Advertisement

ಅಧಿಕಾರ ಸದುಪಯೋಗ ಮಾಡಿ: ಖರ್ಗೆ

09:57 AM Oct 24, 2017 | Team Udayavani |

ಕಲಬುರಗಿ: 1968ರಲ್ಲಿ ಕಾಂಗ್ರೆಸ್‌ ಇಬ್ಭಾಗವಾದಾಗ ನಮ್ಮ ಜೊತೆಯಲ್ಲಿ ಇದ್ದವರು ಈಗಲೂ ಕಾಂಗ್ರೆಸ್‌ನಲ್ಲಿ ಇದ್ದಾರೆ. ಅದರಲ್ಲಿ ಕೆಲವರಿಗೆ ಅಧಿಕಾರ ದೊರಕಿದೆ. ಇನ್ನು ಕೆಲವರಿಗೆ ದೊರಕಿಲ್ಲ. ಅಧಿಕಾರ ದೊರಕಿದವರು ಅದನ್ನು ಸದುಪಯೋಗ ಪಡಿಸಿಕೊಂಡು ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ಸೋಮವಾರ ಮಧ್ಯಾಹ್ನ ಕಾಂಗ್ರೆಸ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನೂತನ ಕೆಪಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ ಹಾಗೂ ಅಲ್ಪಸಂಖ್ಯಾತರ ಘಟಕದ ವಿಭಾಗೀಯ ಅಧ್ಯಕ್ಷ ನಜರ್‌ ಅಹಮದ್‌ ಬಾಬಾಖಾನ್‌ ಅವರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ ಇಬ್ಭಾಗವಾದಾಗ ನಮ್ಮ ಜೊತೆಯಲ್ಲಿ ದೇವೇಂದ್ರಪ್ಪ ಘಾಳೆಪ್ಪ ಜಮಾದಾರ, ಪ್ರಭಾಕರ ತೇಲಕರ್‌, ಧರ್ಮರಾಯ ಅಫಜಲಪುರಕರ್‌, ಇಕ್ಬಾಲ್‌ ಅಹಮದ್‌ ಸರಡಗಿ ಅವರಲ್ಲದೆ, ಬಾಬುರಾವ್‌ ಜಾಗೀರದಾರ, ಚಂದ್ರಶೇಖರ ಸುಲ್ತಾನಪುರ, ಜಗನ್ನಾಥ ಗೋದಿ, ದೇವೇಂದ್ರ ಮರತೂರ, ತಿಪ್ಪಣ್ಣಪ್ಪ ಕಮಕನೂರು, ಆಲಂಖಾನ ಎಲ್ಲರೂ ಇದ್ದರು. ಈಗಲೂ ಕಾಂಗ್ರೆಸ್‌ ನಲ್ಲಿಯೇ ಇದ್ದಾರೆ. ಇದರಲ್ಲಿ ಕೆಲವರಿಗೆ ಅಧಿಕಾರ ಸಿಕ್ಕಿದೆ. ಇನ್ನೂ ಕೆಲವರಿಗೆ ಸಿಕ್ಕಿಲ್ಲ. ಈಗ ಜಗದೇವ ಗುತ್ತೇದಾರ ಅವರಿಗೆ ಅಧಿಕಾರ ಸಿಕ್ಕಿದೆ. ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ನಮ್ಮದು ನುಡಿದಂತೆ ನಡೆದ ಸರಕಾರ. ಜನರ ಅವಶ್ಯಕತೆ ತಿಳಿದು ಅವರಿಗೆ ಹಲವಾರು ಭಾಗ್ಯ ಕೊಡುವ ಮೂಲಕ ಜನಪರವಾದ ಆಡಳಿತ ನೀಡಿದ್ದೇವೆ. ಬಿಜೆಪಿಯವರು ಈ ರಾಜ್ಯದಲ್ಲಿ ಹೇಗೆ ಅಧಿಕಾರ ಮಾಡಿದ್ದಾರೆ. ಎಷ್ಟು ಹಗರಣಗಳು, ಎಷ್ಟು ಅಪಸವ್ಯಗಳು ನಡೆದಿವೆ ಎನ್ನುವುದನ್ನು ಜನರು ನೋಡಿದ್ದಾರೆ. ಇದೆಲ್ಲವನ್ನು ಮತ್ತೂಮ್ಮೆ ಅವರಿಗೆ ತಿಳಿ ಹೇಳುವ ಅವಶ್ಯಕತೆ ಇದೆ ಎಂದರು.

