ನವ ದೆಹಲಿ : ರಷ್ಯಾದ ಆ್ಯಂಟಿ ಕೋವಿಡ್ ಲಸಿಕೆ ಸ್ಪುಟ್ನಿಕ್ ವಿ ಲಸಿಕೆಯ ಉತ್ಪಾದಕರು ದೆಹಲಿಗೆ ನೇರವಾಗಿ ಲಸಿಕೆಯನ್ನು ರವಾನೆ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಕೇಜ್ರಿವಾಲ್, ಉತ್ಪಾದಕರೊಂದಿಗೆ ಉನ್ನತ ಮಟ್ಟದ ಮಾತುಕತೆಯ ನಂತರ ದೆಹಲಿಗೆ ಸ್ಪಟ್ನಿಕ್ ವಿ ಲಸಿಕೆಯನ್ನು ನೀಡಲು ಒಪ್ಪಿದ್ದಾರೆ. ಆದರೇ, ಎಷ್ಟು ಪ್ರಮಾಣದಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ನೀಡುತ್ತಾರೆ ಎನ್ನುವುದರ ಬಗ್ಗೆ ಇನ್ನೂ ಮಾತುಕತೆ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಕೇಂದ್ರದಿಂದ ರಾಜ್ಯಕ್ಕೆ 1200 ಮೆಟ್ರಿಕ್ ಟನ್ ದ್ರವೀಕೃತ ಆಮ್ಲಜನಕ ಹಂಚಿಕೆ: ಶೆಟ್ಟರ್
ಲಸಿಕೆಯ ವ್ಯವಹಾರದ ಬಗ್ಗೆ ಉತ್ಪಾದಕರೊಂದಿಗೆ ದೆಹಲಿ ಸರ್ಕಾರ ಉನ್ನತ ಮಟ್ಟದ ಮಾತಕತೆ ನಡೆಸುತ್ತಿದ್ದು, ಅವರು ಈಗಾಗಲೇ ಲಸಿಕೆಯನ್ನು ನೀಡಲು ಒಪ್ಪಿಧಿಕಗೆ ಸೂಚಿಸಿದ್ದಾರೆ. ಎಷ್ಟು ಪ್ರಮಾಣದಲ್ಲಿ ಹಾಗೂ ಎಷ್ಟು ಹಂತಗಳಲ್ಲಿ ಲಸಿಕೆಯನ್ನು ಕಂಪೆನಿ ಪೂರೈಸುತ್ತದೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇನ್ನು ಕೆಲವು ದಿನಗಳಲ್ಲಿ ತಿಳಿಯುತ್ತದೆ. ಆದಾಗ್ಯೂ, ನಮ್ಮ ಸರ್ಕಾರದ ಉನ್ನತ ಅಧಿಕಾರಿಗಳು ಹಾಗೂ ಲಸಿಕೆ ಉತ್ಪಾದಕರು ಮಂಗಳವಾರ(ಮೇ. 25)ದಂದು ನೇರವಾಗಿ ಭೇಟಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇನ್ನು, ದ್ವಾರಕಾದ ವೆಗಾಸ್ ಮಾಲ್ ನಲ್ಲಿ ದೆಹಲಿಯ ಮೊದಲ ಡ್ರೈವ್-ಥ್ರೂ ವ್ಯಾಕ್ಸಿನೇಷನ್ ಕೇಂದ್ರವನ್ನು ಪ್ರಾರಂಭಿಸಿ ಮಾತನಾಡಿದ ಅವರು, ಮಾಡರ್ನಾ ಮತ್ತು ಫೈಜರ್ ತಯಾರಿಸಿದ ಲಸಿಕೆಗಳು ಮಕ್ಕಳಿಗೆ ಸೂಕ್ತವಾಗಿವೆ ಮತ್ತು ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಈ ಲಸಿಕೆಗಳನ್ನು ಾಮದು ಮಾಡಿಕೊಳ್ಳಬೇಕು ಎಂದಿದ್ದಾರೆ.
ದೆಹಲಿ ಸರ್ಕಾರ ಮಾಡೆರ್ನಾ ಹಾಗೂ ಫೈಜರ್ ಕಂಪೆನಿಯೊಂದಿಗೆ ಲಸಿಕೆ ಖರೀದಿಯ ಬಗ್ಗೆ ಮಾತುಕತೆ ನಡೆಸಿದಾಗ ಆ ಕಂಪೆನಿಗಳು ಲಸಿಕೆಯ ವ್ಯವಹಾರವನ್ನು ನಾವು ಭಾರತ ಸರ್ಕಾರದೊಂದಿಗೆ ಮಾತ್ರ ನಡೆಸುತ್ತೇವೆ ಎಂದಿದ್ದವು. ಕೇಜ್ರಿವಾಲ್, ಫೈಜರ್ ಹಾಗೂ ಮಾಡೆರ್ನಾ ಲಸಿಕೆಗಳನ್ನು ಆಮದು ಮಾಡಿಕೊಳ್ಖುವಂತೆ ಕೇಂದ್ರ ಸರ್ಕಾರಕ್ಕೆ ೀ ಹಿಂದೆಯೂ ಒತ್ತಾಯಿಸಿದ್ದರು.
ಇದನ್ನೂ ಓದಿ : ಡಾ. ಎಚ್.ಎಸ್. ದೊರೆಸ್ವಾಮಿ: ಶತಮಾನದ ವ್ಯಕ್ತಿ : ಸಂತಾಪ ಸೂಚಿಸಿದ ಸಿದ್ದರಾಮಯ್ಯ