್ಲಿ ತಿನ್ನುವವರು ಯಾರು ಇಲ್ಲ. ಎಲ್ಲರೂ ಏನಾದರೂ ಹೊಸ ಬಗೆಯನ್ನು ತಿನ್ನಲು ಬಯಸುವುದು ಸಹಜ. ಮನೆಯಲ್ಲಿ ಮಕ್ಕಳಿದ್ದರೆ ಅದು ಬೇಡ, ಇದು ಬೇಡ ಎನ್ನುವ ರಾಗ. ಅದಲ್ಲದೆ ಹಬ್ಬದ ಸಂದರ್ಭ ಬೇಗ ತಯಾರಾಗುವ ತಿನಿಸುಗಳಿದ್ದರೆ ಇನ್ನು ಖುಷಿ ಅದಕ್ಕಾಗಿ ಹೊಸದೊಂದು ಬಗೆಯ ರೇಸಿಪಿ.
ಬೇಕಾಗುವ ಸಾಮಗ್ರಿಗಳು
– ಹಾಲು-3-4 ಲೀ
– ಲಿಂಬು- 2
– ತುಪ್ಪ- ಅರ್ಧ ಕಪ್
– ಮಲಾಯಿ ಕ್ರೀಮ್
– 4 ಚಮಚ
– ಹಾಲಿನ ಪುಡಿ -3 ಕಪ್
– ಕಂಡೆ ನ್ಸೇಡ್ ಮಿಲ್ಕ್ – 3 ರಿಂದ 4 ಕಪ್
– ಏಲಕ್ಕಿ ಪುಡಿ -ಸ್ವಲ್ಪ
ಮಾಡುವ ವಿಧಾನ: ಒಂದು ಬಾಣ ಲೆಗೆ 3 ರಿಂದ 4 ಲೀ ಹಾಲನ್ನು ಹಾಕಿ ಚೆನ್ನಾಗಿ ಕಾಯಿಸಿಕೊಂಡು ಅನಂತರ ಅದಕ್ಕೆ ಲಿಂಬು ಹಿಂಡಬೇಕು. ಸ್ವಲ್ಪ ಸಮಯದ ಬಳಿಕ ಹಾಲು ಮತ್ತು ನೀರು ಬೇರೆಯಾಗುತ್ತದೆ. ಅನಂತರ ಅದನ್ನು ಸೊಸಿ ಅದಕ್ಕೆ ಸ್ಪಲ್ಪ ತಣ್ಣೀರು ಹಾಕಿ 10 ನಿಮಿಷ ಒಂದು ಬಟ್ಟೆಯಲ್ಲಿ ಕಟ್ಟಿಡಬೇಕು. ಅನಂತರ ಇನ್ನೊಂದು ಬಾಣಲೆಗೆ ತುಪ್ಪ, ಅರ್ದ ಕಪ್ ಹಾಲು ಮತ್ತು ಕೆನೆ ಅಥವಾ ಮಲಾಯಿ ಕ್ರೀಮ್ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ಅನಂತರ ಅದಕ್ಕೆ ಹಾಲಿನ ಪುಡಿಯನ್ನು ಹಾಕಿ ಕಲಸಿಕೊಳ್ಳಿ ಅದು ಮೃದುವಾಗಿ ಬೆಣ್ಣೆಯಂತಾದ ಮೇಲೆ ಅದಕ್ಕೆ ಮೊದಲು ಕಟ್ಟಿಟ್ಟ ಮಿಶ್ರಣವನ್ನು ಪುಡಿ ಪುಡಿ ಮಾಡಿ ಬೇರೆಸಿಕೊಂಡು ಎರಡು ಮಿಶ್ರಣವನ್ನು ಚೆನ್ನಾಗಿ ಗಂಟುಗಳಿಲ್ಲದಂತೆ ಮಿಕ್ಸ್ ಮಾಡಿಕೊಳ್ಳ ಬೇಕು ಇದಕ್ಕೆ ಅನಂತರ ಕಂಡೆ ನ್ಸೇಡ್ ಮಿಲ್ಕ್ ಅನ್ನು ಬೇರೆಸಿ ಸಣ್ಣ ಉರಿಯಲ್ಲಿ ಅದನ್ನು ಮಿಕ್ಸ್ ಮಾಡಿ ಕೊಳ್ಳಿ, ಅದು ಸ್ವಲ್ಪ ದಪ್ಪ ಮಿಶ್ರಣಕ್ಕೆ ಬರುತ್ತಿದ್ದಂತೆ ಏಲಕ್ಕಿ ಪುಡಿ ಹಾಕಿ ಕಲಸಿ ಅದನ್ನು ಅದೇ ಬಾಣಲೆಯಲ್ಲಿ ಹರಡಿರಿ. 10 ನಿಮಿಷದ ಬಳಿಕ ಚಿಕ್ಕ ಚಿಕ್ಕ ಉಂಡೆಗಳಂತೆ ಮಾಡಿ ಕೊಳ್ಳಿ ಇವುಗಳು ಯಾವ ಕಡೆಯಲ್ಲೂ ಬಿರುಕು ಬರದಂತೆ ಇರಬೇಕು. ಹಾಗೆ ಉಂಡೆ ಕಟ್ಟಿಕೊಂಡಲ್ಲಿ ಮಲಾಯಿ ಲಡ್ಡು ಸವಿಯಲು ಸಿದ್ಧ.
-(ಸಂಗ್ರಹ)ಪ್ರೀತಿ ಭಟ್