ಶಾಸಕರಾದ ಇಕ್ಬಾಲ್‌ ಅಹ್ಮದ್‌ ಸರಡಗಿ, ಡಾ|ಉಮೇಶ ಜಾಧವ್‌, ಬಿ.ಆರ್‌.ಪಾಟೀಲ ಮಾತನಾಡಿದರು. ನೂತನ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಕಾಂಗ್ರೆಸ್‌ ಪಕ್ಷದ ಅಲ್ಪಸಂಖ್ಯಾತರ ಘಟಕದ ವಿಭಾಗೀಯ ಅಧ್ಯಕ್ಷ ಬಾಬಾಖಾನ್‌ ಮಾತನಾಡಿ, ಇವತ್ತು ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಪಕ್ಷ ಹೊರಿಸಿದೆ. ಅದನ್ನು ಸಮರ್ಥವಾಗಿ ಎಲ್ಲರ ಸಹಕಾರದೊಂದಿಗೆ ನಿಭಾಯಿಸುವ ಮತ್ತು ಪಕ್ಷವನ್ನು ಗ್ರಾಮೀಣ ಮಟ್ಟದಲ್ಲೂ ಇನ್ನಷ್ಟು ಗಟ್ಟಿ ಮಾಡಿ ಮುಂದಿನ ಬಾರಿಯೂ ಅಧಿಕಾರಕ್ಕೆ ಬರುವಂತೆ ಮಾಡುವುದು ನಮ್ಮ ಹೊಣೆಗಾರಿಕೆಯಾಗಿದೆ ಎಂದರು.

Advertisement

ಭಾಗಣ್ಣಗೌಡ ಸಂಕನೂರ ಅನುಪಸ್ಥಿಯಲ್ಲಿ ಉಪಾಧ್ಯಕ್ಷರಾದ ಬಾಬುರಾವ್‌ ಜಹಾಗಿರದಾರ, ಚಂದ್ರಶೇಖರ ಸುಲ್ತಾನಪುರ
ಅವರುಗಳು ಕಾಂಗ್ರೆಸ್‌ ಪಕ್ಷದ ಧ್ವಜ ನೀಡುವ ಮೂಲಕ ಜಗದೇವ ಗುತ್ತೇದಾರ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಂಪ್ರಭು ಪಾಟೀಲ ನಿರೂಪಿಸಿದರು.

ಪಕ್ಷದ ಮುಖಂಡರಾದ ಸಚಿವ ಪ್ರಿಯಾಂಕ್‌ ಖರ್ಗೆ, ನಾರಾಯಣರಾವ ಕಾಳೆ, ತಿಪ್ಪಣ್ಣಪ್ಪ ಕಮಕನೂರ, ಅಲಂಖಾನ್‌, ಸಿ.ಬಿ.ಪಾಟೀಲ, ಸಿ.ಎ.ಪಾಟೀಲ, ಕೃಷ್ಣಾಜೀ ಕುಲಕರ್ಣಿ, ದೇವೆಂದ್ರಪ್ಪ ಮರತೂರ, ಶಿವಶರಣಪ್ಪ ಕೋಬಾಳ, ಜಿಪಂ ಪ್ರತಿಪಕ್ಷದ ನಾಯಕ ಶಿವಾನಂದ ಪಾಟೀಲ, ಸದಸ್ಯ ರಾಜೇಶ ಗುತ್ತೇದಾರ, ಜಿಪಂ ಮಾಜಿ ಅಧ್ಯಕ್ಷ ನಿತೀನ್‌ ಗುತ್ತೇದಾರ, ಮೇಯರ್‌ ಶರಣಕುಮಾರ ಮೋದಿ, ಎನ್‌ಈಕೆಆರ್‌ಟಿಸಿ ಅಧ್ಯಕ್ಷ ಇಲಿಯಾಸ್‌ ಬಾಗವಾನ್‌, ಎಚ್‌ಕೆಇ ಅಧ್ಯಕ್ಷ ಬಸವರಾಜ ಭೀಮಳ್ಳಿ, ಜಿಡಿಎ ಅಧ್ಯಕ್ಷ ಅಜಗರ್‌ ಅಹ್ಮದ್‌ ಚುಲಬುಲ್‌, ಚಂದ್ರಿಕಾ ಪರಮೇಶ್ವರ, ಜಿಪಂ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಟಗಿ, ಯಶವಂತ ಅಷ್ಟಗಿ, ಶ್ಯಾಮ ನಾಟಿಕಾರ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪ್ರಭಾವತಿ ಪಾಟೀಲ, ಬಸವರಾಜ ಪಾಟೀಲ ಹೇರೂರ್‌, ಶಿವಕುಮಾರ ಬಾಳಿ, ವೀರಣ್ಣಗೌಡ
ಪರಸರೆಡ್ಡಿ ಹಾಗೂ ಜಿಲ್ಲೆಯ ವಿವಿಧ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next