Advertisement

“ಮನಸು ದೃಢಗೊಳಿಸಿ ಧೈರ್ಯದಿಂದ ಮುನ್ನಡೆಯಿರಿ ‘

10:19 PM Jun 13, 2019 | Team Udayavani |

ವಿದ್ಯಾನಗರ: ಭವಿಷ್ಯದ ಕಡೆಗಿನ ಕನಸುಗಳು ನಮ್ಮೊಳಗಿದ್ದು ಏನಾದರೂ ಸಾಧಿಸುವ ಹಂಬಲ ಗಟ್ಟಿಗೊಂಡಾಗ ಮಾತ್ರ ಜೀವನ ಅರ್ಥಪೂರ್ಣವಾಗುವುದು. ಆದುದರಿಂದ ಸ್ಪಷ್ಟವಾದ ಗುರಿಯನ್ನಿಟ್ಟು ಅದನ್ನು ತಲುಪುವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡುತ್ತಲೇ ಇರಬೇಕು.

Advertisement

ಎದುರಾಗುವ ಸಣ್ಣ ಸಮಸ್ಯೆಗೂ ಹೆದರಿ ಹಿಂಜರಿಯುವ ಬದಲು ಮನಸನ್ನು ದೃಢಗೊಳಿಸಿ ಧೆ„ರ್ಯದಿಂದ, ಛಲದಿಂದ ಮುನ್ನಡೆಯಬೇಕು. ಆಗ ಮಾತ್ರ ಜೀವನದಲ್ಲಿ ಉನ್ನತ ಗೆಲುವನ್ನು ಸಾಸಿಸಾರ್ಥಕತೆಯನ್ನು ಕಂಡುಕೊಳ್ಳಲು ಸಾಧ್ಯ ಎಂದು ಕಾಸರಗೋಡು ಸಂಸದ ರಾಜಮೋಹನ್‌ ಉಣ್ಣಿತ್ತಾನ್‌ ಅವರು ಹೇಳಿದರು.

ಚೆಂಗಳ ಗ್ರಾಮ ಪಂಚಾಯತ್‌ ವಿಜಯೋತ್ಸವ ಆಚರಣೆ ಮತ್ತು ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ರಾಜ್‌ಮೋಹನ್‌ ಉಣ್ಣಿತ್ತಾನ್‌ ಅವರು ಮಾತನಾಡಿದರು.

ರಾಜಕೀಯ, ಶೆ„ಕ್ಷಣಿಕ, ಸಾಮಾಜಿಕ ಯಾವುದೇ ಕ್ಷೇತ್ರವಾದರೂ ಪ್ರಯತ್ನದಿಂದ ಮಾತ್ರ ಕಾರ್ಯಸಾಧನೆ ಸಾಧ್ಯ. ಯಾರು ಪ್ರಯತ್ನಿಸುತ್ತಾರೋ ಅವರು ಸಾಧನೆಯ ಮೂಲಕ ಗುರುತಿಸಲ್ಪಡುತ್ತಾರೆ, ಇತರರಿಗೆ ಮಾದರಿಯಾಗುತ್ತಾರೆ ಎಂದು ಅವರು ಹೇಳಿದರು.

ಚೆಂಗಳ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶಾಹಿನಾ ಸಲೀಂ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಕ್ಷೇಮ ಸ್ಥಾಯಿಸಮಿತಿ ಅಧ್ಯಕ್ಷರಾದ ಅಹಮ್ಮದ್‌ಹಾಜಿ, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷೆ ಹಾಜರಾ ಮುಹಮ್ಮದ್‌ ಕುಂಞಿ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಹಿದಾ ಮುಹಮ್ಮದ್‌ ಕುಂಞಿ, ಸದಸ್ಯರುಗಳಾದ ಅಬ್ದುಲ್ಲ ಕುಂಞಿ, ಸುಫೆ„ಜಾ ಮುನೀರ್‌, ಸಿಂಧು.ಸಿ, ಬಿಆರ್‌ಸಿ ಟ್ರೆŒ„ನರ್‌ ಜಯರಾಮ್‌.ಜೆ, ಡಿಸಿಸಿ ಜನರಲ್‌ ಸೆಕ್ರೆಟರಿ ಜೇಮ್ಸ್‌.ಸಿ.ವಿ, ಮುಸ್ಲಿಂ ಲೀಗ್‌ ಜಿಲ್ಲಾ ಕಾರ್ಯದರ್ಶಿ ಮೂಸಾ.ಬಿ ಚೆರ್ಕಳ, ಕಾಂಗ್ರೆಸ್‌ ಮಂಡಲ ಸಮಿತಿ ಅಧ್ಯಕ್ಷ ಪುರುಷೋತ್ತಮನ್‌ ನಾಯರ್‌, ಮುಸ್ಲಿಂ ಲೀಗ್‌ ಚೆಂಗಳ ಪಂಚಾಯತ್‌ ಸಮಿತಿ ಅಧ್ಯಕ್ಷ ಮಕ್ಕಾರ್‌ ಮಾಸ್ಟರ್‌, ಕಾರ್ಯದರ್ಶಿ ರಹ್ಮಾನ್‌, ಮೂಸಕುಟ್ಟಿ ಮಾಸ್ಟರ್‌ ಉಪಸ್ಥಿತರಿದ್ದರು.

