Advertisement

ಪುರಸಭೆಯ ಜಾಗದಲ್ಲಿ ಬಸ್‌ ನಿಲುಗಡೆಗೆ ಅವಕಾಶ ಕಲ್ಪಿಸಿ

01:11 PM Dec 12, 2019 | Suhan S |

ಮಹಾಲಿಂಗಪುರ: ಪಟ್ಟಣದಲ್ಲಿ ನೂತವಾಗಿ ನಿರ್ಮಿಸುತ್ತಿರುವ ಬಸ್‌ ನಿಲ್ದಾಣದ ಕಾಮಗಾರಿಯ ಕಾರಣ ಬಸ್‌ ನಿಲುಗಡೆಗೆ ತೊಂದರೆಯಾಗುತ್ತಿದೆ. ಕಾರಣ ಕಾಮಗಾರಿಯ ಮುಕ್ತಾಯಗೊಳ್ಳುವರೆಗೂ ಬಸ್‌ ನಿಲ್ದಾಣದ ಪಕ್ಕದಲ್ಲಿರುವ ಪುರಸಭೆಯ ಖಾಲಿ ಜಾಗೆಯಲ್ಲಿ ತಾತ್ಕಾಲಿಕವಾಗಿ ಬಸ್‌ ನಿಲುಗಡೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಸ್ಥಳೀಯ ಶ್ರೀರಾಮ ಸೇನೆ ಸಂಘಟನೆಯ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಸಂಘಟನೆಯ ಜಿಲ್ಲಾ ಅಧ್ಯಕ್ಷ ನಾಗರಾಜ ಭಜಂತ್ರಿ ಮಾತನಾಡಿ, ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಬಸ್‌ಗಳು ಹೆದ್ದಾರಿ ಮೇಲೆಯೇ ಬಸ್‌ಗಳು ನಿಲುಗಡೆಯಾಗುತ್ತಿರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ನಿಲ್ದಾಣದ ಎದುರು ಸಂಚಾರ ದಟ್ಟಣೆ ಸಮಸ್ಯೆಯಿಂದಾಗಿ ಸಕಾಲಕ್ಕೆ ಶಾಲಾ ಹಾಜರಾಗಲು ವಿದ್ಯಾರ್ಥಿಗಳಿಗೆ, ರೋಗಿಗಳಿಗೆ, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಅದಕ್ಕಾಗಿ ಮುಖ್ಯಾಧಿ ಕಾರಿಗಳು ಹೊಸ ಬಸ್‌ ನಿಲ್ದಾಣ ಕಾಮಗಾರಿ ಮುಗಿಯುವರೆಗೂ ವಾಹನ ಜನದಟ್ಟಣೆ ಮತ್ತು ಪ್ರಯಾಣಿಕರ ಹಿತದೃಷ್ಟಿಯಿಂದ ಪುರಸಭೆಯ ಖಾಲಿ ಜಾಗೆಯಲ್ಲಿ ಬಸ್‌ ನಿಲುಗಡೆಗೆ ಅವಕಾಶ ನೀಡಿ ಸಹಕರಿಸಬೇಕು ಎಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಬಾಬುರಾವ್‌ ಕಮತಗಿ ಮಾತನಾಡಿ, ಶೀಘ್ರದಲ್ಲೆ ಖಾಲಿ ಜಾಗ ಸ್ವಚ್ಛತೆ ಮತ್ತು ನೆಲಸಮತಟ್ಟುಗೊಳಿಸಿ ಬಸ್‌ ನಿಲುಗಡೆಗೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಂಘಟನೆಯ ಸಂಜು ಘೋರ್ಪಡೆ, ವಿನು ಟಿರ್ಕಿ, ಮಹಾಲಿಂಗ ಅಮ್ಮಲಜೇರಿ, ರಾಹುಲ ಅಂಬಿ, ದಶರಥ ಕಬಾಡಿ, ಅಭಿಷೇಕ ಹಾಸೀಲಕರ, ಬಸವರಾಜ ಮಂಡಿ, ಬಸು ಹುನ್ನೂರ, ರಾಜು ಗೌಂಡಿ, ಅಕ್ಷಯ ಹಾಸೀಲಕರ, ಚಂದ್ರು ಭಜಂತ್ರಿ, ಗುರುರಾಜ ಹಿಟ್ಟಿನಮಠ, ಕಾರ್ತಿಕ ಹಟ್ಟಿ, ಮಹಾಲಿಂಗ ನಾವಿ, ಅಖೀಲೇಶ ಅಂಗಡಿ, ಪ್ರಭು ಮಾಂಗ, ತಮ್ಮಣ್ಣ ಆದೆಪ್ಪನವರ, ಗಣೇಶ ಗಾಡಿವಡ್ಡರ, ಶಂಕರ ಬೆಳಗಾಂವಕರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next