Advertisement

ಉದ್ಯೋಗ ಖಾತ್ರಿ ಯೋಜನೆ ಸದುಪಯೋಗವಾಗಲಿ

05:03 PM Jul 03, 2021 | Team Udayavani |

ಕೂಡ್ಲಿಗಿ: ತಾಲೂಕಿನ ಕೂಲಿಕಾರರು ಯಾವುದೇ ಕಾರಣಕ್ಕೂ ಕೂಲಿ ಅರಸಿ ಬೇರೆಕಡೆ ವಲಸೆ ಹೋಗಬಾರದು ಎಂದು ಸರ್ಕಾರಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿಕೆಲಸ ನೀಡುತ್ತಿದ್ದು ಇದನ್ನು ಗ್ರಾಮದಜನರು ಸದುಪಯೋಗಪಡಿಸಿಕೊಳ್ಳುವಂತೆ ತಾಲೂಕು ಪಂಚಾಯಿತಿಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಬಸಣ್ಣ ಹೇಳಿದರು.

Advertisement

ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಯಕನಹಳ್ಳಿ ಗ್ರಾಮದ ರೈತರು ತಮ್ಮ ಜಮೀನುಗಳಲ್ಲಿಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಪ್ರಾರಂಭಿಸಲಾಗಿದ್ದು ಬದು ನಿರ್ಮಾಣ ಕಾಮಗಾರಿಯನ್ನು ಪರಿಶೀಲನೆ ಮಾಡಿ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದರು. ಉದ್ಯೋಗ ಖಾತ್ರಿ ಕಾಯಕ ಬಂಧುಗಳಿಗೆ ಅವರ ಕರ್ತವ್ಯ ಕುರಿತು ಮಾಹಿತಿ ನೀಡಿದರು. ನಂತರ ಕಾಮಗಾರಿ ನಡೆಯುವ ಸಮಯದಲ್ಲಿ ಕೂಲಿಕಾರರ ಆರೋಗ್ಯದ ಬಗ್ಗೆ ವಿಚಾರಿಸಿ, ಕೆಲಸದಲ್ಲಿ ವೇಳೆಯಲ್ಲಿ ಪ್ರತಿಯೊಬ್ಬರೂಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಬೇಕೆಂದು ನುಡಿದರು.

ನೀರಿನ ವ್ಯವಸ್ಥೆ, ಸಾಬೂನು ಇತ್ಯಾದಿ ಸೌಲಭ್ಯಗಳು ಇರುವ ಬಗ್ಗೆ ಪರಿಶೀಲನೆನಡೆಸಿದರು. ಯಾವುದೇ ಕಾರಣಕ್ಕೂಕೂಲಿಕಾರರನ್ನು ನಿರ್ಲಕ್ಷ್ಯ ಮಾಡದೇಅವರಿಗೆ ಅಗತ್ಯವಾದ ಸೌಕರ್ಯಗಳನ್ನುಒದಗಿಸುವಂತೆ ಗ್ರಾಪಂ ಪಿಡಿಓ ಅವರಿಗೆತಿಳಿಸಿದರು. ಹೂಡೇಂ ಗ್ರಾಮ ಪಂಚಾಯಿತಿವ್ಯಾಪ್ತಿಯ ಒಟ್ಟು 52 ಜನ ಕೂಲಿಕಾರರುಬದು ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next