Advertisement
ಕಲ್ಲಂಗಡಿ ಹಣ್ಣಿನ ಸಿಪ್ಪೆಯ ದೋಸೆಬೇಕಾಗುವ ಸಾಮಗ್ರಿ
- ಅಕ್ಕಿ: ಒಂದೂವರೆ ಕಪ್
- ಉದ್ದಿನ ಬೇಳೆ: ಅರ್ಧ ಕಪ್
- ತೊಗರಿಬೇಳೆ: ಕಾಲು ಕಪ್
- ಮೆಂತ್ಯೆ: ಒಂದು ಚಮಚ
- ನೀರು: ಸ್ವಲ್ಪ
- ಕಲ್ಲಂಗಡಿ ಹಣ್ಣಿನ ಸಿಪ್ಪೆ: ಮೂರು ಕಪ್
- ತೆಂಗಿನತುರಿ: ಅರ್ಧ ಕಪ್
- ಉಪ್ಪು: ರುಚಿಗೆ ತಕ್ಕಷ್ಟು
ಮೊದಲು ಅಕ್ಕಿ, ಉದ್ದಿನಬೇಳೆ, ತೊಗರಿ ಬೇಳೆ, ಮೆಂತ್ಯೆಯನ್ನು ನೀರಿನಲ್ಲಿ ಮೂರು ಗಂಟೆಗಳ ಕಾಲ ನೆನೆಸಿಡಬೇಕು. ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಮೇಲ್ಮೆ„ಯ ಹಸುರು ಭಾಗವನ್ನು ತೆಗೆದು ಅನಂತರ ಅದನ್ನು ಸಣ್ಣದಾಗಿ ಹೆಚ್ಚಿಡಬೇಕು. ಅನಂತರ ನೆನೆಸಿದ ಅಕ್ಕಿ ಮಿಶ್ರಣ, ಕಲ್ಲಂಗಡಿ ಹಣ್ಣಿನ ಸಿಪ್ಪೆಗೆ ತೆಂಗಿನ ತುರಿ ಹಾಗೂ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಮಾಮೂಲಿ ದೋಸೆ ಹಿಟ್ಟಿನ ಹದ ಮಾಡಿ ಕಾವಲಿಯಲ್ಲಿ ಕಾಯಿಸಿ ದರೆ ಕಲ್ಲಂಗಡಿ ಹಣ್ಣಿನ ಸಿಪ್ಪೆಯ ದೋಸೆ ಸವಿಯಲು ಸಿದ್ಧವಾಗುತ್ತದೆ. ಬೂದುಕುಂಬಳ ದೋಸೆ
ಬೇಕಾಗುವ ಸಾಮಗ್ರಿ
- ಅಕ್ಕಿ: ಒಂದೂವರೆ ಕಪ್
- ಬೂದುಗುಂಬಳಕಾಯಿ: ಒಂದೂವರೆ ಕಪ್
- ತೆಂಗಿನತುರಿ: ಅರ್ಧ ಕಪ್
- ಉಪ್ಪು: ರುಚಿಗೆ ತಕ್ಕಷ್ಟು
Related Articles
ನೆನೆಸಿಟ್ಟ ಅಕ್ಕಿ, ಬೂದುಗುಂಬಳಕಾಯಿ ಹಾಗೂ ತೆಂಗಿನ ತುರಿಯನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿದ ಮೇಲೆ ಅದಕ್ಕೆ ಉಪ್ಪು ಸೇರಿಸಬೇಕು. ಬೂದುಗುಂಬಳಕಾಯಿಯಲ್ಲಿ ನೀರಿನ ಅಂಶ ಅಧಿಕವಿರುವುದರಿಂದ ಹಿಟ್ಟಿಗೆ ನೀರನ್ನು ಸ್ವಲ್ಪ ಕಡಿಮೆ ಸೇರಿಸಬೇಕು. ದೋಸೆಯನ್ನು ಹದವಾಗಿ ಲಟ್ಟಿಸಿ ಅನಂತರ ಕಾವಲಿಗೆ ತುಪ್ಪ ಅಥವಾ ಎಣ್ಣೆ ಹಚ್ಚಿ ದೋಸೆ ಮಾಡಿ ಹದವಾಗಿ ಎರಡೂ ಕಡೆ ಬೇಯಿಸಿದರೆ ಬೂದುಗುಂಬಳಕಾಯಿ ದೋಸೆ ಸವಿಯಲು ಸಿದ್ಧವಾಗುತ್ತದೆ.
