Advertisement
ಅಂತಿಮವಾಗಿ, ಇದನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದ್ದು, ‘ಮೇಕ್ ಇನ್ ಇಂಡಿಯಾ’ ಅಡಿ ರಕ್ಷಣಾ ಸಲಕರಣೆಗಳ ಉತ್ಪಾದನೆ ಸಂಬಂಧ ಇದೊಂದು ಮಹತ್ವದ ಅಂಶ ಎಂದು ತಜ್ಞರು ತಿಳಿಸಿದ್ದಾರೆ.
ಅರ್ಮೇನಿಯಾಕ್ಕಾಗಿ ತಯಾರಿಸಲಾಗುವ ರೇಡಾರ್ ವ್ಯವಸ್ಥೆಯುಳ್ಳ ಸಲಕರಣೆಗಳು ಬೆಂಗಳೂರಿನಲ್ಲೇ ಸಿದ್ಧಗೊಳ್ಳಲಿರುವುದು ಮತ್ತೂಂದು ವಿಶೇಷ. ಉದ್ಯಾನ ನಗರಿಯಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಪ್ರಯೋಗಾಲಯ ಹಾಗೂ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯಾದ, ಕೇಂದ್ರ ಸರಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಜಂಟಿಯಾಗಿ ಈ ಸಲಕರಣೆಗಳನ್ನು ಉತ್ಪಾದಿಸಲಿವೆ.