Advertisement

‘ಯು/ಐ’ ಮೇಕಿಂಗ್‌ ಗ್ಲಿಂಪ್ಸ್‌ ನಲ್ಲಿ ಉಪ್ಪಿ  ಸ್ಟೈಲ್‌

03:08 PM Jan 03, 2023 | Team Udayavani |

ಸೆಟ್ಟೇರಿದಾಗಿನಿಂದಲೂ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಒಂದಷ್ಟು ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ರಿಯಲ್‌ ಸ್ಟಾರ್‌ ಉಪೇಂದ್ರ ನಟನೆ ಮತ್ತು ನಿರ್ದೇಶನದ “ಯು/ಐ’ ಸಿನಿಮಾದ ಕೆಲಸಗಳು ಭರದಿಂದ ನಡೆಯುತ್ತಿದೆ. ಇನ್ನು ಉಪೇಂದ್ರ ಅವರ ಸಿನಿಮಾ ಎಂದ ಕೂಡಲೇ ಸಿನಿಪ್ರಿಯರು ಮತ್ತು ಉಪ್ಪಿ ಫ್ಯಾನ್ಸ್‌ ಚಿತ್ತ ಸಹಜವಾಗಿಯೇ “ಯು/ಐ’ ಸಿನಿಮಾದ ಮೇಲೆ ಹೆಚ್ಚಾಗಿಯೇ ಇದ್ದು, ಆ ಕುತೂಹಲವನ್ನು ಕೊಂಚ ಮಟ್ಟಿಗೆ ತಣಿಸುವಂತೆ, ಚಿತ್ರತಂಡ “ಯು/ಐ’ ಸಿನಿಮಾದ ಗ್ಲಿಂಪ್ಸ್‌ ಬಿಡುಗಡೆ ಮಾಡಿದೆ.

Advertisement

ಹೊಸ ವರ್ಷದ ಆರಂಭದಲ್ಲಿಯೇ “ಯು/ಐ’ ಸಿನಿಮಾದ ಮೇಕಿಂಗ್‌ ಗ್ಲಿಂಪ್ಸ್‌ ಅನ್ನು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. “ಯು/ಐ’ ಸಿನಿಮಾದ ಅದ್ಧೂರಿ ಮೇಕಿಂಗ್‌ನ ಒಂದಷ್ಟು ಝಲಕ್‌ ಗಮನ ಸೆಳೆಯುವಂತಿದ್ದು, ಗ್ಲಿಂಪ್ಸ್‌ ನಲ್ಲಿ ಉಪ್ಪಿ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯವನ್ನು ಕೋರಿದ್ದಾರೆ.

ಅತ್ಯಾಧುನಿಕ ಕ್ಯಾಮರಾಗಳ ಬಳಕೆ, ವಿಭಿನ್ನ ಸೆಟ್‌ಗಳು ಗ್ಲಿಂಪ್ಸ್‌ನಲ್ಲಿ ಹೈಲೈಟ್‌ ಆಗುವಂತಿದ್ದು, ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಹೆಚ್ಚಾಗುವಂತೆ ಮಾಡಿದೆ.  ಎಲ್ಲ ಅಂದುಕೊಂಡಂತೆ ನಡೆದರೆ, ಈ ವರ್ಷದ ಮಧ್ಯ ಭಾಗದಲ್ಲಿ ಉಪ್ಪಿಯ ಹೊಸ ಅವತಾರ “ಯು/ಐ’ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಮತ್ತೂಂದೆಡೆ ಉಪೇಂದ್ರ ಅಭಿನಯದ “ಕಬ್ಜ’ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಕೂಡ ಭರದಿಂದ ನಡೆಯುತ್ತಿದೆ. “ಕಬ್ಜ’ ಸಿನಿಮಾ ಕೂಡ ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು, ಮಲೆಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ “ಕಬ್ಜ’ ಸಿನಿಮಾದ ಟೀಸರ್‌ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ರೆಸ್ಪಾನ್ಸ್‌ ಪಡೆದುಕೊಂಡಿದ್ದು, ಆರ್‌. ಚಂದ್ರು ಈ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next