Advertisement
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ, ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣ ಮತ್ತು ರಾಜ್ಯದಲ್ಲಿ ತಯಾರಿಕಾ ಕ್ಷೇತ್ರದ ಸ್ವಾಯತ್ತತೆಯ ವೃದ್ಧಿ, ಮುಂದಿನ ಭವಿಷ್ಯದ ದೃಷ್ಟಿಯಿಂದ ಯುವಕರಿಗೆ ಉದ್ಯೋಗಗಳಲ್ಲಿ ಕೌಶಲ್ಯ ತರಬೇತಿ ನೀಡುವುದು ಸಮ್ಮೇಳನದ ಉದ್ದೇಶವಾಗಿದೆ ಎಂದು ಹೇಳಿದರು.
Related Articles
Advertisement
ಐಟಿ ಸಮ್ಮೇಳನ: ಭಾರತಕ್ಕೆ ತೈವಾನ್ ಆಹ್ವಾನಬೆಂಗಳೂರು: ತೈವಾನ್ ದೇಶದಲ್ಲಿ ಮೇ 30ರಿಂದ ಜೂನ್ 3ರವರೆಗೆ ನಡೆಯಲಿರುವ ಏಷ್ಯಾದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕುರಿತ ಸಮ್ಮೇಳನಕ್ಕೆ ಭಾರತದ ಪ್ರಮುಖ ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ಅಲ್ಲಿನ ವಿದೇಶಾಂಗ ವ್ಯಾಪಾರ ಅಭಿವೃದ್ಧಿ ಮಂಡಳಿ ಕಾರ್ಯ ನಿರ್ವಹಣಾ ನಿರ್ದೇಶಕ ಥಾಮಸ್ ಹುಂಗ್ ಹೇಳಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೈವಾನ್ ವಿದೇಶಾಂಗ ವ್ಯಾಪಾರ ಅಭಿವೃದ್ಧಿ ಮಂಡಳಿ ಹಾಗೂ ಭಾರತದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಂಸ್ಥೆ (ಐಸಿಟಿ) ಸಹಯೋಗದಲ್ಲಿ “ಕಂಪ್ಯೂಟೆಕ್ಸ್-2017′ ಹೆಸರಿನಲ್ಲಿ ಈ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು. ಬೆಂಗಳೂರಿನ ಐಟಿ ಹಬ್ ಅನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಮಟ್ಟದ ಈ ಐಟಿ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಬೇರೆ ದೇಶಕ್ಕೆ ಹೋಲಿಸಿದರೆ, ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಐಟಿ ಕಂಪನಿಗಳು ಹಾಗೂ ಕಂಪ್ಯೂಟರ್ ಪರಿಣಿತರು ಇದ್ದಾರೆ. ಕಳೆದ ವರ್ಷ ನಡೆದ ಕಂಪ್ಯೂಟೆಕ್ಸ್ ಸಮ್ಮೇಳನದಲ್ಲಿ ಸುಮಾರು 40,000ಕ್ಕೂ ಹೆಚ್ಚು ವಿದೇಶಿಯರು ಪಾಲ್ಗೊಂಡಿದ್ದು, ಆ ಪೈಕಿ ಹೆಚ್ಚಿನವರು ಭಾರತೀಯರಾಗಿದ್ದರು. ಹೀಗಾಗಿ, ಈ ಬಾರಿಯ ಸಮ್ಮೇಳನಕ್ಕೆ ಭಾರತದಿಂದ ಹೆಚ್ಚಿನ ಐಟಿ ಉದ್ದಿಮೆದಾರರನ್ನು ಆಕರ್ಷಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.ಅಮೆರಿಕ, ಡೆನ್ಮಾರ್ಕ್, ಕೊರಿಯಾ, ಚೀನಾ, ಜರ್ಮನಿ, ಇಂಡೋನೇಷಿಯಾ, ಜಪಾನ್, ಫ್ರಾನ್ಸ್ ಸೇರಿಂದಂತೆ ಹಲವು ದೇಶಗಳು ಈಗಾಗಲೇ ನೋಂದಾಯಿಸಿಕೊಂಡಿವೆ ಎಂದರು. ಬೆಂಗಳೂರಿನಲ್ಲಿ ವಿಶೇಷ ಆರ್ಥಿಕ ವಲಯ ಆರಂಭಿಸುವ ಕುರಿತು ಎಲ್ ಆ್ಯಂಡ್ ಟಿ ಸಂಸ್ಥೆಯಿಂದ ಎರಡು ಪ್ರಸ್ತಾವನೆ ಬಂದಿದೆ. ಒಟ್ಟು 2000 ಕೋಟಿ ರೂ. ಮೊತ್ತದ ಪ್ರಸ್ತಾವನೆಯಾಗಿದ್ದು, ಅವರದ್ದೇ 13 ಎಕರೆ ಜಮೀನಿನಲ್ಲಿ ಎಸ್‌ಇಝಡ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲ್ಲಿ ಐಟಿ ಪಾರ್ಕ್ ನಿರ್ಮಾಣ ಮಾಡಿದ್ದಲ್ಲಿ ಒಟ್ಟು 18,500 ಉದ್ಯೋಗ ಸೃಷ್ಟಿಯಾಗಲಿದೆ. ಅಲ್ಲದೇ, ನಗರದಲ್ಲಿ ಆ್ಯಪಲ್ ಕಂಪನಿ ಘಟಕ ನಿರ್ಮಾಣ ವಿಚಾರದ ಪ್ರಸ್ತಾವನೆ ಕೇಂದ್ರದ ಮುಂದಿದೆ. ಕಂಪನಿಯವರು ಕೆಲವು ರಿಯಾಯಿತಿಗಳನ್ನು ಕೇಳಿದ್ದು ಪರಿಶೀಲಿಸಲಾಗುತ್ತಿದೆ. ಸಂಸ್ಥೆಯು ಪೀಣ್ಯದ ಬಳಿ ಘಟಕ ನಿರ್ಮಾಣಕ್ಕೆ ಜಮೀನು ಕೇಳಿದೆ.
-ಆರ್.ವಿ.ದೇಶಪಾಂಡೆ, ಕೈಗಾರಿಕೆ ಸಚಿವ