Advertisement

ದಾಖಲಾತಿ ಕ್ರಮಬದ್ಧ ನಿರ್ವಹಣೆ ಮಾಡಿ

06:00 PM Mar 09, 2018 | Team Udayavani |

ಯಾದಗಿರಿ: ಮಾಹಿತಿ ಹಕ್ಕು ಅಧಿನಿಯಮ- 2005ರಡಿ ಅರ್ಜಿದಾರರು ಕೇಳಿದ ಮಾಹಿತಿಯನ್ನು ನಿಗದಿತ ಅವಧಿಯೊಳಗೆ ನೀಡಬೇಕು ಎಂದು ರಾಜ್ಯ ಮಾಹಿತಿ ಆಯುಕ್ತ ಕೆ.ಎಂ. ಚಂದ್ರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಗುರುವಾರ ಮಾಹಿತಿ ಹಕ್ಕು ಪ್ರಕರಣಗಳ ಮೇಲ್ಮನವಿ ಕುರಿತು ವಿಚಾರಣೆ ಸಭೆ
ನಡೆಸಿ ಅವರು ಮಾತನಾಡಿದರು. ಅರ್ಜಿದಾರರಿಗೆ ನಿಗದಿತ ಅವಧಿಯೊಳಗೆ ಮಾಹಿತಿ ನೀಡದಿದ್ದರೆ, ಮಾಹಿತಿ ಹಕ್ಕು
ಕಾಯ್ದೆ ಉಲ್ಲಂಘನೆ ಮಾಡಿದಂತಾಗುತ್ತದೆ. ಇದಕ್ಕಾಗಿ 25 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ ಎಂದು ವಿವಿಧ
ಇಲಾಖೆ ಮಾಹಿತಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮಾಹಿತಿ ಹಕ್ಕು ಕಾಯ್ದೆಯಡಿ ಜಿಲ್ಲೆಯಲ್ಲಿ ಒಟ್ಟು 40 ಪ್ರಕರಣಗಳಿವೆ. ಇವುಗಳ ಪೈಕಿ 36 ಮಾಹಿತಿ ಒದಗಿಸಲಾಗಿದ್ದು, ಇನ್ನೂ 4 ಪ್ರಕರಣಗಳಿಗೆ ಮಾಹಿತಿ ನೀಡಿಲ್ಲ ಯಾಕೆ ಎಂದು ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ಶೋಕಾಸ್‌ ನೋಟಿಸ್‌ ನೀಡಲಾಗುವುದು ಎಂದರು. ಪ್ರತಿಯೊಂದು ಇಲಾಖೆಗಳಲ್ಲಿ ಸಾರ್ವಜನಿಕರ ದಾಖಲಾತಿಗಳು ಕ್ರಮ ಬದ್ಧವಾಗಿ ನಿರ್ವಹಣೆ ಮಾಡಬೇಕು. ಕಚೇರಿ ಕೈಪಿಡಿ ಪ್ರಕಾರ ಕರ್ತವ್ಯ ನಿಭಾಯಿಸಬೇಕು.
 
ಈ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಸೆಕ್ಷನ್‌ 3ರ ಪ್ರಕಾರ ಭಾರತೀಯ ನಾಗರಿಕನಿಗೆ ಮಾತ್ರ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೇಳಿದ ಮಾಹಿತಿಯನ್ನು ನೀಡತಕ್ಕದು ಎಂದು ತಿಳಿಸಿದರು. ಅಧಿಕಾರಿಗಳ ವೈಯಕ್ತಿಕ ವಿಳಾಸ
ಅಥವಾ ಆಸ್ತಿ ಅಂತಸ್ತಿನ ಬಗ್ಗೆ ಕೋರಿದ ಮಾಹಿತಿಗೆ ಯಾವುದೇ ಕಾರಣಕ್ಕೂ ಮಾಹಿತಿ ನೀಡುವಂತಿಲ್ಲ. ಹೀಗಾಗಿ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡು ಸರಿಯಾದ ನಿಟ್ಟಿನಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿನ ಮಾಹಿತಿ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಂಡು ಹೋಗಬೇಕು ಎಂದು ತಿಳಿಸಿದರು. ಈ
ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಜಿಪಂ ಉಪಕಾರ್ಯದರ್ಶಿ ವಸಂತ್‌ ವಿ. ಕುಲಕರ್ಣಿ, ಜಿಲ್ಲಾ ಸಹಾಯಕ ಆಯುಕ್ತ ಮಂಜುನಾಥ್‌ ಸ್ವಾಮಿ ಸೇರಿದಂತೆ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next