Advertisement

ಶಾಲೆಗಳ ಮಾನ್ಯತೆ ನವೀಕರಣ ಶಾಶ್ವತಗೊಳಿಸಿ: ಜಗದೀಶ ಕುಸುಗಲ್ಲ

08:03 PM Jan 02, 2022 | Team Udayavani |

ಸವದತ್ತಿ: ಖಾಸಗಿ ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣಕ್ಕೆ ವಿಧಿಸಿದ ಷರತ್ತುಗಳು ಅವೈಜ್ಞಾನಿಕವಾಗಿದ್ದು, ಸರಕಾರ ಕೂಡಲೇ ಈ ಆದೇಶಗಳನ್ನು ಹಿಂಪಡೆಯಬೇಕು. ಪ್ರತಿವರ್ಷ ಈ ಪ್ರಕ್ರಿಯೆ ನಡೆಸುವದಕ್ಕಿಂತ ಮಾನ್ಯತಾ ನವೀಕರಣ ಶಾಶ್ವತಗೊಳಿಸಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಅನುದಾನರಹಿತ ಶಾಲೆಗಳ ಕ್ಷೇಮಾಭಿವೃದ್ಧಿ ಸಂಘದ ಸಲಹೆಗಾರ ಜಗದೀಶ ಕುಸುಗಲ್ಲ ಹೇಳಿದರು.

Advertisement

ಸ್ಥಳೀಯ ಶಿಂತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರವಿವಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಅನುದಾನರಹಿತ ಶಾಲೆಗಳ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪ್ರತಿವರ್ಷ ನವೀಕರಣದ ವೇಳೆ ಕಟ್ಟಡ ಸುರಕ್ಷತೆ, ಫೈರ್ ಸೇಪ್ಟಿ ಕುರಿತು ನಿರಪೇಕ್ಷಣೆ ಪ್ರಮಾಣ ಪತ್ರ ನೀಡಲು ತೊಂದರೆಯುಂಟಾಗುತ್ತಿದೆ. ಈಗಿರುವ ನಿಯಮಗಳನ್ನು ಬದಲಾಯಿಸಿ ಎಲ್ಲರಿಗೂ ಅನುಕೂಲವಾಗುವಂತೆ ಸರಕಾರ ಕ್ರಮಕೈಗೊಳ್ಳಬೇಕು. ಪದೇ ಪದೇ ಪ್ರಸ್ತಾವಣೆ ಸಲ್ಲಿಸುವುದು, ಅನಗತ್ಯ ಖರ್ಚುಗಳಿಗೆ ದಾರಿ ಮಾಡಿಕೊಡುತ್ತದೆ. ಜೊತೆಗೆ ಸುಸಜ್ಜಿತ ಕಟ್ಟಡದಲ್ಲಿ ಅಗತ್ಯವಿರುವ ಎಲ್ಲ ಸೌಕರ್ಯಗಳುಳ್ಳ ಶಿಕ್ಷಣ ಸಂಸ್ಥೆಗಳಿಗೆ ಶಾಶ್ವತ ಮಾನ್ಯತೆ ನೀಡುವಂತೆ ಒತ್ತಾಯಿಸಿದರು.

ಅಧ್ಯಕ್ಷ ಜಗದೀಶ ತೋಟಗಿ ಮಾತನಾಡಿ, ಸರಕಾರ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣದ ಕುರಿತು ಸಿಬಿಎಸ್ಸಿ ಮತ್ತು ಐಸಿಎಸ್ಸಿ ಶಾಲೆಗಳಿಗೆ ಒಂದು ನಿಯಮ, ರಾಜ್ಯ ಪಠ್ಯಕ್ರಮದ ಶಾಲೆಗಳಿಗೆ ಮತ್ತೊಂದು ನಿಯಮ. ಸರಕಾರಿ ಶಾಲೆ, ಕೇಂದ್ರ ಪಠ್ಯಕ್ರಮದ ಶಾಲೆಗಳಿರದ ನಿಯಮಗಳು ಕೇವಲ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಏಕೆ?. ಈ ರೀತಿ ಮಲತಾಯಿ ಧೋರಣೆ ಖಂಡನೀಯ.

ಈ ಕುರಿತು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸರಕಾರದ ಗಮನಕ್ಕಿರಸಲಾಗುವುದು ಎಂದರು.

Advertisement

ಈ ವೇಳೆ ರಮೇಶ ದೇವರಡ್ಡಿ, ನಾರಾಯಣ ಕಲಾಲ, ಬಸವರಾಜ ಪುಟ್ಟಿ, ಬಿ.ಎನ್.ಜೋಗಿಹಳ್ಳಿ, ಬಸವರಾಜ ತಳವಾರ, ರಮೇಶ ಪತ್ರೋಟ, ಡಿ.ಎಸ್. ಕೊಪ್ಪದ, ಅಶೋಕ ಹೊಂಗಲ ಸೋಮೇಶ ಕಂಕನವಾಡಿ ಆನಂದ ಹಿರೆಹೊಳಿ ಸುರೇಶ ವಾರೆಪ್ಪನವರ ಹಾಗೂ ಪದಾಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next