Advertisement
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾ ಧಿಕಾರಿಗಳಿಗೆ ಸರಿಸಮಾನ ಭತ್ಯೆ ಮತ್ತುಸ್ಥಾನಮಾನಗಳನ್ನು ಆಯುಷ್ ವೈದ್ಯಾಧಿಕಾರಿಗಳಿಗೂ ನೀಡಬೇಕೆಂದು ಸರಕಾರಸಚಿವ ಸಂಪುಟದಲ್ಲಿ ನಿರ್ಣಯ ಮಾಡಿದೆ.
Related Articles
Advertisement
ಹೋರಾಟ ಅನಿವಾರ್ಯ: ಸಂಕಷ್ಟದಸಂದರ್ಭದಲ್ಲಿ ಸರಕಾರದ ಮೇಲೆ ಯಾವುದೇಒತ್ತಡ, ಮುಷ್ಕರ ಇತ್ಯಾದಿ ಮಾರ್ಗಹಿಡಿಯದೆ ಸಮಾಜದ ಸ್ವಾಸ್ಥÂ ಕಾಯುವಲ್ಲಿಆಯುಷ್ ವೈದ್ಯರು ತಮ್ಮ ಕಾಯಕಮುಂದುವರಿಸಿದ್ದಾರೆ.
ಸರಕಾರ ಕೂಡಲೇವೈದ್ಯ ಸಮೂಹದಲ್ಲಿ ಭೇದವೆಣಿಸದೆ ಸಮಾನಭತ್ಯೆ ಕೊಡಬೇಕು. ಆಯುಷ್ ವೈದ್ಯಾಧಿಕಾರಿಗಳ ನ್ಯಾಯಯುತ ಬೇಡಿಕೆಗಳನ್ನುಹದಿನೈದು ದಿನಗಳಲ್ಲಿ ಈಡೇರಿಸಬೇಕು.ಇಲ್ಲದಿದ್ದಲ್ಲಿ ಸಂಘ ಅನಿವಾರ್ಯವಾಗಿಹೋರಾಟದ ಹಾದಿ ಹಿಡಿಯಬೇಕಾಗುತ್ತದೆಎಂದು ಮನವಿಯಲ್ಲಿ ತಿಳಿಸಲಾಗಿದೆ.ಮನವಿ ಸ್ವೀಕರಿಸಿದ ಎಡಿಸಿ ಅನುರಾಧಅವರು ಮುಂದಿನ ಕ್ರಮಕ್ಕೆ ಸರಕಾರಕ್ಕೆಕಳಿಸಿಕೊಡುವುದಾಗಿ ತಿಳಿಸಿದರು.
ಈ ವೇಳೆ ಸರಕಾರಿ ನೌಕರರ ಸಂಘದಜಂಟಿ ಕಾರ್ಯದರ್ಶಿ ಡಾ.ಸಿ.ಎ.ಹಿರೇಮಠ,ಜಿಲ್ಲಾ ಆಯುಷ್ ವೈದ್ಯಾ ಧಿಕಾರಿಗಳ ಸಂಘದಅಧ್ಯಕ್ಷ ಡಾ.ಸತೀಶ್ ಆಚಾರ್ಯ ,ರಾಜ್ಯಪ್ರಧಾನ ಕಾರ್ಯದರ್ಶಿ ಡಾ.ಜೆ.ವೀರಣ್ಣ,ಡಾ.ಕುಮಾರ್ ಸಾಗರ್, ಡಾ.ರವಿರಾಜ್,ಡಾ.ಸತೀಶ್ ಮತ್ತಿತರರು ಹಾಜರಿದ್ದರು.