Advertisement

ಕರಾವಳಿ ಶಾಸಕರಿಂದ ಹಕ್ಕೊತ್ತಾಯ

09:57 AM Feb 21, 2020 | mahesh |

ಮಹಾನಗರ: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನಕ್ಕೆ ಪೂರಕವಾಗಿ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡ ಬೇಕು ಎನ್ನುವ ತುಳುನಾಡಿನ ಬಹು ವರ್ಷಗಳ ಕೂಗು ಇದೀಗ ಸಾಕಾರಗೊಳ್ಳುವ ಹಂತ ತಲುಪಿದೆ.

Advertisement

ಬೆಂಗಳೂರಿನಲ್ಲಿ ಈಗ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲೇ ತುಳುವನ್ನು ರಾಜ್ಯ ಭಾಷೆಯಾಗಿ ಘೋಷಯಾಗಿಸುವ ನಿಟ್ಟಿನಲ್ಲಿ ಕರಾವಳಿ ಶಾಸಕರು ಹಕ್ಕೊತ್ತಾಯ ಮಂಡಿಸುವುದಕ್ಕೆ ಮುಂದಾಗಿದ್ದಾರೆ. ಒಂದುವೇಳೆ ರಾಜ್ಯ ಸರಕಾರ ತುಳು ಭಾಷೆಯನ್ನು ರಾಜ್ಯ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿದರೆ, ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಹೋರಾಟ, ಪ್ರಯತ್ನಕ್ಕೆ ಪುಷ್ಟಿ ಸಿಗಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಅವರು ಇತ್ತೀಚೆಗೆಯಷ್ಟೇ ತುಳು ಭಾಷೆಯ ಪರ ಟ್ವೀಟ್‌ ಮಾಡಿದ್ದು, ತುಳುನಾಡಿಗರ ಮನವಿಗೆ ಸ್ಪಂದಿಸಿ, ತುಳು ಭಾಷೆಯನ್ನು ರಾಜ್ಯದ ಭಾಷೆಯಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳನ್ನು ಮನವಿ ಮಾಡುತ್ತೇನೆ ಎಂದಿ ದ್ದರು. ಅಲ್ಲದೆ, ಕರಾವಳಿ ಭಾಗದ ಎಲ್ಲ ಶಾಸಕರು ಇದೀಗ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ಈ ಬಗ್ಗೆ ಮನವಿ ಮಾಡಿದ್ದಾರೆ. ಮುಖ್ಯ ಮಂತ್ರಿಗಳು ಕೂಡ ಮನವಿಗೆ ಸಕಾರಾ ತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗುತ್ತಿದೆ.

ದ. ಕ. ಮತ್ತು ಉಡುಪಿ ಜಿಲ್ಲೆಯ ಒಟ್ಟು 13 ವಿಧಾನಸಭಾ ಕ್ಷೇತ್ರದ ಪೈಕಿ 12 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸ  ಕರು ಇದ್ದಾರೆ. ತುಳು ಭಾಷೆಯನ್ನು ರಾಜ್ಯ ಭಾಷೆಯನ್ನಾಗಿಸುವ ವಿಚಾರವನ್ನು ಸದನದ ಗಮನಸೆಳೆಯುವ ಮೂಲಕ ವಿಧಾ ನಸಭೆ ಹಾಗೂ ವಿ.ಪರಿಷತ್‌ನಲ್ಲಿ ಆ ಬಗ್ಗೆ ವಿಷಯ ಪ್ರಸ್ತಾವಕ್ಕೆ ಕರಾವಳಿ ಭಾಗದ ಶಾಸಕರು ತೀರ್ಮಾನಿಸಿದ್ದಾರೆ.
ಹಿಂದೆ ಭರವಸೆ ನೀಡಿದ್ದರು

“ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಲ್ಲೊಂದು ಎಂದು ಘೋಷಿಸಲು ಸರಕಾರ ಸಿದ್ಧ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು 2009ರ ಡಿ. 10ರಂದು ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ಹೇಳಿದ್ದರು. ಸಿಎಂ ಅಂದು ನೀಡಿದ ಭರವಸೆಯನ್ನು ಇದೀಗ ಮತ್ತೂಮ್ಮೆ ನೆನಪಿಸಲಾಗುತ್ತಿದೆ. ಇದರೊಂದಿಗೆ ಮುಖ್ಯಮಂತ್ರಿಗಳಿಗೆ ಮತ್ತಷ್ಟು ಒತ್ತಡ ತರಲಾಗುವುದು’ ಎನ್ನುತ್ತಾರೆ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್‌.

Advertisement

ಅಧಿವೇಶನ ಮುಗಿಯುವವರೆಗೂ ಟ್ವಿಟ್ಟರ್‌ ಅಭಿಯಾನ
“ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆ ಎಂದು ಘೋಷಿಸಲು ಒತ್ತಾಯಿಸಿ ಫೆ. 17ರಂದು ಆರಂಭವಾದ TuluofficialinKA_KL ಟ್ವೀಟ್‌ ತುಳುನಾಡ್‌ ಅಭಿಯಾನವು ಅಧಿವೇಶನ ಪೂರ್ಣಗೊಳ್ಳುವವರೆಗೆ ಮುಂದುವರಿಯಲಿದೆ. ಈಗಾಗಲೇ ಚಲನಚಿತ್ರ ನಟರು ಸಹಿತ ಹೆಸರಾಂತ ಗಣ್ಯರು ತುಳು ಭಾಷೆಯನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದಾರೆ’ ಎಂದು ಜೈ ತುಳುನಾಡು ಸಂಘಟನೆಯ ಸದಸ್ಯ ಕಿರಣ್‌ ಅವರು “ಉದಯವಾಣಿ ಸುದಿನ’ಕ್ಕೆ ತಿಳಿಸಿದ್ದಾರೆ.

ಸಿಎಂಗೆ ಮನವಿ ಮಾಡುತ್ತೇವೆ
ತುಳು ಭಾಷೆಯನ್ನು ರಾಜ್ಯ ಭಾಷೆಯನ್ನಾಗಿ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕರಾವಳಿ ಮೂಲದ ಶಾಸಕರು ಸಹಿತ ಸಚಿವ ಸಿ.ಟಿ. ರವಿ ಅವರೊಂದಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇನೆ. ಅವಕಾಶ ಸಿಕ್ಕರೆ ಸದನದಲ್ಲಿಯೂ ಈ ಬಗ್ಗೆ ಗಮನಸೆಳೆಯುತ್ತೇನೆ.
– ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ

ಸರಕಾರದ ಗಮನಸೆಳೆಯುವೆ
ಕರಾವಳಿಯ ಜನರ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಸಿಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಸಂಸದೀಯ ಇಲಾಖೆಗೆ ಪತ್ರದ ಮುಖೇನ ಮನವಿ ಮಾಡಿದ್ದೇನೆ. ಸದನದಲ್ಲಿ ಈ ಬಗ್ಗೆ ಪ್ರಶ್ನಿಸಿ ಸರಕಾರದ ಗಮನಸೆಳೆಯುತ್ತೇನೆ.
 - ಯು.ಟಿ. ಖಾದರ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next