Advertisement
ನಗರದ ಬಾಲಭವನದಲ್ಲಿ ನಡೆದ ಕೊಡವ ಮಕ್ಕಡ ಕೂಟ ಸಂಘಟನೆಯ ನಾಲ್ಕನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡವ ಸಮುದಾಯದ ಸಂಸ್ಕೃತಿಯ ಬೆಳವಣಿಗೆ ಎಂದರೆ ಅದು ಕೇವಲ ನಡೆ ನುಡಿ, ಊಟೋಪಚಾ ರಕ್ಕಷ್ಟೇ ಅಲ್ಲ, ಸಾಹಿತ್ಯ ಸಂಸ್ಕೃತಿ ಹೀಗೆ ಎಲ್ಲಾ ಕ್ಷೇತ್ರ ಗಳಲ್ಲು ಬೆಳವಣಿಗೆಯನ್ನು ಸಾಧಿಸಬೇಕೆಂದರು. ಪ್ರತಿ ಯೊಬ್ಬ ಕೊಡವರು ನಮ್ಮ ಸಂಸ್ಕೃತಿಯ ಸಂರಕ್ಷಣೆೆಗೆ ಮುಂದಾಗಬೆೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು ಹಾಗೂ ಜಾನಪದ ತಜ್ಞರಾದ ಬಾಚರಣಿಯಂಡ ಅಪ್ಪಣ್ಣ ಅವರು ಮಾತನಾಡಿ ಪಂದ್ಯಂಡ ಬೆಳ್ಯಪ್ಪ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧಿ ತಣ್ತೀಗಳಿಗೆ ಮಾರು ಹೋಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಳವಣಿಗೆಗೆ ತಮ್ಮ ಅಪೂರ್ವ ಕಾಣಿಕೆ ನೀಡಿದ ಪಂದ್ಯಂಡ ಬೆಳ್ಯಪ್ಪ ಅವರ ನಿಸ್ವಾರ್ಥ ಸೇವೆಯ ಹಿನ್ನೆಲೆಯಲ್ಲಿ 1919 ರಿಂದ 1952 ನಡುವಿನ ಕೊಡಗಿನ ಅವಧಿ ಪಂದ್ಯಂಡ ಬೆಳ್ಯಪ್ಪ ಯುಗವೆಂದು ಬಣ್ಣಿಸಿದರು.
Related Articles
Advertisement
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜ್ಜಿರ ಅಯ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆಯ ಮೂಲಕ ಕೊಡವ ಸಂಸ್ಕೃತಿಯ ಬೆಳವಣಿಗೆಗೆ ಹಾಗೂ ಮಕ್ಕಳಿಗೆ ಪೋ›ತ್ಸಾಹ ನೀಡುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೊಡವ ವಿರೋಧಿ ಧೋರಣೆಗಳು ಸಮಾಜದಲ್ಲಿ ಕಂಡು ಬರುತ್ತಿದೆ ಎಂದು ಆರೋಪಿಸಿದರು. ಪ್ರಸ್ತುತ ಸಾಕಷ್ಟು ವ್ಯಾಪಾರ ವಹಿವಾಟುಗಳಲ್ಲಿ ಕೊಡವರ ಪೀಚೆಕತ್ತಿ, ವಡಿಕತ್ತಿಯನ್ನು ಚಿಹ್ನೆಯನ್ನಾಗಿ ಬಳಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
“ಚಾಯಿ’ ಪುಸ್ತಕ ಬಿಡುಗಡೆಇದೇ ಸಂದರ್ಭ ಉಳುವಂಗಂಡ ಕಾವೇರಿ ಉದಯ ಅವರು ಬರೆದ ಪುಸ್ತಕ ಚಾಯಿ ಕೃತಿಯನ್ನು ಅತಿಥಿ ಗಣ್ಯರು ಅನಾವರಣಗೊಳಿಸಿದರು. ಕೂಟದ ಪ್ರಮುಖರಾದ ಪುತ್ತೇರಿರ ಕರುಣ್ ಕಾಳಯ್ಯ ಕೂಟ ನಡೆದು ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಪಂದ್ಯಂಡ ಬೆಳ್ಯಪ್ಪ ಅವರ ಮಗ ಪಂದ್ಯಂಡ ವಿಜು ಬೆಳ್ಯಪ್ಪ, ಕನ್ನಂಡ ನಿರ್ಮಲ ಸೋಮಯ್ಯ, ಕೊಂಗೇಟಿರ ಅಚ್ಚಪ್ಪ, ಅಲ್ಲಾರಂಡ ವಿಠಲ ನಂಜಪ್ಪ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಕೊಡವ ಮಕ್ಕಡ ಕೂಟದಿಂದ ನಗರದ ನಗರಸಭೆಯ ಹಿಂಭಾಗದ ರಸ್ತೆಗೆ ಕೊಡಗಿನ ಗಾಂಧಿ ಎಂದೇ ಖ್ಯಾತನಾಮರಾಗಿರುವ ಪಂದ್ಯಂಡ ಬೆಳ್ಯಪ್ಪ ಅವರ ಹೆಸರನ್ನಿರಿಸಿ ಫಲಕವನ್ನು ಅನಾವರಣಗೊಳಿಸಲಾಯಿತು.