ಮಂಡ್ಯ: ಪ್ರಸ್ತುತ ಜಿಲ್ಲೆಯಲ್ಲಿ ಪಲ್ಸ್ ಪೊಲಿಯೋ ಲಸಿಕಾ ಅಭಿಯಾನ ಯಶಸ್ಸಿಗೆ ಎಲ್ಲರ ಪಾತ್ರ ಅವಶ್ಯಕ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ಹೇಳಿದರು.
ನಗರದ ಹೊರ ವಲಯದ ಸಮುದಾಯಭವನದಲ್ಲಿ ರೋಟರಿ ಸಂಸ್ಥೆ, ವಿನ್ನರ್‌ವ್ಹೀಲ್ ಸಂಸ್ಥೆಮತ್ತು ಜಿಲ್ಲಾ ಪಲ್ಸ್ ಪೊಲಿಯೋ ಸಮಿತಿ ವತಿಯಿಂದ ನಡೆದ “ವಲಯ ಪೊಲಿಯೋ ಪ್ಲಸ್ ದೃಷ್ಟಿಕೋನ ಮತ್ತು ಯೋಜನೆ ಸಭೆ ಮತ್ತು ಕಾರ್ಯಾಗಾರ’ವನ್ನು ಉದ್ಘಾಟಿಸಿ ಮಾತನಾಡಿದರು.
ಮುತುವರ್ಜಿವಹಿಸಿ: ರಾಜ್ಯದಲ್ಲಿ ಜ.17ರಿಂದ 20ರವರೆಗೆ ಪಲ್ಸ್ ಪೊಲಿಯೋ ಲಸಿಕೆ ಹಾಕುವಕಾರ್ಯ ನಡೆಯಲಿದೆ. 5 ವರ್ಷದೊಳಗಿನಯಾವುದೇ ಮಗು ಈ ಯೋಜನೆಯಿಂದಕೈಬಿಟ್ಟು ಹೋಗದಂತೆ ಮುತುವರ್ಜಿವಹಿಸಬೇಕು. ಜಿಲ್ಲೆಯಲ್ಲಿ ಲಸಿಕೆ ಅಭಿಯಾನ ಯಶಸ್ಸಿಗೆ ಪ್ರತಿಯೊಬ್ಬರೂ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
ಕೋವಿಡ್-19ರ ಮಾರ್ಗಸೂಚಿ ಅನ್ವಯ 2021ನೇ ಜ.17ರಂದು ರಾಜ್ಯದ ಸುಮಾರು66 ಲಕ್ಷ ಮಕ್ಕಳಿಗೆ ಸುರಕ್ಷಿತವಾಗಿ ಪೊಲಿಯೋಲಸಿಕೆ ಹಾಕಲು ಎಲ್ಲ ರೀತಿಯ ಮುಂಜಾಗ್ರತಾಕ್ರಮ ಕೈಗೊಳ್ಳಲು ಸರ್ಕಾರ ಸೂಚಿಸಿದೆ.ಆರೋಗ್ಯ, ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರು ರೂಪಾಂತರ ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ನು ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಗಾಗಿ ಪಾಲಿಸಬೇಕು ಎಂದು ತಿಳಿಸಿದರು.
ಪ್ರತಿ ಮನೆಗೂ ಭೇಟಿ ನೀಡಿ: ನಗರ ಹಾಗೂಗ್ರಾಮಾಂತರ ಪ್ರದೇಶದಲ್ಲಿ ಈಗಾಗಲೇಗುರುತಿಸಲ್ಪಟ್ಟ ಲಸಿಕಾ ಕೇಂದ್ರಗಳಲ್ಲಿ ಮಕ್ಕಳಿಗೆಲಸಿಕೆ ಹಾಕಬೇಕು. ನಂತರ 2-3 ದಿನಗಳ ಕಾಲಪ್ರತಿ ಮನೆ ಮನೆಗೂ ಭೇಟಿ ನೀಡಿ ಯಾವುದೇಮಗು ಲಸಿಕೆಯಿಂದ ಕೈ ಬಿಟ್ಟು ಹೋಗದೆಖಾತರಿಪಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಪಲ್ಸ್ ಪೊಲಿಯೋ ಮತ್ತು ರೂಪಾಂತರ ಕೋವಿಡ್ ವೈರಸ್ ನಿಯಂತ್ರಣ ಮಾರ್ಗಸೂಚಿ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಆರೋಗ್ಯ-ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿದರು.
ಡಾ.ಶಶಿಕಲಾ, ಡಾ.ಯಶ್ವಂತ್‌ಗೌಡ, ಡಾ.ಮನುಉಪನ್ಯಾಸ ನೀಡಿದರು. ಮಿಮ್ಸ್‌ನ ನಿರ್ದೇಶಕಡಾ.ಎಂ.ಆರ್.ಹರೀಶ್, ರಾಷ್ಟ್ರೀಯ ಪಲ್ಸ್ ಪೊಲಿಯೋ ತಂಡದ ಸದಸ್ಯ ಡಾ.ನಾಗೇಂದ್ರ,ಡಬ್ಲೂಎಚ್‌ಒ ಮೈಸೂರು ಭಾಗದಡಾ.ಸುಧೀರ್‌ನಾಯಕ್, ಪಲ್ಸ್ ಪೊಲಿಯೋಸಮಿತಿ ಜಿಲ್ಲಾಧ್ಯಕ್ಷ ಎಸ್.ಬಸರಾಜು, ಆರ್‌ಸಿಎಚ್‌ಒ ಡಾ.ಸೋಮಶೇಖರ್, ತಾಲೂಕುಆರೋಗ್ಯಾಧಿಕಾರಿ ಡಾ.ಜವರೇಗೌಡ, ರೋಟರಿಸಂಸ್ಥೆ ಅಧ್ಯಕ್ಷ ಕೆ.ಎಸ್.ಲೋಕೇಶ್, ಕಾರ್ಯ ದರ್ಶಿಪ್ರತಿಕ್, ವಿನ್ನರ್‌ವ್ಹೀಲ್ ಜಿಲ್ಲಾಧ್ಯಕ್ಷೆ ಅಶ್ವಿನಿಲೋಕೇಶ್, ಕಾರ್ಯದರ್ಶಿ ಶೈಲಜಾಶಿವಕುಮಾರ್, ರೋಟರಿ ಕಾರ್ಯಕ್ರಮಾಧಿಕಾರಿಜೆ. ಲಕ್ಷ್ಮೀನಾರಾಯಣ, ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಅನುಪಮಾ, ನಾರಾಯಣ ಶಾಸ್ತ್ರೀ, ಶಿವಕುಮಾರ್, ಮಹೇಂದ್ರ ಬಾಬು, ವಿ.ಸಿ.ರಮೇಶ್, ಶರತ್, ಅನಂತು, ಶ್ರೀನಿವಾಸ್ ಪ್ರಸಾದ್, ಸೋಮಶೇಖರ್, ಅಮರನಾಥ್ ಹಾಜರಿದ್ದರು.