Advertisement

ಎಲ್‌ಪಿಜಿ ಬಳಕೆ ಸುರಕ್ಷಿತವಾಗಿರಲಿ; ಮಹಿಳೆಯರಿಗೆ ಕಾರ್ಯಾಗಾರ

04:10 PM Dec 16, 2022 | Nagendra Trasi |

ವಿಜಯಪುರ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರವು ಗೃಹಬಳಕೆಯ ಎಲ್‌ಪಿಜಿ ಸಂಪರ್ಕ ಗಳನ್ನು ಉಚಿತವಾಗಿ ಒದಗಿಸಿದೆ. 9 ಕೋಟಿ ಜನರು ಉಚಿತ ಎಲ್‌ಪಿಜಿ ಸಂಪರ್ಕ ಪಡೆದಿದ್ದಾರೆ. ಆದರೆ, ಗ್ಯಾಸ್‌ ಸ್ಟೋವ್‌ ಬಳ ಸುವ ಸುರಕ್ಷಿತ ಕ್ರಮಗಳ ಬಗ್ಗೆಯೂ ತಿಳಿಯಬೇಕು ಎಂದು ಸಂಗಂ ಗ್ಯಾಸ್‌ ಏಜೆನ್ಸಿ ವಿತರಕ ನಟರಾಜ್‌ ತಿಳಿಸಿದರು.

Advertisement

ಪಟ್ಟಣದ ವಿಜಯ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಎಲ್‌ಪಿಜಿ ಸುರಕ್ಷಿತ ಬಳಕೆಯ ಕಾರ್ಯಾ ಗಾರದಲ್ಲಿ ಮಾತನಾಡಿದ ಅವರು, ಗ್ಯಾಸ್‌ ಬಳಕೆ ಮತ್ತು ಉಳಿತಾಯ. ಸುರಕ್ಷಿತ ಕ್ರಮಗಳು, ಸಾಮಾನ್ಯವಾಗಿ ಮಾಡುವ ತಪ್ಪುಗಳು ಸರಿಪಡಿಸಿಕೊಳ್ಳುವ ವಿಧಾನಗಳನ್ನು ಪ್ರತಿಯೊಬ್ಬರ ಮಹಿಳೆ ಯರು ಕಲಿಯಬೇಕು.

ಗ್ಯಾಸ್‌ ಸಿಲಿಂಡರ್‌ನಲ್ಲಿ ತುಂಬಿಸುವ ಗ್ಯಾಸ್‌ಗೆ ರಾಸಾಯನಿಕವನ್ನು ಬಳಸಿ ವಾಸನೆ ಬರುವಾಗೆ ಮಾಡಿರುವುದು ಕೇವಲ ಭಾರತ ದೇಶದಲ್ಲಿ ಮಾತ್ರ. ಸಿಲಿಂಡರ್‌ ಲೀಕ್‌ ಆಗುವ ಸಂದರ್ಭದಲ್ಲಿ ವಾಸನೆ ಯಿಂದಲೇ ಜಾಗೃತರಾಗಿ ಮುನ್ನೆಚ್ಚರಿಕೆ ವಹಿಸಬಹುದು ಎಂದರು.

ಕಾರ್ಯಾಗಾರದಲ್ಲಿ ಮಹಿಳೆಯರು ಗ್ಯಾಸ್‌ ಬಳಕೆ ಬಗ್ಗೆ ತಮಗಿರುವ ಅನುಮಾನಗಳನ್ನು ಪರಿಹರಿಸಿಕೊಂಡರು. ವಿಜಯ ಎಂಟರ್‌ ಪ್ರೈಸಸ್‌ ಡೀಲರ್‌ ಮಮತಾ, ಸಂಗಂ ಗ್ಯಾಸ್‌ ಏಜೆನ್ಸಿ ಸಿಬ್ಬಂದಿ ರೇಣುಕಾರಾಧ್ಯ, ಮಾರೇಗೌಡ, ಶ್ವೇತಾ, ದಿಲೀಪ್‌ ಕುಮಾರ್‌, ವಿಜಯ ಪದವಿ ಪೂರ್ವ ಕಾಲೇಜಿನ ಉಪನ್ಯಾ ಸಕರು, ವಿದ್ಯಾರ್ಥಿನಿಯರು ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next