ಅಭಿವೃದ್ಧಿ ಕಾರ್ಯದಲ್ಲಿ ಸರ್ವರೂ ಕೊಡುಗೆ ನೀಡಬೇಕು ಎಂದು ವೆಸ್ಟ್‌ಇಂಡೀಸ್‌ನ ಕಿಂಗ್ ಸ್ಟನ್‌ಜಮೈಕಾದ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಉಪಾಧ್ಯಕ್ಷ ಪ್ರೊ| ಎ.ಬಿ. ಕುಲಕರ್ಣಿ ಸಲಹೆ ನೀಡಿದರು.
Advertisement
ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯ ಜ್ಞಾನ ಸೌಧ ಸಭಾ ವೇದಿಕೆಯಲ್ಲಿ ಗುರುವಾರ ವಿಶ್ವವಿದ್ಯಾಲಯದಹತ್ತನೇ ವರ್ಷದ ಸಂಸ್ಥಾಪನಾ ದಿನಾಚರಣೆ ಮತ್ತು ದಶಮಾನೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರಣರಾದವರಿಂದ ಹಿಡಿದು ಸಂಪನ್ಮೂಲ, ಸ್ಥಳ ಹಾಗೂ ಹಣದ ನೆರವು ನೀಡಿದವರು ಸೇರಿ ಎಲ್ಲರ ಕೊಡುಗೆ ಗಣನೀಯವಾಗಿದೆ. ಹೀಗಾಗಿಯೇ ಈ ವಿವಿ ಕಡಿಮೆ ಅವಧಿಯಲ್ಲಿಯೇ ಇಷ್ಟೊಂದು ಪ್ರಗತಿ ಸಾಧಿಸಿದೆ. ಯಾವುದೇ ವಿವಿಯ ಅಭಿವೃದ್ಧಿ ಕುಲಪತಿ ಒಬ್ಬರಿಂದಲೇ ಅಸಾಧ್ಯ. ವಿದ್ಯಾರ್ಥಿಗಳು, ಬೋಧಕರು, ಬೋಧಕೇತರರು, ದಾನಿಗಳು, ಸರ್ಕಾರ ಹೀಗೆ ಸರ್ವರ ಕೊಡುಗೆಯಿಂದ ಬೆಳವಣಿಗೆ ಆಗಲಿದೆ ಎಂದು ಹೇಳಿದರು.
Related Articles
ಕಾರ್ಯೋನ್ಮುಖರಾಗಬೇಕು. ಏಕೆಂದರೆ ವಿವಿ ಕುಲಪತಿಗಳಿಂದ ಸಮಾಜ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತದೆ ಎಂದರು.
Advertisement
ವಿದ್ಯಾರ್ಥಿಗಳಿಗೆ ಉಪಯೋಗ ವಾಗುವಂತಹ ಸಂಗತಿ ಬಗ್ಗೆ ನಿರಂತರವಾಗಿ ಆಲೋಚಿಸಿ, ಅದನ್ನು ಕಾರ್ಯಗತಗೊಳಿಸಬೇಕು ಎಂದರಲ್ಲದೇ, ತಾವು ಈ ಹಿಂದೆ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಪ್ರೋಫೆಸರ್ ಹಾಗೂಡೀನ್ ಆಗಿದ್ದಾಗಿನಿಂದ ಹಿಡಿದು ವಿದೇಶಕ್ಕೆ ತೆರಳಿ ಅಲ್ಲಿ ಯಶಸ್ಸು ಗಳಿಸಿದ ಅನುಭವವನ್ನು ಹಂಚಿಕೊಂಡರು. ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯುವ ಜತೆಗೆ ವಿದ್ಯಾರ್ಥಿಗಳು ಕೌಶಲ್ಯಾಭಿವೃದ್ಧಿಯಲ್ಲಿ ಪರಿಣಿತರಾಗಬೇಕು. ಆಗ ಪದವಿ ಜತೆಗೆ ಪಡೆಯುವ ಮತ್ತೂಂದು ಕೋರ್ಸ್ ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ದಾವಣಗೆರೆಯಲ್ಲಿರುವ ದೃಶ್ಯಕಲಾ ಕಾಲೇಜಿನ ಆವರಣದಲ್ಲಿ ಸಾಕಷ್ಟು ಜಾಗವಿದ್ದು, ವಿದ್ಯಾರ್ಥಿಗಳು ಯುಪಿಎಸ್‌ಸಿ, ಕೆಪಿಎಸ್‌ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜುಗೊಳ್ಳಲು ತರಬೇತಿ ಕೇಂದ್ರ ತೆರೆಯಲು
ಕ್ರಮ ವಹಿಸುವಂತೆ ವಿವಿ ಕುಲಪತಿಗೆ ಸಲಹೆ ನೀಡಿದರು. ದಾವಣಗೆರೆ ವಿಶ್ವ ವಿದ್ಯಾಲಯ ಕುಲಪತಿ ಪ್ರೊ| ಶರಣಪ್ಪ ವಿ. ಹಲಸೆ ಅಧ್ಯಕ್ಷತೆ ವಹಿಸಿದ್ದರು. ದಾವಿವಿ ಹಣಕಾಸು ಅಧಿಕಾರಿ ಜೆ.ಕೆ. ರಾಜು ವೇದಿಕೆಯಲ್ಲಿದ್ದರು.