Advertisement

ಮಹಾಪುರುಷರ ಆದರ್ಶ ಮೈಗೂಡಿಸಿಕೊಳ್ಳಿ: ಅಪ್ಪಚ್ಚು ರಂಜನ್‌

11:24 PM Oct 14, 2019 | sudhir |

ಮಡಿಕೇರಿ: ಮಾನವೀಯತೆಯೇ ಧರ್ಮ ಎಂಬುವುದನ್ನು ಪ್ರತಿಪಾದಿಸಿದ ಮಹಾನ್‌ ದಾರ್ಶನಿಕ ಮಹರ್ಷಿ ವಾಲ್ಮೀಕಿ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ಓದುವುದರೊಂದಿಗೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್‌ ಅವರು ಕರೆ ನೀಡಿದ್ದಾರೆ.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಕಾವೇರಿ ಕಲಾ ಕ್ಷೇತ್ರ¨ಲ್ಲಿ ರವಿವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅರಕಲಗೂಡು ಬಿಜಿಎಸ್‌ ಕಾಲೇಜಿನ ಪ್ರಾಂಶುಪಾಲರಾದ ಎಚ್‌.ಬಿ.ಮಹೇಶ್‌ ಅವರು ಮಾತನಾಡಿ ಇಡೀ ವಿಶ್ವಕ್ಕೆ ರಾಮಾರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರದ್ದಾಗಿದೆ. ರಾಮಾಯಣ ಮಹಾಕಾವ್ಯ ಬರೆಯುವ ಮೂಲಕ ಸತತ ಪರಿಶ್ರಮವಿದ್ದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿದ್ದಾರೆ ಎಂದರು.

ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರಾದ ಮಲ್ಲಪ್ಪ ಅವರು ಮಾತನಾಡಿ ಮಾನವಕುಲಕ್ಕೆ ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ಕೃತಿ ಉತ್ತಮ ಕೊಡುಗೆ, ಹಿಂದಿನ ಕಾಲದ ಆದರ್ಶ ಮಹನೀಯರ ಉತ್ತಮ ವಿಚಾರಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು. ನುಡಿದಂತೆ ನಡೆದುಕೊಳ್ಳುವುದು ವಾಲ್ಮೀಕಿ ರಾಮಯಾಣದಿಂದ ತಿಳಿದುಬರುತ್ತದೆ ಎಂದರು. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ನಮಿತಾ ಬಿ.ಎಸ್‌., ಅಶ್ವಿ‌ತಾ ಪಿ.ಎಎನ್‌, ಕೀರ್ತಾನ ಬಿ.ಡಿ, ರಜಿತಾ ಜಿ.ಎಲ್‌., ಮೋನಿಷ ಪಿ.ಆರ್‌, ಹಾಗೂ ಭಾಗ್ಯವತಿ ಅ ವಿಧ್ಯಾರ್ಥಿ ನಿಲಯಗಳು ಮತ್ತು ವಿವಿಧ ಆಶ್ರಮ ಶಾಲೆಗಳಲ್ಲಿ ಸಾಂಸ್ಕೃತಿಕ, ಪ್ರಬಂಧ, ಚಿತ್ರಕಲೆ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

Advertisement

ತಹಶೀಲ್ದಾರ್‌ ಮಹೇಶ್‌ ಉಪಸ್ಥಿತರಿದ್ದರು. ಸಿ.ಶಿವಕುಮಾರ್‌ ಸ್ವಾಗತಿಸಿದರು, ಐಟಿಡಿಪಿ ಇಲಾಖೆಯ ರಂಗನಾಥ್‌ ನಿರೂಪಿಸಿದರು, ಹರ್ಷಿತಾ ಮತ್ತು ತಂಡದವರು ಪ್ರಾರ್ಥಿಸಿದರು, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಚಿಕ್ಕಬಸವಯ್ಯ ವಂದಿಸಿದರು.

ಸಮ್ಮಾನ
ವಿದ್ಯಾರ್ಥಿ ನಿಲಯ ಹಾಗೂ ಆಶ್ರಮ ಶಾಲೆಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ನಿಂಗರಾಜು (ತಿತಿಮತಿ ಬಾಲಕರ ವಿದ್ಯಾನಿಲಯ), ಎಚ್‌.ಎಲ್‌.ರವಿ (ಬಸವನಹಳ್ಳಿ ಆಶ್ರಮ ಶಾಲೆ), ಶಶಿ (ಸಹ ಶಿಕ್ಷಕರು, ಬಸವನಹಳ್ಳಿ ಆಶ್ರಮ ಶಾಲೆ) ವಿ.ಎಸ್‌.ಪ್ರಶಾಂತ್‌ (ಸಹ ಶಿಕ್ಷಕರು, ಬೊಮ್ಮಡು ಆಶ್ರಮ ಶಾಲೆ), ಪ್ರಿಯಾ (ಯಲಕವನಾಡು ಹೊರ ಸಂಪನ್ಮೂಲ ಶಿಕ್ಷಕರು), ಸೀತಾಲಕ್ಷಿ¾à (ಅಡುಗೆಯವರು, ಮಾಲಂಬಿ ಆಶ್ರಮ ಶಾಲೆ), ರಾಧಾಕೃಷ್ಣ (ಅಡುಗೆಸಹಾಯಕರು, ಪೆರಾಜೆ ಬಾಲಕರನಿಲಯ) ಸರಸ್ವತಿ (ಅಡುಗೆಸಹಾಯಕರು ಕಾರ್ಮಾಡುಬಾಲಕಿಯರ ವಿದ್ಯಾರ್ಥಿ ನಿಲಯ), ಮಹಾಬಲ ( ನೌಕರರು ಐಟಿಡಿಪಿ ಕಚೇರಿ) ಅವರನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next