ಕೆರೂರ: ಬಡ ಕುಟುಂಬಗಳ ಸರ್ವತೋಮುಖ ಬೆಳವಣಿಗೆ ಹಾಗೂ ಸ್ವಾವಲಂಬಿ ಬದುಕು ರೂಪಿಸಲು ಧರ್ಮಾಧಿ ಕಾರಿ ಡಾ| ವೀರೇಂದ್ರ ಹೆಗ್ಗಡೆ ಹುಟ್ಟು ಹಾಕಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅನೇಕ ಬಡ ಕುಟುಂಬಗಳಿಗೆ ಹಾಗೂ ಮಹಿಳೆಯರಿಗೆ ಸ್ವಾವಲಂಬಿ ಬದುಕು ರೂಪಿಸಲು ಆಶಾಕಿರಣವಾಗಿದೆ ಎಂದು ಜಿಪಂ ಮಾಜಿ ಸದಸ್ಯ ಡಾ| ಎಂ.ಜಿ. ಕಿತ್ತಲಿ ಹೇಳಿದರು.
ಪಟ್ಟಣದಲ್ಲಿ ಏರ್ಪಡಿಸಿದ್ದ ಡಿಜಿಟಲ್ ಸೇವಾ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಈ ಸೇವಾ ಕೇಂದ್ರಗಳಲ್ಲಿ ಇ-ಶ್ರಮ ಕಾರ್ಡ್ ಗಳನ್ನು ಉಚಿತವಾಗಿ ಮಾಡಿ ಕೊಡಲಾಗುತ್ತಿದೆ. ಕಾರ್ಮಿಕರು, ಬಡ ವರ್ಗದ ಶ್ರಮಿಕರು ಸೌಲಭ್ಯಗಳ ಸದ್ಬಳಕೆ ಪಡೆದುಕೊಳ್ಳಬೇಕು ಎಂದರು.
ಡಿಜಿಟಲ್ ಸೇವಾ ಕೇಂದ್ರಗಳಿಗೆ ಚಾಲನೆ ನೀಡಿದ ಬಾದಾಮಿ ತಾಲೂಕು ಯೋಜನಾಧಿಕಾರಿ ಗಣೇಶ ನಾಯ್ಕ ಮಾತನಾಡಿ, ರಾಜ್ಯದಲ್ಲಿ ಸ್ವಸಹಾಯ ಸಂಘಗಳು ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳ ಜತೆಗೆ ಈಗ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಸಹಸ್ರಾರು ಡಿಜಿಟಲ್ ಸೇವಾ ಕೇಂದ್ರಗಳನ್ನು ಆರಂಭಿಸಿದೆ. ಸಾರ್ವಜನಿಕರಿಗೆ ಇ-ಶ್ರಮ, ಪಾನ್‌ಕಾರ್ಡ್, ಬಿಲ್ ಪೇಮೆಂಟ್ಸ್, ಆಧಾರ್ ತಿದ್ದುಪಡಿ ಮುಂತಾದ ಅನೇಕ ಜನಸ್ನೇಹಿ ಸೇವೆಗಳನ್ನು ಕಡಿಮೆ (ರಿಯಾಯತಿ) ದರದಲ್ಲಿ ಒದಗಿಸಲಾಗುತ್ತಿದೆ ಎಂದರು.
ನಿವೃತ್ತ ಉಪನ್ಯಾಸಕ ಆರ್.ಎಸ್.ನಿಡೋಣಿ ಅವರು, ಕ್ಷೇತ್ರದ ಧರ್ಮಾಧಿ ಕಾರಿಗಳ ಜನಪರ ಕಾಳಜಿಯಿಂದ ಬಾದಾಮಿ ತಾಲೂಕಿನಲ್ಲಿ ಈಗ 33 ಡಿಜಿಟಲ್ ಸೇವಾ ಕೇಂದ್ರಗಳು ಚಾಲನೆ ಪಡೆದಿವೆ. ಸಾರ್ವಜನಿಕರು ಜನಪರ ಸೌಲಭ್ಯಗಳ ಪ್ರಯೋಜನ ಪಡೆಯಬೇಕು ಎಂದರು.
ಹಳಪೇಟ ಓಣಿಯಲ್ಲಿ ಪಪಂ ಸದಸ್ಯ ವಿಜಯಕುಮಾರ ಐಹೊಳ್ಳಿ, ನೆಹರುನಗರದಲ್ಲಿ ಸುವರ್ಣಾ ತಿಪ್ಪಣ್ಣ ಪೂಜಾರ ಹೊಸ ಡಿಜಿಟಲ್ ಸೇವಾ ಕೇಂದ್ರಗಳಿಗೆ ಚಾಲನೆ ನೀಡಿದರು. ತಾಲೂಕು ನೋಡಲ್ ಅಧಿ ಕಾರಿ ಮಂಜು ಮೇದಾರ, ಮೇಲ್ವಿಚಾರಕಿ ರೇಖಾ ಭಜಂತ್ರಿ, ಅಕ್ಕಮ್ಮ ಘಟ್ಟದ, ಕೇಂದ್ರದ ಕಾರ್ಯ ನಿರ್ವಾಹಕಿ ಪ್ರಿಯಾಂಕ ಬೋರಣ್ಣವರ, ತನುಶ್ರೀ ಬೀಳಗಿ ಹಾಗೂ ದಾಕ್ಷಾಯಣಿ ಅಟಗಾಳಿ, ಜ್ಯೋತಿ ಲಕ್ಷೆಟ್ಟಿ, ಅಕ್ಕಮ್ಮ ಶೆಟ್ಟರ, ವಿಜಯಾ ಕಲ್ಯಾಣಿ, ಉಮಾ ಪೂಜಾರ, ಶೋಭಾ ಕಠಾರಿ, ಮಲ್ಲಮ್ಮ ಯಂಡಿಗೇರಿ, ಸಾವಿತ್ರಿ ಮುಂಡಾಸದ, ನಾಗರತ್ನ ಗದ್ದನಕೇರಿ, ಶೋಭಾ ಬಸರಕೋಡ, ರೇಣುಕಾ ಹಾಗೂ ಮೀನಾಕ್ಷಿ ಭಜಂತ್ರಿ, ರಾಜೇಶ್ವರಿ ನಾವಲಗಿ, ಮಂಜುಳಾ ಶಿವಪ್ಪಯ್ಯನಮಠ, ಉಮಾ ಶಿರೋಳ, ಕೃಷ್ಣಾ ಉರಣಕರ, ಅಕ್ಷತಾ ಇತರರು ಪಾಲ್ಗೊಂಡಿದ್ದರು.