Advertisement
ಜೋಳದ ದೋಸೆಬೇಕಾಗುವ ಸಾಮಗ್ರಿ
- ಜೋಳದ ಹಿಟ್ಟು: ಒಂದು ಕಪ್
- ಅಕ್ಕಿಹಿಟ್ಟು: ಒಂದು ಕಪ್
- ಈರುಳ್ಳಿ: ಸ್ವಲ್ಪ
- ಕರಿಬೇವು: ಸ್ವಲ್ಪ
- ಕೊತ್ತಂಬರಿ ಸೊಪ್ಪು: ಸ್ವಲ್ಪ
- ಹಸಿಮೆಣಸು: ಎರಡು
- ಜೀರಿಗೆ ಸ್ವಲ್ಪ
- ಉಪ್ಪು: ರುಚಿಗೆ ತಕ್ಕಷ್ಟು ಮಾಡುವ ವಿಧಾನ
ಮೊದಲು ಜೋಳದ ಹಿಟ್ಟು, ಅಕ್ಕಿ ಹಿಟ್ಟಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಜೀರಿಗೆ ಸೇರಿಸಿ ನೀರು ಸೇರಿಸದೆ ಚೆನ್ನಾಗಿ ಮಿಶ್ರ ಮಾಡಬೇಕು. ಅನಂತರ ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ಹಿಟ್ಟು ಸುರುಳಿಯಾಗದಂತೆ ಕಲಸಬೇಕು. ಸ್ವಲ್ಪ ದಪ್ಪಕ್ಕೆ ಕಲಸಿಕೊಂಡು ಅದಕ್ಕೆ ಉಪ್ಪು ಸೇರಿಸಬೇಕು. ಅನಂತರ ಕಾವಲಿಯಲ್ಲಿ ದೋಸೆ ಹೊಯ್ದರೆ ಜೋಳದ ದೋಸೆ ಸವಿಯಲು ಸಿದ್ಧವಾಗುತ್ತದೆ. ಮುಳ್ಳುಸೌತೆ ದೋಸೆ
ಬೇಕಾಗುವ ಸಾಮಗ್ರಿ - ಅಕ್ಕಿ: ಒಂದು ಕಪ್
- ತುರಿದ ಸೌತೆಕಾಯಿ: 1
- ಹಸಿ ಮೆಣಸು: ನಾಲ್ಕು
- ಕೊತ್ತಂಬರಿ ಸೊಪ್ಪು: ಸ್ವಲ್ಪ
- ಉಪ್ಪು: ರುಚಿಗೆ ತಕ್ಕಷ್ಟು
- ಅಡುಗೆ ಸೋಡಾ: 1 ಚಿಟಿಕೆ ಮಾಡುವ ವಿಧಾನ:
ಅಕ್ಕಿಯನ್ನು ಮೂರು ಗಂಟೆಗಳ ಕಾಲ ನೆನೆಸಿಟ್ಟು, ಮೆಣಸಿನಕಾಯಿ ಹಾಕಿ ರುಬ್ಬಿಕೊಳ್ಳಬೇಕು. ನೀರು ಅಧಿಕವಾಗಿ ಸೇರಿಸಬಾರದು. ಅನಂತರ ಅದಕ್ಕೆ ತುರಿದ ಸೌತೆಕಾಯಿಯನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಅನಂತರ ಅದಕ್ಕೆ ಅಡುಗೆ ಸೋಡಾ ಹಾಕಿ ಅದನ್ನು ಕಾವಲಿ ಯಲ್ಲಿ ಕಾಯಿಸಿದರೆ ಸೌತೆಕಾಯಿ ದೋಸೆ ಸವಿಯಲು ಸಿದ್ಧವಾಗುತ್ತದೆ. ಜೋಳದ ದೋಸೆ
ಬೇಕಾಗುವ ಸಾಮಗ್ರಿ
- ಜೋಳದ ಹಿಟ್ಟು: ಒಂದು ಕಪ್
