Advertisement

“ಒಂದಲ್ಲಾ ಎರಡಲ್ಲಾ”ಚಿತ್ರದ ಆಡಿಷನ್ ಮೇಕಿಂಗ್ ಸಾಂಗ್ ರಿಲೀಸ್: Watch

04:09 PM Aug 08, 2018 | Team Udayavani |

ಮಾಸ್ಟರ್ ರೋಹಿತ್ ಅಭಿನಯದ “ಒಂದಲ್ಲಾ ಎರಡಲ್ಲಾ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಕತ್ ಸೌಂಡು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ “ಹಾಡಲು ಒಂದು ರಾಗ ಬೇಕು ಬಾಳಲು ಒಂದಾಗಬೇಕು’ ಎಂಬ ಆಡಿಷನ್ ಮೇಕಿಂಗ್ ಹಾಡನ್ನು ಬಿಡುಗಡೆ ಮಾಡಿದೆ. 

Advertisement

ಚಿತ್ರಕ್ಕೆ “ರಾಮಾ ರಾಮಾ ರೇ’ ನಿರ್ದೇಶಕ ಡಾ. ಸತ್ಯಪ್ರಕಾಶ್ ಆ್ಯಕ್ಷನ್ ಕಟ್ ಹೇಳಿದ್ದು, ಡಿ ಸತ್ಯ ಪ್ರಕಾಶ್ ಅವರು ಸಹ ನಿರ್ಮಾಪಕರಾಗಿದ್ದು, ಹೆಬ್ಬುಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ನಿರ್ಮಾಣದಲ್ಲಿ ಸಿನಿಮಾ ತಯಾರಾಗಿದೆ. 

ಅಲ್ಲದೇ ವಾಸುಕಿ ವೈಭವ್‌ ಸಂಗೀತ, ಲವಿತ್‌ ಛಾಯಾಗ್ರಹಣ, ವರದರಾಜ ಕಾಮತ್‌ ಕಲಾನಿರ್ದೇಶನ, ಕೆಂಪರಾಜು ಸಂಕಲನ ಚಿತ್ರಕ್ಕಿದೆ. ಸ್ಮಿತಾ ಉಮಾಪತಿ ಅವರ ಡಿ.ಎನ್  ಸಿನಿಮಾ ಬ್ಯಾನರ್ ನಲ್ಲಿ ಚಿತ್ರ ತಯಾರಾಗಿದ್ದು, ತಾರಾಗಣದಲ್ಲಿ ಸಾಯಿ ಕೃಷ್ಣ ಕುಡ್ಲ, ನಾಗಭೂಷಣ್ ಸೇರಿದಂತೆ ಅನೇಕರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next