Advertisement

ಟ್ಯಾಬ್‌ ಸದ್ಬಳಕೆ ಮಾಡಿಕೊಳ್ಳಿ 

02:27 PM Jul 10, 2021 | Team Udayavani |

ಹೊನ್ನಾಳಿ: ವಿದ್ಯಾರ್ಥಿಗಳಿಗೆ ವಿದ್ಯಾ ಭ್ಯಾಸಕ್ಕೆ ಅನುಕೂಲವಾಗಲೆಂದು ಸರ್ಕಾರ ಟ್ಯಾಬ್‌ ನೀಡಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Advertisement

ನ್ಯಾಮತಿ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ 179 ವಿದ್ಯಾರ್ಥಿಗಳಿಗೆ ಟ್ಯಾಬ್‌ ವಿತರಿಸಿ ಮಾತನಾಡಿದರು. ಶಿಕ್ಷಣ ಎಂಬ ಮೂರಕ್ಷರ ಇಲ್ಲದೆ ಇದ್ದರೆ ಮನುಷ್ಯನ ಜೀವನ ಅಂಧಕಾರದಲ್ಲಿಮುಳುಗಿ ಹೋಗಲಿದ್ದು, ವಿದ್ಯಾರ್ಥಿಗಳುಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕಬದುಕು ರೂಪಿಸಿಕೊಳ್ಳಬೇಕು ಎಂದರು.

ಆನ್‌ಲೈನ್‌ ವಿದ್ಯಭ್ಯಾಸಕ್ಕೆ ಅನುಕೂಲವಾಗಲೆಂದು ಟ್ಯಾಬ್‌ ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಆಧುನಿಕತೆ ಬೆಳೆದಂತೆ ಶಿಕ್ಷಣದ ಪದ್ಧತಿಯೂ ಕೂಡ ಬದಲಾಗುತ್ತಿದೆ. ಮೊದಲು ಬೋರ್ಡ್‌ ಮೇಲೆ ಬರೆದು ಶಿಕ್ಷಣ ನೀಡುತ್ತಿದ್ದು, ಇದೀಗ ಆನ್‌ಲೈನ್‌ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಶಿಕ್ಷಣ ಎಂಬುದು ಸಾಧಕನ ಸೊತ್ತೆ ಹೊರತು ಅದು ಸೋಮಾರಿಗಳ ಸೊತ್ತಲ್ಲ.ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಇದ್ದು, ಶಿಕ್ಷಣದಲ್ಲಿ ಸಾಧನೆ ಮಾಡಬೇಕು ಎಂದರು.

Advertisement

ಸಾಕಷ್ಟು ಜನ ಪೋಷಕರು ತಮ್ಮ ಕಷ್ಟವನ್ನು ಮಕ್ಕಳಿಗೆ ತೋರಿಸದೆ ಅವರಿಗೆ ಆ್ಯಂಡ್ರೈಡ್‌ ಮೊಬೈಲ್‌ ಕೊಡಿಸಿ ಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮಕ್ಕಳು ಅದನ್ನು ಶಿಕ್ಷಣಕ್ಕೆ ಮಾತ್ರ ಬಳಸಿಕೊಳ್ಳಬೇಕು ಎಂದರು.

ನಾನು ಪಿಯುಸಿ ಪಾಸ್‌, ಡಿಗ್ರಿ ಫೇಲ್‌, ಕಾಲೇಜಿನ ದಿನಗಳಲ್ಲಿ ನಾನು ಕೂಡ ಸಾಕಷ್ಟು ತುಂಟಾಟ ಮಾಡುತ್ತಿದ್ದೆ. ವಿದ್ಯಾರ್ಥಿ ಜೀವನದಲ್ಲಿ ತುಂಟಾಟ ಇರಬೇಕು. ಅದರ ಜತೆಗೆ ಸತತ ಅಭ್ಯಾಸ ಮಾಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಉಮಾ ರಮೇಶ್‌, ತಾಲೂಕುಪಂಚಾಯಿತಿ ಮಾಜಿ ಅಧ್ಯಕ್ಷ ಎಸ್‌.ಪಿ.ರವಿಕುಮಾರ್‌, ಮುಖಂಡರಾದ ಅಜಯ್‌ ರೆಡ್ಡಿ, ಸಿ.ಕೆ.ರವಿ, ಕುಮಾರ್‌ಕಾಲೇಜಿನ ಪ್ರಾಂಶುಪಾಲರು, ಪ್ರಾಧಾಪಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next