- ಅಕ್ಕಿಹಿಟ್ಟು: ಒಂದು ಕಪ್
- ಈರುಳ್ಳಿ: ಸ್ವಲ್ಪ
- ಕರಿಬೇವು: ಸ್ವಲ್ಪ
- ಕೊತ್ತಂಬರಿ ಸೊಪ್ಪು: ಸ್ವಲ್ಪ
- ಹಸಿಮೆಣಸು: ಎರಡು
- ಜೀರಿಗೆ ಸ್ವಲ್ಪ
- ಉಪ್ಪು: ರುಚಿಗೆ ತಕ್ಕಷ್ಟು ಮಾಡುವ ವಿಧಾನ
ಮೊದಲು ಜೋಳದ ಹಿಟ್ಟು, ಅಕ್ಕಿ ಹಿಟ್ಟಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಜೀರಿಗೆ ಸೇರಿಸಿ ನೀರು ಸೇರಿಸದೆ ಚೆನ್ನಾಗಿ ಮಿಶ್ರ ಮಾಡಬೇಕು. ಅನಂತರ ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ಹಿಟ್ಟು ಸುರುಳಿಯಾಗದಂತೆ ಕಲಸಬೇಕು. ಸ್ವಲ್ಪ ದಪ್ಪಕ್ಕೆ ಕಲಸಿಕೊಂಡು ಅದಕ್ಕೆ ಉಪ್ಪು ಸೇರಿಸಬೇಕು. ಅನಂತರ ಕಾವಲಿಯಲ್ಲಿ ದೋಸೆ ಹೊಯ್ದರೆ ಜೋಳದ ದೋಸೆ ಸವಿಯಲು ಸಿದ್ಧವಾಗುತ್ತದೆ. ಬಾಳೆ ದಿಂಡಿನ ದೋಸೆ
ಬೇಕಾಗುವ ಸಾಮಗ್ರಿಗಳು
- ಅಕ್ಕಿ: ಎರಡು ಕಪ್
- ಬಾಳೆದಿಂಡು: ಎರಡು ಕಪ್
- ತೆಂಗಿನತುರಿ: ಕಾಲು ಕಪ್
- ಉಪ್ಪು: ರುಚಿಗೆ ತಕ್ಕಷ್ಟು
- ಬೇವಿನಸೊಪ್ಪು: ಸ್ವಲ್ಪ
- ಜೀರಿಗೆ: ಒಂದು ಚಮಚ ಮಾಡುವ ವಿಧಾನ
ಬಾಳೆದಿಂಡನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಬೇಕು. ಹತ್ತು ನಿಮಿಷ ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು. ನೆನೆಸಿಟ್ಟ ಅಕ್ಕಿ, ಬಾಳೆದಿಂಡು, ತೆಂಗಿನತುರಿ, ಕರಿಬೇವು, ಜೀರಿಗೆ ಮತ್ತು ಉಪ್ಪನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಹಿಟ್ಟನ್ನು ದೋಸೆಯ ಹದ ಮಾಡಿ ತೆಳುವಾಗಿ ಕಾವಲಿಯಲ್ಲಿ ಲಟ್ಟಿಸಬೇಕು. ಅದರ ಮೇಲೆ ಎಣ್ಣೆ ಸವರಿದರೆ ಗರಿಗರಿಯಾದ ದೋಸೆ ಸವಿಯಲು ಸಿದ್ಧವಾಗುತ್ತದೆ.
- ಸುಶ್ಮಿತಾ ಶೆಟ್ಟಿ ಸಿರಿಬಾಗಿಲು