Advertisement

ಅಭಿವೃದ್ಧಿಯಲ್ಲಿ ಇತಿಹಾಸ ನಿರ್ಮಾಣ: ಸಚಿವ ಭಗವಂತ ಖೂಬಾ

03:20 PM Jan 21, 2023 | Team Udayavani |

ಹುಬ್ಬಳ್ಳಿ: ದೇಶದ ಅಭಿವೃದ್ಧಿ, ವರ್ಚಸ್ಸು ಹೆಚ್ಚಳ, ಪಾರದರ್ಶಕವಾಗಿ ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡಿಕೆ ನಿಟ್ಟಿನಲ್ಲಿ ಕಳೆದ ಎಂಟುವರೆ ವರ್ಷಗಳಿಂದ ಇತಿಹಾಸ ನಿರ್ಮಾಣ ಕಾರ್ಯ ನಡೆದಿದೆ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಹಾಯಕ ಸಚಿವ ಭಗವಂತ ಖೂಬಾ ಹೇಳಿದರು.

Advertisement

ಕೆಎಲ್‌ಇ ತಾಂತ್ರಿಕ ವಿವಿ ಬಯೋಟೆಕ್‌ ಸಭಾಭವನದಲ್ಲಿ ಕೇಂದ್ರ ಸರಕಾರದ ಆದಾಯಕರ ಇನ್ನಿತರ ಇಲಾಖೆಗಳ ಉದ್ಯೋಗಿಗಳಿಗೆ ನೇಮಕಾತಿ ಪತ್ರ ನೀಡಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು 10 ಲಕ್ಷ ಯುವಕರಿಗೆ ಉದ್ಯೋಗ ನೀಡಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪವಾಗಿದೆ. ಅದಕ್ಕೆ ಪೂರಕವಾಗಿ ದೇಶದ ವಿವಿಧ ಕಡೆಗಳಲ್ಲಿ ಏಕಕಾಲಕ್ಕೆ ನೇಮಕಾತಿ ಪತ್ರ ನೀಡಿಕೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಇದು ಮೂರನೇ
ನೇಮಕಾತಿ ಪತ್ರ ನೀಡಿಕೆ ಕಾರ್ಯಕ್ರಮವಾಗಿದೆ ಎಂದರು.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ದೇಶಾದ್ಯಂತ ಸುಮಾರು 75 ಸಾವಿರ ಜನರಿಗೆ ನೇಮಕಾತಿ ಪತ್ರ ನೀಡಲಾಗಿತ್ತು. ನವೆಂಬರ್‌ನಲ್ಲಿ 72 ಸಾವಿರ ಜನರಿಗೆ, ಇದೀಗ 71 ಸಾವಿರ ಉದ್ಯೋಗಿಗಳಿಗೆ ನೇಮಕಾತಿ ಪತ್ರ ನೀಡಲಾಗುತ್ತಿದೆ. ಹುಬ್ಬಳ್ಳಿ ಕೇಂದ್ರದಲ್ಲಿ ಸುಮಾರು 206 ಉದ್ಯೋಗಿಗಳಿಗೆ ನೇಮಕಾತಿ ಪತ್ರ ನೀಡಲಾಗುತ್ತಿದೆ. ಯಾವುದೇ ಶಿಫಾರಸು, ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಅರ್ಹತೆ, ಪ್ರತಿಭೆ ಆಧಾರದಲ್ಲಿ ಪಾರದರ್ಶಕವಾಗಿ ನೇಮಕ ಪ್ರಕ್ರಿಯೆ ನಡೆದಿರುವುದು ದಾಖಲೆ ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆ, ಬದಲಾವಣೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡ ಕ್ರಮಗಳಿಂದ ವಿಶ್ವದ ಅನೇಕ ದೇಶಗಳು ಆರ್ಥಿಕ ಹಿಂಜರಿಕೆ ಆತಂಕಕ್ಕೆ ಸಿಲುಕಿದರೂ ಭಾರತಕ್ಕೆ ಅಂತಹ ಆತಂಕವಿಲ್ಲ. ಆತ್ಮನಿರ್ಭರ ಯೋಜನೆಯಡಿ ರಕ್ಷಣಾ ಕ್ಷೇತ್ರಕ್ಕೆ ಬೇಕಾಗುವ ಸುಮಾರು 400ಕ್ಕೂ ಅಧಿಕ ಉತ್ಪನ್ನಗಳು ದೇಶಿಯವಾಗಿ ಉತ್ಪಾದನೆಗೊಳ್ಳುತ್ತಿವೆ.

ಸರಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿಯೂ ಉದ್ಯೋಗ ಸೃಷ್ಟಿ ಕಾರ್ಯ ನಡೆಯುತ್ತಿದೆ. ಮುದ್ರಾ ಯೋಜನೆಯಡಿ ಅಂದಾಜು 21 ಕೋಟಿ ಜನರಿಗೆ ಸಾಲ ದೊರೆತಿದ್ದು, ಶೇ.65 ಮಹಿಳೆಯರು ಇದರ ಲಾಭ ಪಡೆದುಕೊಂಡಿದ್ದಾರೆ. ಎಂಎಸ್‌ಎಂಇಗಳಿಗೆ ಆಂದಾಜು 21 ಲಕ್ಷ ಕೋಟಿ ರೂ. ವಿಶೇಷ ಸಹಾಯಧನವಾಗಿ ನೀಡಲಾಗಿದೆ ಎಂದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ಆರ್ಥಿಕ ಚೇತರಿಕೆ, ಮೂಲಸೌಲಭ್ಯಗಳ ಹೆಚ್ಚಳ, ಸುರಕ್ಷತೆಗೆ ಪ್ರಧಾನಿ ನರೇಂದ್ರ
ಮೋದಿಯವರು ಒತ್ತು ನೀಡಿದ್ದಾರೆ. ಇಡೀ ಜಗತ್ತು ಮೋದಿವರನ್ನು ಸಮರ್ಥ ನಾಯಕ ಎಂದು ಒಪ್ಪಿಕೊಳ್ಳುತ್ತಿದೆ. ಉದ್ಯೋಗ ನೇಮಕದಲ್ಲಿ ಶಿಫಾರಸು, ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ನೇಮಕ ಕೈಗೊಂಡರೆ ನೌಕರರು ದಕ್ಷತೆ, ಪಾರದರ್ಶಕ ಆಡಳಿತಕ್ಕೆ ಒತ್ತು ನೀಡುತ್ತಾರೆ. ಕೇಂದ್ರ ಸರಕಾರ ಪಾದರ್ಶಕ ನೇಮಕ ಪ್ರಕ್ರಿಯೆ ಕೈಗೊಂಡಿದೆ ಎಂದರು.

Advertisement

ಪ್ರಧಾನಿಯವರು ಉದ್ಯೋಗಿಗಳನ್ನು ಉದ್ದೇಶಿಸಿ ವರ್ಚುವಲ್‌ ಮೂಲಕ ಮಾತನಾಡಿದ ನಂತರದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ನೇಮಕಾತಿ ಪತ್ರಗಳನ್ನು ನೀಡಿದರು. ಕೇಂದ್ರ ಆದಾಯ ಕರ ಇಲಾಖೆ ಪ್ರಧಾನ ಮುಖ್ಯ ಆಯುಕ್ತ ಚೈತ್ರಾಲಿ ಪನ್ಮಯ, ಪ್ರಧಾನ ಆಯುಕ್ತರಾದ ಮನೋಜ ಜೋಶಿ, ವಂದನಾ ಸಾಗರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next