ಬೆಂಗಳೂರು: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯು “ಬ್ರೈಡ್ಸ್ ಆಫ್ ಇಂಡಿಯಾ’ ಐದನೇ ಆವೃತ್ತಿಯ ಕಾಫಿ ಟೇಬಲ್ ಪುಸ್ತಕವನ್ನು ನಟಿ ತಮನ್ನಾ ಭಾಟಿಯಾ ನಗರದಲ್ಲಿ ಬಿಡುಗಡೆಗೊಳಿಸಿದರು.
ಒಂದನೇ ಶತಮಾನದಿಂದ 20ನೇ ಶತಮಾನದವರೆಗಿನ ಆಭರಣ ವೈಭವವನ್ನು ಪ್ರತಿಫಲಿಸುವಂತಹ ಸಾಲು ಸಾಲು ಚಿತ್ರಗಳನ್ನು ಈ ಕಾಫಿ ಟೇಬಲ್ ಪುಸ್ತಕ ಒಳಗೊಂಡಿದೆ. ಜತೆಗೆ ದೇಶದ ನಾನಾ ಸಾಮ್ರಾಜ್ಯಗಳ ಆಡಳಿತಾವಧಿಯಲ್ಲಿನ ಆಭರಣ ತಯಾರಿಕಾ ಕಲೆ ಕುರಿತ ಮಾಹಿತಿಯು ಪುಸ್ತಕದಲ್ಲಿದೆ.
ಕಾಫಿ ಟೇಬಲ್ ಪುಸ್ತಕ ಬಿಡುಗಡೆ ವೇಳೆ ಮಾತನಾಡಿದ ಮಲಬಾರ್ ಸಮೂಹದ ಅಧ್ಯಕ್ಷ ಎಂ.ಪಿ.ಅಹಮ್ಮದ್, ಬ್ರೈಡ್ಸ್ ಆಫ್ ಇಂಡಿಯಾ ಆವೃತ್ತಿ ಸರಣಿಯು ಆಭರಣ ಪ್ರಿಯರಿಗೆ ದೇಶದ ಆಭರಣ ವಿನ್ಯಾಸವನ್ನು ಪರಿಚಯಿಸುವ ಜತೆಗೆ ಪ್ರಸ್ತುತ ಕಾಲಘಟ್ಟಕ್ಕೆ ಹೊಂದುವ ಆಭರಣಗಳ ಆಯ್ಕೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಸುಮಾರು 2000 ವರ್ಷಗಳ ಸುದೀರ್ಘ ಅವಧಿಯಲ್ಲಿನ ಆಭರಣ ವೈಭವವನ್ನು ಜನರಿಗೆ ತಿಳಿಸುವ ಜತೆಗೆ ಪ್ರಸ್ತುತ ಟ್ರೆಂಡ್‌ಗೆ ಸಂಬಂಧಪಟ್ಟಂತೆ ಸೂಕ್ತ ವಿನ್ಯಾಸವನ್ನು ಕಂಡುಕೊಳ್ಳಲು ಸಹಕಾರಿಯಾಗಲಿದೆ. ಐದು ಆವೃತ್ತಿಗಳಲ್ಲಿ 28 ಬಗೆಯ ವಿವಾಹ ಸಂಪ್ರದಾಯದ ಜತೆಗೆ ಆಭರಣ ಪರಂಪರೆಯನ್ನು ಪರಿಚಯಿಸಿದೆ.
ಐದನೇ ಆವೃತ್ತಿಯಲ್ಲಿನ ಮಾಹಿತಿಯು ಈ ಹಿಂದಿನ ಆವೃತ್ತಿಗಳಿಗಿಂತ ಹೆಚ್ಚು ಪ್ರಿಯವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಮಲಬಾರ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಒ.ಅಷರ್, ವಲಯ ಮುಖ್ಯಸ್ಥ ಇಫು ರೆಹಮಾನ್ ಇತರರು ಉಪಸ್ಥಿತರಿದ್ದರು.