ಇವಿಎಂಗಳ ಬಗ್ಗೆ ಅನುಮಾನ, ಅಪನಂಬಿಕೆ, ಗೊಂದಲಗಳಿಗೂ ಕೊನೆ ಇಲ್ಲ. ನಾವು ಹಾಕಿದ ಓಟು ಯಾರಿಗೆ ಹೋಗುತ್ತದೆಂದು ಗೊತ್ತಾಗುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವಾಗಿ ಇದೇ ಮೊದಲ ಬಾರಿಗೆ ಕರ್ನಾಟಕದ ಚುನಾವಣೆಯಲ್ಲಿ “ವಿವಿಪ್ಯಾಟ್'(ಓಟರ್ ವೆರಿಫಾಯೆಬಲ್ ಪೇಪರ್ ಆಡಿಟ್ ಟ್ರಯಲ್) ಮಷಿನ್ ಬಳಸಲಾಗುತ್ತಿದೆ. ಇದನ್ನು ಸರಳವಾಗಿ “ಮತದಾರ ದೃಢೀಕರಣ ಚೀಟಿ’
ಎಂದು ಹೇಳಬಹುದು.
Advertisement
ಇವಿಎಂನಲ್ಲಿ ನೀವು ನಿಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಹಾಕಲು ಬಟನ್ ಒತ್ತಿದ ತಕ್ಷಣ ಇವಿಎಂನ ಬ್ಯಾಲೆಟ್ ಯೂನಿಟ್ ಪಕ್ಕದಲ್ಲಿ ಇರುವ ವಿವಿಪ್ಯಾಟ್‌ನಲ್ಲಿ ನೀವು ಯಾರಿಗೆ ಮತ ಹಾಕಿದ್ದು ಎಂದು ಏಳು ಸೆಕೆಂಡ್‌ವರೆಗೆ ಕಾಣುತ್ತದೆ. ಬಳಿಕ ಆ ಮುದ್ರಿತ ಚೀಟಿ ವಿವಿಪ್ಯಾಟ್‌ನ ಸಂಗ್ರಹ ಪೆಟ್ಟಿಗೆಗೆ ಸೇರುತ್ತದೆ.