Advertisement

ಕಣ್ಣೂರು ವಿಶ್ವವಿದ್ಯಾಲಯ ಎಂ.ಕಾಂ. ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್‌ ಗಳಿಸಿದ ನಿಶಿತಾ.ಎನ್‌, ಪಂಚಾಯತ್‌ ವ್ಯಾಪ್ತಿಯಲ್ಲಿ ಕಳೆದ ಎಸ್‌.ಎಸ್‌.ಎಲ್‌.ಸಿ ಹಾಗೂ ಪ್ಲಸ್‌ ಟು ಪರೀಕ್ಷೆಗಳಲ್ಲಿ ಎಲ್ಲ ವಿಷಯಗಳಲ್ಲೂ ಎಪ್ಲಸ್‌ ಪಡೆದ ವಿದ್ಯಾರ್ಥಿಗಳು, ಎಲ್‌.ಎಸ್‌.ಎಸ್‌, ಯು.ಎಸ್‌.ಎಸ್‌ ಸ್ಕಾಲರ್‌ಶಪ್‌ಗೆ ಅರ್ಹತೆ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಮಾತ್ರವಲ್ಲದೆ ಪಂಚಾಯತಿಗೊಳಪಟ್ಟ ಶಾಲೆಗಳಲ್ಲಿ 2018-19ನೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 100 ಶೇ. ಫಲಿತಾಂಶ ಪಡೆದ ಜಿ.ಎಚ್‌.ಎಸ್‌.ಎಸ್‌ ಆಲಂಪಾಡಿ, ಜಿ.ಎಚ್‌.ಎಸ್‌.ಎಸ್‌ ಎಡನೀರು, ಸ್ವಾಮೀಜೀಸ್‌ ಎಚ್‌.ಎಸ್‌.ಎಸ್‌ ಎಡನೀರು ಶಾಲೆಗಳಿಗೂ ಅಭಿನಂದನೆ ಸಲ್ಲಿಸಲಾಯಿತು.

ಹಸುರು ನಿಯಮಗಳನ್ನು ಪಾಲಿಸಿ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸದೇ ವಿವಾಹ ಸಮಾರಂಭವನ್ನು ಆಯೋಜಿಸಿದ ಜಲೀಲ್‌ ಕಡವತ್ತ್ ಸಮಾರಂಭದಲ್ಲಿ ವಿಶೇಷ ಸಮ್ಮಾನಕ್ಕೆ ಭಾಜನರಾದರು. ಕಳೆದ ಶೆ„ಕ್ಷಣಿಕ ವರ್ಷದಲ್ಲಿ ನಿವೃತ್ತರಾದ ಪಂಚಾಯತ್‌ ವ್ಯಾಪ್ತಿಯ ಶಿಕ್ಷಕರನ್ನು ಸಮ್ಮಾನಿಸಿ ಬೀಳ್ಕೊಡಲಾಯಿತು.

ಸೆ„ಕೋತೆರಪಿಸ್ಟ್‌ ಪ್ರದೀಪನ್‌ ಮೇಲೋತ್ತ್ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ ತರಗತಿಯನ್ನು ನಡೆಸಿಕೊಟ್ಟರು. ಪಿಇಸಿ ಕಾರ್ಯದರ್ಶಿ ಸಕರಿಯಾ ತೋಮಸ್‌ ಸ್ವಾಗತಿಸಿ ಇಂಪ್ಲಿಮೆಂಟಿಂಗ್‌ ಆಫೀಸರ್‌ ಜೆ.ಬಿ.ಪ್ರಕಾಶ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next