ನವದೆಹಲಿ: ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ವಿಐ, (ವೊಡಾಫೋನ್ ಐಡಿಯಾ) ‘ವಿ ಮೂವೀಸ್ ಮತ್ತು ಟಿವಿ ಆ್ಯಪ್’ ಅನ್ನು ‘ವಿ ಆ್ಯಪ್’ ಜೊತೆ ಸಂಯೋಜಿಸಿದೆ.
ಈ ಹೊಸ ಸಂಯೋಜನೆ ಗ್ರಾಹಕರಿಗೆ ತಮ್ಮ ನೆಚ್ಚಿನ ಕಂಟೆಂಟ್ ಗಳನ್ನು ಸ್ಟ್ರೀಮ್ ಮಾಡಲು ಅನುವು ಮಾಡಿಕೊಡುತ್ತದೆ. ಸರಳೀಕೃತ ಮತ್ತು ಹೊಸ ಬಳಕೆದಾರ ಅನುಭವವನ್ನು ನೀಡುತ್ತಾ, ವಿಐ ಆ್ಯಪ್ ಈಗ ಒಟಿಟಿ ಆ್ಯಪ್ ಆಗಿ ಎರಡು ಬಗೆಯ ಅನುಕೂಲ ಕಲ್ಪಿಸಿದೆ.
ವ್ಯಾಪಕ ಶ್ರೇಣಿಯ ಉತ್ಪನ್ನಗಳು ಮತ್ತು ಸೇವೆಗಳ ಜೊತೆಗೆ, ವಿಷಯದ ಸಮೃದ್ಧ ಸಂಗ್ರಹವನ್ನು ನೀಡುತ್ತದೆ. ವಿಐ ಚಂದಾದಾರರು ಈಗ ವಿ ಆಪ್‌ನಲ್ಲಿ ತಮ್ಮ ನೆಚ್ಚಿನ ಕಂಟೆಂಟ್ ಗಳನ್ನು ವೀಕ್ಷಿಸಬಹುದು.
ಇದನ್ನೂ ಓದಿ:ಕರ್ನಾಟಕದಲ್ಲಿ ಫ್ಲಿಪ್ ಕಾರ್ಟ್ ನಿಂದ 3 ಹೊಸ ಸರಬರಾಜು ಕೇಂದ್ರಗಳ ಸ್ಥಾಪನೆ
450+ ಲೈವ್ ಟಿವಿ ಚಾನೆಲ್‌ಗಳು, ಜೀ ಟಿವಿ, ಜೀ ಸಿನಿಮಾ, ಕಲರ್ಸ್ ಎಚ್‌ಡಿ, ಕಲರ್ಸ್ ಇನ್ಫಿನಿಟಿ, ಡಿಸ್ಕವರಿ, ಎಂಟಿವಿ, ಹಿಸ್ಟರಿ ಟಿವಿ, ಸನ್ ಟಿವಿ, ಜೀ ಬಾಂಗ್ಲಾ, ಅನಿಮಲ್ ಪ್ಲಾನೆಟ್, ನಿಕ್, ಆಜ್ ತಕ್, ಇಂಡಿಯಾ ಟಿವಿ, CNBC ಆವಾಜ್, ರಿಪಬ್ಲಿಕ್ ಟಿವಿ, ABP ನ್ಯೂಸ್, NDTV 24×7, CNN ನ್ಯೂಸ್ ಮತ್ತು ಇನ್ನೂ ಹೆಚ್ಚಿನ ಚಾನೆಲ್‌ಗಳಲ್ಲಿ ಲೈವ್ ನ್ಯೂಸ್ ವೂಟ್ ಸೆಲೆಕ್ಟ್, ಡಿಸ್ಕವರಿ, ಲಯನ್ಸ್‌ಗೇಟ್ ಪ್ಲೇ, ಸನ್ಎನ್‌ಕ್ಸ್ಟ್ ಮತ್ತು ಶೆಮರೂ ಮಿ ನಂತಹ ಒಟಿಟಿ ಆಪ್‌ಗಳ ಮೂಲಕ ವೀಕ್ಷಿಸಬಹುದು.
ಸದ್ಯ ಇದು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದ್ದು, ಶೀಘ್ರದಲ್ಲೇ ಐಒಎಸ್ ಬಳಕೆದಾರರಿಗೂ ದೊರಕಲಿದೆ.